newsfirstkannada.com

ಹಿಂದೂ ಧರ್ಮ ಹುಟ್ಟಿದ್ದು ಯಾವಾಗ? ಯಾರು ಹುಟ್ಟಿಸಿದ್ರು?- ಗೃಹ ಸಚಿವ ಪರಮೇಶ್ವರ್​​

Share :

05-09-2023

    ಹಿಂದೂ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ಕೊಟ್ಟ ಗೃಹ ಸಚಿವ

    ಗೃಹ ಸಚಿವ ಡಾ.ಜಿ ಪರಮೇಶ್ವರ್ ಕೊಟ್ಟ ವಿವಾದಾತ್ಮಕ ಹೇಳಿಕೆಯೇನು?

    ಹಿಂದೂ ಧರ್ಮ ಹುಟ್ಟಿದ್ದು ಯಾವಾಗ? ಯಾರು ಹುಟ್ಟಿಸಿದ್ರು? ಎಂದು ಪ್ರಶ್ನೆ

ತುಮಕೂರು: ಹಿಂದೂ ಧರ್ಮ ಹುಟ್ಟಿದ್ದು ಯಾವಾಗ? ಯಾರು ಹುಟ್ಟಿಸಿದ್ರು? ಅನ್ನೋದೆ ಪ್ರಶ್ನೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಂದು ತುಮಕೂರಿನ ಕೊರಟಗೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್​​, ಪ್ರಪಂಚದಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಆದರೆ, ಹಿಂದೂ ಧರ್ಮ ಹುಟ್ಟಿದ್ದು ಯಾವಾಗ? ಹುಟ್ಟಿಸಿದ್ದು ಯಾರು? ಅನ್ನೋದೆ ಪ್ರಶ್ನೆ ಎಂದರು.

ಇನ್ನೂ, ಈ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಬೌದ್ಧ ಧರ್ಮ ಮತ್ತು ಜೈನ ಧರ್ಮ ಎರಡು ಹುಟ್ಟಿದ್ದು ಭಾರತದಲ್ಲೇ. ಹೊರಗಡೆಯಿಂದ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಬಂದಿವೆ. ಎಲ್ಲಾ ಧರ್ಮಗಳು ಸಾರಾಂಶ ಕೂಡ ಒಂದೇ. ಇಡೀ ಮನುಕುಲಕ್ಕೆ ಒಳ್ಳೆಯದಾಗಬೇಕು ಎಂಬುದು ಎಂದರು.

ಇತ್ತೀಚೆಗೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​​ ಪುತ್ರ ಮಿನಿಸ್ಟರ್​​ ಉದಯನಿಧಿ ಸ್ಟಾಲಿನ್​​​, ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ. ಹೀಗಾಗಿ ಇದು ನಿರ್ಮೂಲನೆ ಆಗಬೇಕು ಎಂದಿದ್ದರು. ಈ ಬೆನ್ನಲ್ಲೇ ಬಹುಭಾಷಾ ನಟ ಪ್ರಕಾಶ್​ ರಾಜ್​ ಕೂಡ ಹಿಂದೂ ಧರ್ಮದ ಬಗ್ಗೆ ಮಾತಾಡಿದ್ದರು. ಈಗ ಡಾ.ಜಿ ಪರಮೇಶ್ವರ್​​ ಅವರ ಸರದಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿಂದೂ ಧರ್ಮ ಹುಟ್ಟಿದ್ದು ಯಾವಾಗ? ಯಾರು ಹುಟ್ಟಿಸಿದ್ರು?- ಗೃಹ ಸಚಿವ ಪರಮೇಶ್ವರ್​​

https://newsfirstlive.com/wp-content/uploads/2023/08/G-Parameshwar.jpg

Load More