ಎಲ್ಲಾ ಪೋಷಕರು ಓದಲೇಬೇಕಾದ ಸ್ಟೋರಿ ಇದು..!
ದಯವಿಟ್ಟು ಶಾಲೆಗೆ ಹೋಗೋ ಮಕ್ಕಳತ್ತ ಗಮನ ಕೊಡಿ
ಯಾವುದೇ ಕಾರಣಕ್ಕೂ ಮಕ್ಕಳ ಬಗ್ಗೆ ನಿರ್ಲಕ್ಷ್ಯ ಬೇಡ..!
ಬೆಂಗಳೂರು: ಈಕೆ ಜಸ್ಸಿಕಾ, ಬಹಳ ಮುಗ್ಧೆ. ವಯಸ್ಸು ಕೇವಲ 14 ವರ್ಷ. ಹತ್ತನೇ ತರಗತಿಯ ವಿದ್ಯಾರ್ಥಿನಿ. ಈಕೆ ಅರ್ಪಾಟ್ಮೆಂಟ್ನ 12ನೇ ಮಹಡಿಯಿಂದ ಬಿದ್ದು ಏಕಾಏಕಿ ಸಾವನ್ನಪ್ಪಿದ್ದಾಳೆ.
ನಿತ್ಯ ಯೂನಿಫಾರ್ಮ್ ತೊಟ್ಟು ಆಕೆ ಹೋಗ್ತಿದ್ದಿದ್ದು ಎಲ್ಲಿಗೆ..?
ಹೌದು, ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇ ಇದು. ಆಕೆ ಶಾಲೆಗೆ ಹೋಗಿಲ್ಲ ಅನ್ನೋ ಕಾರಣಕ್ಕೆ ಎಲ್ಲಿ ತನ್ನ ತಂದೆ ತಾಯಿ ಬೈತಾರೆ ಅನ್ನೋ ಭಯಕ್ಕೆ ಸಾವನ್ನಪ್ಪಿದ್ದಾಳೆ ಅನ್ನೋದು ಮೇಲ್ನೋಟಕ್ಕೆ ಅನಿಸ್ತಿದೆ. ಜಸ್ಸಿಕಾ ನಿತ್ಯ ಯೂನಿಫಾರ್ಮ್ ತೊಟ್ಟು ಶಾಲೆಗೆಂದು ಹೊರಡುತ್ತಿದ್ದಳು. ಆಕೆ ತಾಯಿ ಕೂಡ ಟೀಚರ್ ಆಗಿದ್ದರಿಂದ ಅದೇ ಸಮಯಕ್ಕೆ ಮನೆ ಬಿಡ್ತಾಯಿದ್ರು. ತಂದೆ ಕೂಡ ಬ್ಯಾಡ್ಮಿಂಟನ್ ಆಡೋಕೆ ಹೊರಡ್ತಿದ್ರು. ಆದ್ರೆ, ಜಸ್ಸಿಕಾ ಮಾತ್ರ ಶಾಲೆಗೆ ಹೋಗ್ತಾ ಇರಲಿಲ್ಲ. ಆಕೆ ಅರ್ಪಾಟ್ಮೆಂಟ್ನಲ್ಲೇ ಉಳಿದು ನಾಯಿ ಮರಿ ಜೊತೆ ನಿತ್ಯ ಆಟವಾಡುತ್ತಿದ್ದಳು.
ಮಂಗಳವಾರ ಕೂಡ ಜಸ್ಸಿಕಾ ಎಂದಿನಂತೆ ಯೂನಿಫಾರ್ಮ್ ತೊಟ್ಟು ಹೊರಟಿದ್ದಾಳೆ. ಆದ್ರೆ ಬಳಿಕ ಶಾಲೆಯವರು ಆಕೆ ಪೋಷಕರಿಗೆ ಕರೆ ಮಾಡಿದ್ದಾರೆ. ನಿಮ್ಮ ಮಗಳು ಶಾಲೆಗೆ ಬರ್ತಿಲ್ಲ ಯಾಕೆ ಅಂತಾ ಕೇಳಿದ್ದಾರೆ. ಇದನ್ನ ಕೇಳಿದ ಪೋಷಕರು ಒಂದು ಕ್ಷಣ ಶಾಕ್ ಆಗಿದ್ದಾರೆ. ಜಸ್ಸಿಕಾ ಬಳಿಯೂ ಫೋನ್ ಇದ್ದ ಕಾರಣ ಆಕೆಗೆ ಕರೆ ಮಾಡಿದ್ದಾರೆ. ಎಲ್ಲೀದ್ದೀಯಾ ಮಗಳೇ? ಅಂತಾ ಕೇಳಿದ್ದಾರೆ. ಅದಕ್ಕೆ ಜಸ್ಸಿಕಾ ಕೊಟ್ಟ ಉತ್ತರ ಏನ್ ಗೊತ್ತಾ, ನಾನ್ ಸ್ಕೂಲ್ನಲ್ಲಿದ್ದೀನಿ ಎಂಬುದು. ಇದನ್ನೇ ನಂಬಿದ ಪೋಷಕರು, ನೀನು ಶಾಲೆಯಲ್ಲೇ ಇರಮ್ಮ. ನಾವು ಶಾಲೆಗೆ ಬರ್ತೀವಿ, ಮ್ಯಾನೆಜ್ಮೆಂಟ್ ಕಡೆಯವರು ಕರೆ ಮಾಡಿ ಸುಳ್ಳು ಹೇಳ್ತಾಯಿದ್ದಾರೆ ಅಂತಾ ಹೇಳ್ತಾರೆ.
ಇಷ್ಟೇ ಆಗಿದ್ದು! ಅಪ್ಪ-ಅಮ್ಮನಿಗೆ ನಿಜ ಗೊತ್ತಾಗಿಯೋಯ್ತು, ನನ್ನ ಮಾನ ಮರ್ಯಾದೆ ಹೋಗುತ್ತೆ ಅಂತಾ ಹೆದರಿ ಏಕಾಏಕಿ ಅರ್ಪಾಟ್ಮೆಂಟ್ನಿಂದ ಬಿದ್ದು ಸಾವನ್ನಪ್ಪಿದ್ದಾಳೆ.
ಪೋಷಕರಿಗೆ ಹೆದರಿ ಉಸಿರು ಚೆಲ್ಲಿದಳು!
ಒಟ್ಟಾರೆ, ಅಪ್ಪ- ಅಮ್ಮನ ಬ್ಯೂಸಿ ಜೀವನದ ಮಧ್ಯೆ ಆಕೆ ಮೇಲೆ ಗಮನ ಹರಿಸೋಕೆ ಸಾಧ್ಯವಾಗಿಲ್ಲ. ಅತ್ತ, ಆ ಮುಗ್ಧೆ ತಾನು ಶಾಲೆಗೆ ಹೋಗಿಲ್ಲ ಅನ್ನೋ ವಿಚಾರ ಗೊತ್ತಾಗೋಯ್ತು ಅಂತ ಹೆದರಿ ಉಸಿರು ಚೆಲ್ಲಿದ್ದಾಳೆ. ಅದೇನೆ ಇರ್ಲಿ, ತಂದೆ ತಾಯಿ ಒಮ್ಮೆ ತಮ್ಮ ಮಕ್ಕಳು ಏನ್ ಮಾಡ್ತಿದ್ದಾರೆ ಅಂತಾ ಗಮಿನಿಸೋದು ಉತ್ತಮ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ