newsfirstkannada.com

ಅಂತರ್ಜಾತಿ ವಿವಾಹಕ್ಕೆ ಪೋಷಕರೇ ವಿಲನ್​.. 4 ದಿನಗಳ ಹಿಂದೆ ಮದುವೆಯಾದವರು ಈಗ ಏನಾದ್ರು ಗೊತ್ತಾ?

Share :

07-08-2023

    ಭಾನುಶ್ರೀ-ಮಧುಸೂದನ್ ಪ್ರೀತಿಗೆ ಜಾತಿ ಅಡ್ಡಿ!

    ಗುಡಿಬಂಡೆ ಪೊಲೀಸ್ ಸ್ಟೇಷನ್ ಎದುರು ಹೈಡ್ರಾಮಾ!

    ಯುವಕ ಕಂಗಾಲು.. ಮೂಕಪ್ರೇಕ್ಷಕರಾದ ಪೊಲೀಸರು

ಪ್ರೀತಿ ಒಂದು ಅದ್ಭುತ ಭಾವನೆ. ಪ್ರೀತಿ ಮನಸುಗಳ ಪಿಸುಮಾತು, ಪ್ರೀತಿ ಮಧುರ ಭಾವಗಳನ್ನು ಸೃಜಿಸುವ ಅನನ್ಯ ಭಾವ. ಇಂತಹ ಪ್ರೀತಿಗೆ ಅನಾದಿ ಕಾಲದಿಂದಲೂ ವಿರೋಧ ಕೇಳಿ ಬರ್ತಾನೆ ಇದೆ. ಚಿಕ್ಕಬಳ್ಳಾಪುರದಲ್ಲಿ ಅಂತರ್ಜಾತಿ ವಿವಾಹಕ್ಕೆ ಯುವತಿ ಪೋಷಕರು ಪೊಲೀಸ್ ಠಾಣೆ ಮುಂದೆಯೇ ಹೈಡ್ರಾಮಾ ಮಾಡಿದ್ದಾರೆ.

ಪೊಲೀಸ್ ಠಾಣೆ ಬಳಿ ಸೇರಿರುವ ಜನ, ಪೊಲೀಸರ ಜೊತೆ ವಾಗ್ವಾದ.  ಸ್ಟೇಷನ್​ ಒಳಗೆ ನುಗ್ಗಲು ಯತ್ನ. ಇಬ್ಬರು ಯುವಕ-ಯುವತಿಯ ಅಂತರ್ಜಾತಿ ವಿವಾಹಕ್ಕೆ ವಿರೋಧ. ಪೊಲೀಸ್ ಸ್ಟೇಷನ್ ಎದುರು ಹೈಡ್ರಾಮಾ. ಈ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ.

ವಿದ್ಯಾರ್ಥಿಗಳ ಅಂತರ್ಜಾತಿ ಪ್ರೀತಿಗೆ ಪೋಷಕರ ಅಡ್ಡಿ, ಹೈಡ್ರಾಮಾ!

ಜಾತಿ, ಧರ್ಮ, ಬಣ್ಣ, ಬಡವ- ಶ್ರೀಮಂತ ಎಲ್ಲವನ್ನೂ ಮೀರಿ ಹುಟ್ಟೋದು ಪ್ರೀತಿ. ಅಂದಹಾಗೆ ಈ ಫೋಟೋದಲ್ಲಿ ಕಾಣಿಸ್ತಿರುವ ಜೋಡಿ ಹೆಸರು ಭಾನುಶ್ರೀ ಹಾಗೂ ಮಧುಸೂದನ್ ಅಂತ. ಗಡಿಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಇಬ್ಬರ ಪ್ರೀತಿಗೆ ಪೋಷಕರು ವಿಲನ್ ಆಗಿಬಿಟ್ಟಿದ್ದಾರೆ.

ಕಾಲೇಜಿನಲ್ಲಿ ಅರಳಿದ ಪ್ರೀತಿ..!

ಜೆ.ಎಸ್​.ಭಾನುಶ್ರೀ ಗುಡಿಬಂಡೆ ತಾಲೂಕಿನ ಜಂಬಿಗೇಮರದಹಳ್ಳಿ ನಿವಾಸಿಯಾಗಿದ್ದು ಮಧುಸೂದನ್ ಚಿಕ್ಕಬಳ್ಳಾಪುರದ ಕಾಮಶೆಟ್ಟಿಹಳ್ಳಿ ನಿವಾಸಿಯಾಗಿದ್ದಾರೆ. ಈ ಇಬ್ಬರು ಚಿಕ್ಕಬಳ್ಳಾಪುರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿರುವ ವಿದ್ಯಾರ್ಥಿಗಳು. ಇಬ್ಬರಿಗೂ ಕಾಲೇಜಿನಲ್ಲಿ ಓದುತ್ತಿರುವಾಗಲೇ ಸ್ನೇಹ ಆಗಿ ಆ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರು ಅನ್ಯಜಾತಿಗೆ ಸೇರಿದ್ದು ಇಬ್ಬರ ಪ್ರೀತಿಗೆ ಪೋಷಕರ ವಿರೋಧ ವ್ಯಕ್ತವಾಗಿತ್ತು.

ದೇಗುಲದಲ್ಲಿ ಸರಳ ವಿವಾಹವಾದ ಭಾನುಶ್ರೀ-ಮಧುಸೂದನ್!

ಯಾವಾಗ ಮನೆಯವರಿಂದ ಪ್ರೀತಿಗೆ ವಿರೋಧ ವ್ಯಕ್ತವಾಯ್ತೋ ಭಾನುಶ್ರೀ ಹಾಗೂ ಮಧುಸೂದನ್ ಕಳೆದ 4 ದಿನಗಳ ಹಿಂದೆ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ. ಮಗಳು ಅನ್ಯ ಜಾತಿಗೆ ಸೇರಿದ ಯುವಕನನ್ನ ಮದುವೆಯಾಗಿರುವ ವಿಷಯ ತಿಳಿದ ಭಾನುಶ್ರೀ ಪೋಷಕರು ಕೆರಳಿ ಕೆಂಡವಾಗಿದ್ದಾರೆ.

ಠಾಣೆ ಮೆಟ್ಟಿಲೇರಿದ ಭಾನುಶ್ರೀ-ಮಧುಸೂದನ್ ಪ್ರೀತಿ!

ಪೋಷಕರ ವಿರೋಧದ ನಡುವೆ ಭಾನುಶ್ರೀ-ಮಧುಸೂದನ್ ಪ್ರೀತಿಗೆ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲೂ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಇಬ್ಬರು ಗುಡಿಬಂಡೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಿನ್ನೆ ಭಾನುಶ್ರೀಯನ್ನ ಸ್ಟೇಷನ್​ಗೆ ಕರೆಸಿಕೊಂಡ ಪೊಲೀಸರು ಯುವತಿ ಪೋಷಕರನ್ನು ಕರೆಸಿ ಸಂಧಾನಕ್ಕೆ ಯತ್ನಿಸಿದ್ದಾರೆ. ಆದ್ರೆ ಠಾಣೆ ಎದುರು ಸೇರಿದ ಯುವತಿ ಸಂಬಂಧಿಕರು ಠಾಣೆ ಎದುರೇ ಕೂಗಾಟ, ರಂಪಾಟ ನಡೆಸಿ ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ.. ಭಾನುಶ್ರೀಯನ್ನು ನಮ್ಮಜೊತೆ ಕಳುಹಿಸಬೇಕು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಠಾಣೆ ಎದುರು ಹೈಡ್ರಾಮವೇ ನಡೆದು ಹೋಗಿದೆ.

ಮಧುಸೂದನ್ ಜೊತೆ ಬದುಕಲು ಇಚ್ಛಿಸಿದ ಭಾನುಶ್ರೀ!

ಇನ್ನು ಭಾನುಶ್ರೀ ಸಂಬಂಧಿಕರ ಆಕ್ರೋಶದ ಬಳಿಕ ಗುಡಿಬಂಡೆ ಪೊಲೀಸರು ಎರಡೂ ಕಡೆಯವರ ಎದುರು ನಿಲ್ಲಿಸಿ ನಿನ್ನ ನಿರ್ಧಾರ ಏನು ಅಂತ ಕೇಳಿದ್ದಾರೆ.. ಆಗ ಭಾನುಶ್ರೀ ನಾನು ಮಧುಸೂದನ್ ಜೊತೆ ಹೋಗ್ತೀನಿ ಅಂತ ಹೇಳಿದ್ದಾಳೆ.

ಪಟ್ಟು ಬಿಡದೇ ಯುವತಿಯನ್ನು ಕರೆದೊಯ್ದ ಪೋಷಕರು!

ಆದ್ರೆ ಠಾಣೆ ಎದುರು ಭಾರಿ ಹೈಡ್ರಾಮಾ ನಡೆಸಿದ ಭಾನುಶ್ರೀ ಪೋಷಕರು ನಮ್ಮ ಮಗಳಿಗೆ ಈ ಮದುವೆ ಇಷ್ಟ ಇಲ್ಲ. ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಅಂತ ಆರೋಪಿಸಿದ್ದಾರೆ. ಕೊನೆಗೂ ಪೊಲೀಸರನ್ನು ಒಪ್ಪಿಸಿ 5 ದಿನಗಳ ಮಟ್ಟಿಗೆ ತಮ್ಮ ಮನೆಗೆ ಕರೆದೊಯ್ದಿದ್ದಾರೆ.. ಅಂತರ್ಜಾತಿ ವಿವಾಹ ಆಗಿದ್ದಾಳೆ ಅಂತ ಹೀಗೆ ಮಾಡಿದ್ದಾರೆ, ನಮಗೆ ಅನ್ಯಾಯ ಆಗಿದೆ ಅಂತ ಮಧುಸೂದನ್ ಅಳಲು ತೋಡಿಕೊಂಡಿದ್ದಾನೆ..

ಅನ್ಯಜಾತಿ ಅಂತ ವಿರೋಧ

ಹದಿಹರೆಯದಲ್ಲಿ ಇದೆಲ್ಲಾ ಸಹಜ, ಆದ್ರೆ ಯುವಕ-ಯುವತಿ ಇಬ್ಬರೂ ಪ್ರೌಢರಾಗಿದ್ದು ಓದುವ ವಯಸ್ಸಿನ ಜೊತೆಗೆ ತಮ್ಮ ಮುಂದಿನ ಭವಿಷ್ಯ ಹಾಗೂ ಹೆತ್ತವರ ಮನಸ್ಥಿತಿಯನ್ನು ಅರ್ಥೈಸಿಕೊಂಡು ನಡೆಯಬೇಕಿದೆ. ಅದೇನೇ ಇರಲಿ ಪ್ರೀತಿಸಿದ ಯುವಕನ ಜೊತೆ ಹೋಗ್ತೀನಿ ಅಂದ್ರೂ ಬಲವಂತವಾಗಿ ಭಾನುಶ್ರೀಯನ್ನು ಪೋಷಕರು ಮನೆಗೆ ಕರೆದೊಯ್ದಿದ್ದಾರೆ. ಎರಡೂ ಕುಟುಂಬಗಳ ಹಗ್ಗಜಗ್ಗಾಟದ ನಡುವೆ ಪೊಲೀಸರು ಮೂಕಪ್ರೇಕ್ಷಕರಾಗಿದ್ದಾರೆ. ಪ್ರೀತಿ ಬಡವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂತರ್ಜಾತಿ ವಿವಾಹಕ್ಕೆ ಪೋಷಕರೇ ವಿಲನ್​.. 4 ದಿನಗಳ ಹಿಂದೆ ಮದುವೆಯಾದವರು ಈಗ ಏನಾದ್ರು ಗೊತ್ತಾ?

https://newsfirstlive.com/wp-content/uploads/2023/08/Chikabbalapura.jpg

Load More