ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ
ಸತತ ಎರಡನೇ ಬಾರಿಗೆ ದೇಶಕ್ಕೆ ಚಿನ್ನ ತಂದ್ಕೊಟ್ಟ ಸುಮಿತ್ ಆಂಟಿಲ್
ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಸುಮಿತ್ ಆಂಟಿಲ್ ಯಾರು?
ಭಾರತದ ಜಾವೆಲಿನ್ ತಾರೆ ಸುಮಿತ್ ಆಂಟಿಲ್ (Sumit Antil) ಪ್ಯಾರಾಲಿಂಪಿಕ್ಸ್‌ನಲ್ಲಿ (Paralympics) ಸತತ ಎರಡನೇ ಬಾರಿಗೆ ಚಿನ್ನ ಗೆದ್ದು ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದಿದ್ದ ಸುಮಿತ್, ಪ್ಯಾರಿಸ್ನಲ್ಲೂ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ಸುಮಿತ್ ಟೋಕಿಯೊದಲ್ಲಿ 68.55 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನ ಗೆದ್ದುಕೊಂಡಿದ್ದರು. ನಿನ್ನೆ ನಡೆದ ಕ್ರೀಡಾಕೂಟದಲ್ಲಿ ಸುಮಿತ್, ಮೊದಲ ಪ್ರಯತ್ನದಲ್ಲೇ ಈ ದಾಖಲೆಯನ್ನು ಮುರಿದರು. ಮೊದಲ ಬಾರಿಗೆ 69.11 ಮೀಟರ್ ದೂರ ಎಸೆದರೆ, ಎರಡನೇ ಬಾರಿಗೆ ಅತ್ಯಧಿಕ ಅಂದರೆ 70.59 ಮೀಟರ್ ದೂರ ಎಸೆದು ಇತಿಹಾಸ ನಿರ್ಮಿಸಿದರು. ಅವರ ಮೂರನೇ ಎಸೆತ 66.66 ಮೀಟರ್ ದೂರ ಹೋಗಿ ಬಿದ್ದಿತ್ತು. ನಾಲ್ಕನೇ ಎಸೆತವನ್ನು ಅಸಿಂಧು ಎಂದು ಘೋಷಿಸಲಾಯಿತು. ಸುಮಿತ್ ಐದನೇ ಎಸೆತದಲ್ಲಿ 69.04 ಮೀ ದೂರ ಎಸೆದು ಅದ್ಭುತ ಪ್ರದರ್ಶನ ನೀಡಿದರು.
ಇದನ್ನೂ ಓದಿ:ನಾನು DG ಅಲ್ಲ, ಆದರೆ.. ದರ್ಶನ್ ಬಗ್ಗೆ ಮತ್ತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್..!
7 ಜೂನ್ 1998 ರಂದು ಜನಿಸಿದ ಸುಮಿತ್ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ತಂದೆ ರಾಮಕುಮಾರ್ ವಾಯುಪಡೆಯಲ್ಲಿದ್ದರು. ಅವರು ಅನಾರೋಗ್ಯದ ಕಾರಣ ನಿಧನರಾದರು. ಸುಮಿತ್ಗೆ ಮೂವರು ಸಹೋದರಿಯರು. ತಂದೆಯ ನಿಧನದ ನಂತರ ಸುಮಿತ್ ಸಹೋದರಿಯರು, ತಾಯಿಯ ಆಶ್ರಯದಲ್ಲಿ ದುಃಖವನ್ನು ಹಂಚಿಕೊಂಡು ಬೆಳೆದರು. ತಂದೆಯನ್ನು ಕಳೆದುಕೊಂಡ ನಂತರ ಸುಮಿತ್ ಮತ್ತೊಂದು ಆಘಾತ ಎದುರಿಸಿದರು. 12ನೇ ತರಗತಿಯಲ್ಲಿದ್ದಾಗ ರಸ್ತೆ ಅಪಘಾತಕ್ಕೀಡಾಗಿದ್ದರು. ಸುಮಿತ್‌ನ ಪ್ರಾಣ ಉಳಿಯಿತು, ಆದರೆ ಕಾಲು ಕಳೆದುಕೊಂಡರು. ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದಾಗ ಬೈಕ್‌ಗೆ ಟ್ರ್ಯಾಕ್ಟರ್ ಟ್ರಾಲಿ ಡಿಕ್ಕಿ ಹೊಡೆದು ಅಪಘಾತ ನಡೆದು ಹೋಗಿತ್ತು.
ಜಗತ್ತಿನಲ್ಲಿ ಹೆಸರು ಮಾಡಿದರು
ತಂದೆಯನ್ನು ಕಳೆದುಕೊಂಡರೂ, ಕಾಲು ಕಳೆದುಕೊಂಡರೂ ಸುಮಿತ್ ಧೃತಿಗೆಡಲಿಲ್ಲ. ಸ್ನೇಹಿತರು, ಸಂಬಂಧಿಕರ ಬೆಂಬಲ ಪಡೆದರು. ಸುಮಿತ್ಗೆ ಕ್ರೀಡೆ ಮೇಲಿನ ಆಸಕ್ತಿ ಹಾಗೂ ಅವರ ಅದ್ಭುತ ಪ್ರದರ್ಶನದ ಪರಿಣಾಮ Sports Authority of India ಸೆಂಟರ್ ಸೇರಿಕೊಂಡರು. ಅಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ನವಲ್ ಸಿಂಗ್ರಿಂದ ಜಾವೆಲಿನ್ ಎಸೆತ ಕಲಿತರು. 2018 ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಅಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದರು. 2020 ಟೋಕಿಯೋ ಮತ್ತು 2024 ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ.
ಇದನ್ನೂ ಓದಿ:ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಪದಕ ಗೆದ್ದ 7 ತಿಂಗಳ ತುಂಬು ಗರ್ಭಿಣಿ; ಯಾರಿವರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ