newsfirstkannada.com

×

ಡಿಕೆಶಿ ಕಟ್ಟಿ ಹಾಕಲು ಮುಂದಾದ್ರಾ? 3 ಡಿಸಿಎಂ ಹುದ್ದೆಗೆ ಬೇಡಿಕೆ ಯಾಕೆ? ಈ ಬಗ್ಗೆ ಪರಮೇಶ್ವರ್​ ಏನಂದ್ರು?

Share :

Published September 18, 2023 at 6:32pm

    ಡಿ.ಕೆ ಶಿವಕುಮಾರ್​​​​ ಕಟ್ಟಿ ಹಾಕಲು ಮುಂದಾದ್ರಾ ಈ ಕಾಂಗ್ರೆಸ್ಸಿಗರು

    ಕೆ.ಎನ್​ ರಾಜಣ್ಣ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್​ ಏನಂದ್ರು?

    ಮತ್ತೆ ಮೂರು ಡಿಸಿಎಂ ಪೋಸ್ಟ್​ಗಳಿಗೆ ಡಿಮ್ಯಾಂಡ್​ಗೆ ಕಾರಣವೇನು?

ಮಂಡ್ಯ: ರಾಜ್ಯದಲ್ಲಿ 3 ಡಿಸಿಎಂ ಹುದ್ದೆ ಸೃಷ್ಟಿ ಮಾಡಿ ಎಂಬ ರಾಜಣ್ಣ ಹೇಳಿಕೆ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಗೃಹ ಸಚಿವ ಜಿ. ಪರಮೇಶ್ವರ್​ ಮಾತಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ರಾಜಣ್ಣ ಅಭಿಪ್ರಾಯ ಹೇಳಿದ್ದಾರೆ. ಅದ್ರಲ್ಲಿ ತಪ್ಪೇನು ಇಲ್ಲ ಎಂದಿದ್ದಾರೆ.

ಯಾವುದೇ ರಾಜಕೀಯ ಪಕ್ಷಕ್ಕಾಗಲಿ ಎಲ್ಲಾ ಸಮುದಾಯಗಳಿಗೂ ಸ್ಥಾನ ಕೊಟ್ರೆ ಶಕ್ತಿ. ಡಿಸಿಎಂ ಹುದ್ದೆ ನಮ್ಮ ಅಭಿಪ್ರಾಯಗಳ ಮೇಲೆ ನಡೆಯಲ್ಲ, ಬದಲಾಗಿ ಸಂಪೂರ್ಣ ಹೈಕಮಾಂಡ್ ​ನಿರ್ಧಾರದ ಮೇಲೆ ನಿಂತಿದೆ. ರಾಜಕೀಯ ನಿಂತ ನೀರಲ್ಲ, ಯಾವಾಗಲೂ ಬದಲಾಗುತ್ತಲೇ ಇರುತ್ತದೆ. ಈ ಹಿಂದೆ 3-4 ಡಿಸಿಎಂ ಹುದ್ದೆ ಸೃಷ್ಟಿ ಮಾಡಿದ್ದೆವು ಎಂದಿದ್ದಾರೆ.

ಒಬ್ಬರು ಡಿಸಿಎಂ ಎಂಬ ಅಭಿಪ್ರಾಯ ಇಲ್ಲ

ಯಾರೋ ಒಬ್ಬರು ಡಿಸಿಎಂ ಆಗಬೇಕೆಂದು ಅಭಿಪ್ರಾಯ ಬರ್ತಿಲ್ಲ. ಸಮುದಾಯಗಳಿಗೆ ಪಕ್ಷದ ಮೇಲೆ ನಂಬಿಕೆ ಹೆಚ್ಚಿಸಲು ಈ ಸಲಹೆಗಳು ಬರ್ತಿವೆ. ಸಿದ್ದರಾಮಯ್ಯ ಫುಲ್​ ಟೈಮ್​ ಮುಖ್ಯಮಂತ್ರಿ ಆಗೋದು ಹೈಕಮಾಂಡ್​​ ನಿರ್ಧಾರ. ಈ ಬಗ್ಗೆ ನಮಗೇನು ಐಡಿಯಾ ಇಲ್ಲ. ಸಿದ್ದರಾಮಯ್ಯ ಸಿಎಂ ಆದಾಗ ಎಲ್ಲೂ ಎರಡೂವರೆ ವರ್ಷ ಎಂದು ಹೇಳಿಲ್ಲ. ಡಿಸಿಎಂ ಹುದ್ದೆ ಸೃಷ್ಟಿಯಲ್ಲೂ ಹೈಕಮಾಂಡ್​ ಅವರದ್ದೇ ಅಂತಿಮ ನಿರ್ಣಯ ಎಂದು ಹೇಳಿದರು.

ಇನ್ನು, ಡಿಸಿಎಂ ಡಿ.ಕೆ ಶಿವಕುಮಾರ್​ ಅವರನ್ನು ಕಟ್ಟಿ ಹಾಕಲು ಈ ಮಾಸ್ಟರ್​ ಪ್ಲಾನ್​ ಮಾಡಲಾಗುತ್ತಿದೆ ಎಂದು ಮಾತುಗಳು ಕೇಳಿ ಬಂದಿವೆ. ಹಾಗಾಗಿ ಸಮುದಾಯಗಳಿಗೆ ಡಿಸಿಎಂ ಹುದ್ದೆ ನೀಡಬೇಕು ಅನ್ನೋ ಬೇಡಿಕೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಕೆಶಿ ಕಟ್ಟಿ ಹಾಕಲು ಮುಂದಾದ್ರಾ? 3 ಡಿಸಿಎಂ ಹುದ್ದೆಗೆ ಬೇಡಿಕೆ ಯಾಕೆ? ಈ ಬಗ್ಗೆ ಪರಮೇಶ್ವರ್​ ಏನಂದ್ರು?

https://newsfirstlive.com/wp-content/uploads/2023/07/Parameshwar-2.jpg

Load More