ಪರಮೇಶ್ವರ್ಗೆ ಸಿಎಂ ಆಗೋ ಅರ್ಹತೆ ಇದೆ ಎಂದ ಹರಿಪ್ರಸಾದ್
ಹರಿಪ್ರಸಾದ್ ಹೇಳಿಕೆಗೆ ರಾಜ್ಯ ಗೃಹ ಸಚಿವ ಪರಮೇಶ್ವರ್ ಹೀಗಂದ್ರು!
ನನ್ನ ಮೇಲೆ ಅಭಿಮಾನದಿಂದ ಹೇಳಿದ್ದಾರೆ ಎಂದಿದ್ಯಾಕೆ ಪರಮೇಶ್ವರ್?
ತುಮಕೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾಗಿದೆ. ಈಗಷ್ಟೇ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಾ ನೀಡಿದ ಭವಸೆಗಳನ್ನು ಈಡೇರಿಸಲು ಮುಂದಾಗಿದೆ. ಹೀಗಿರುವಾಗಲೇ ಕಾಂಗ್ರೆಸ್ ಅಸಮಾಧಾನದ ಹೊಗೆಯಾಡುತ್ತಿದೆ.
ಹೌದು, ತನ್ನನ್ನ ಮಂತ್ರಿ ಮಾಡದ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿ.ಕೆ ಹರಿಪ್ರಸಾದ್ ಆಕ್ರೋಶ ಹೊರಹಾಕಿದ್ದಾರೆ. ಜತೆಗೆ ಡಾ.ಜಿ ಪರಮೇಶ್ವರ್ಗೆ ಡಿಸಿಎಂ ಸ್ಥಾನ ನೀಡಬೇಕಿತ್ತು, ಇದು ನಾವು ತಲೆ ತಗ್ಗಿಸುವ ವಿಚಾರ ಎಂದಿದ್ದಾರೆ. ಪರಮೇಶ್ವರ್ ಸಿಎಂ ಆಗಲು ಅರ್ಹ ಇರೋ ವ್ಯಕ್ತಿ ಎಂದಿದ್ದಾರೆ. ಈ ಬಗ್ಗೆ ಸದ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ನಾನು ಸಿಎಂ ಆಗಬೇಕು ಎಂದಿದ್ದಕ್ಕೆ ಬಿ.ಕೆ ಹರಿಪ್ರಸಾದ್ಗೆ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಮೇಲಿನ ಅಭಿಮಾನಕ್ಕೆ ಹೇಗೆ ಎಂದಿದ್ದಾರೆ. ಬಹಳ ಮಂದಿ ನಾನು ಸಿಎಂ ಆಗಬೇಕು ಎಂದು ಆಸೆಪಟ್ಟಿದ್ದಾರೆ. ಇದು ಅವರ ಅಭಿಮಾನ. ಯಾರು ಸಿಎಂ ಆಗಬೇಕು ಎಂಬುದು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.
ಹೈಕಮಾಂಡ್ ತೀರ್ಮಾನದ ಮೇರೆಗೆ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲಾಗಿದೆ. ಡಿ.ಕೆ ಶಿವಕುಮಾರ್ ಅವರಿಗೆ ಡಿಸಿಎಂ ಪಟ್ಟ ನೀಡಲಾಗಿದೆ. ನನಗೆ ಮುಂದೆ ಸಿಎಂ ಆಗೋ ಅವಕಾಶ ಸಿಕ್ಕರೆ ನೋಡೋಣ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ