ಮಕ್ಕಳು ಮಲಗುವಾಗ ಸೊಳ್ಳೆ ಕಡಿಯದಂತೆ ಎಚ್ಚರ
ಪೋಷಕರು ಮಕ್ಕಳ ಬಗ್ಗೆ ಗಮನ ಹರಿಸಲೇಬೇಕು..!
ಮೈ ತುಂಬ ಕವರ್ ಆಗೋ ಬಟ್ಟೆ ತೊಡಿಸಲೇಬೇಕು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಂಘೀ ದಂಡೆಯಾತ್ರೆ ಹೊರಟಿದೆ. ಎಲ್ಲೆಲ್ಲೂ ಹಾವಳಿ ಇಟ್ಟಿದ್ದ ಸೊಳ್ಳೆರಾಯ ಇದೀಗ ಮಕ್ಕಳಿಗೆ ಮುತ್ತಿಕ್ಕುವ ನೆಪದಲ್ಲಿ ಬಂದು ಸುಳಿವು ಕೊಡದೆ ತನ್ನ ಬಲೆಗೆ ಬೀಳಿಸ್ತಿದ್ದಾನೆ.
ಹೌದು, ಕಳೆದೆರಡು ವಾರದಲ್ಲಿ ಡೆಂಘೀ ಮತ್ತು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗ್ತಿರುವ ಮಕ್ಕಳ ಸಂಖ್ಯೆಯಲ್ಲಿ 50% ಏರಿಕೆಯಾಗಿದೆ. ಜೂನ್ ಮತ್ತು ಜುಲೈ ತಿಂಗಳಿಗೆ ಹೋಲಿಸಿದರೆ ಕಳೆದ ಎರಡು ವಾರಗಳಲ್ಲಿ ಶೇಕಡಾ 50 ರಷ್ಟು ಏರಿಕೆಯಾಗಿದ್ದು, ಅದರಲ್ಲೂ ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೇ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗ್ತಿದ್ದಾರೆ.
ಡೆಂಘೀ ಮಾರಿ ಬರ್ತಾಳೆ ಎಚ್ಚರ!
ಡೆಂಘೀ ದಂಡೆಯಾತ್ರೆ
ರಾಜ್ಯದ್ಯಂತ ಡೆಂಘೀ ದಂಡಯಾತ್ರೆ ಹೊರಟಿದ್ದು, 2022ಕ್ಕೆ ಹೋಲಿಕೆ ಮಾಡಿದ್ರೆ, 2023ರಲ್ಲಿ 15-30% ಏರಿಕೆಯಾಗಿದೆ. 2022ರಲ್ಲಿ ಜನವರಿಯಿಂದ ಆಗಸ್ಟ್ವರೆಗೆ 4507 ಡೆಂಘೀ ಕೇಸ್ ಪತ್ತೆಯಾಗಿತ್ತು. 2023ರಲ್ಲಿ 5526 ಜನರಲ್ಲಿ ಕೇಸ್ ಡೆಂಘೀ ಕೇಸ್ ಪತ್ತೆಯಾಗಿದೆ. ಬೆಂಗಳೂರಲ್ಲಿ ಬರೋಬ್ಬರಿ 2669 ಕೇಸ್ ಕಾಣಿಸಿಕೊಂಡಿದೆ.
ಮೈಸೂರಲ್ಲಿ 353, ವಿಜಯಪುರ 146, ಶಿವಮೊಗ್ಗ 155 ಜನರಲ್ಲಿ ಡೆಂಘಿ ಕಾಣಿಸಿಕೊಂಡ್ರೆ, ದಕ್ಷಿಣ ಕನ್ನಡ 110, ಉಡುಪಿ 126, ಬೆಳಗಾವಿ 135 ಜನರನ್ನ ತನ್ನ ಬಲೆಗೆ ಬೀಳಿಸಿದೆ. ಒಟ್ಟಾರೆ ಸೊಳ್ಳೆರಾಯನ ವ್ಯೂಹದಿಂದ ತಪ್ಪಿಸಿಕೊಳ್ಳಲು ಸುತ್ತ ಮುತ್ತಲ ಪರಿಸರವನ್ನ ಸ್ವಚ್ಛವಾಗಿರಿಸೋದು ಒಳ್ಳೆಯದು ಎನ್ನುತ್ತಿದ್ದಾರೆ ತಜ್ಞರು.