/newsfirstlive-kannada/media/post_attachments/wp-content/uploads/2024/08/NEERAJ-CHOPRA-1-3.jpg)
ಪ್ಯಾರಿಸ್ ಒಲಿಂಪಿಕ್ಸ್ -2024 ಮುಕ್ತಾಯವಾಗಿದೆ. ಈ ಕ್ರೀಡಾ ಹಬ್ಬದಲ್ಲಿ ಭಾರತಕ್ಕೆ ಮಿಶ್ರ ಅನುಭ. 5 ಕಂಚು ಹಾಗೂ 1 ಬೆಳ್ಳಿ ಸೇರಿದಂತೆ ಒಟ್ಟು 6 ಪದಕಗಳು ಭಾರತದ ಖಾತೆಗೆ ಬಂದಿವೆ. ಈ ಬಾರಿ ಭಾರತಕ್ಕೆ ಚಿನ್ನದ ಪದಕ ಸಿಗಲಿಲ್ಲ. ಹಾಗಾದರೆ ಹೆಚ್ಚು ಪದಕಗಳನ್ನು ಗೆದ್ದ ದೇಶ ಯಾವುದು? ಪದಕಗಳ ಬೇಟೆಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಅನ್ನೋ ವಿವರ ಇಲ್ಲಿದೆ.
US ಭರ್ಜರಿ ಬೇಟೆ
ಯುನೈಟೆಡ್ ಸ್ಟೇಟ್ಸ್ ಹೆಚ್ಚು ಪದಕಗಳನ್ನು ಗೆದ್ದಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ 40 ಚಿನ್ನ, 44 ಬೆಳ್ಳಿ ಮತ್ತು 42 ಕಂಚು ಸೇರಿದಂತೆ ಒಟ್ಟು 126 ಪದಕಗಳನ್ನು ಗೆದ್ದಿದೆ. ಅದೇ ಪಟ್ಟಿಯಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ. 40 ಚಿನ್ನ, 27 ಬೆಳ್ಳಿ ಹಾಗೂ 24 ಕಂಚು ಸೇರಿ ಒಟ್ಟು 91 ಪದಕಗಳು ಚೀನಾ ಖಾತೆಗೆ ಬಂದಿವೆ. ನಂತರದ ಸ್ಥಾನದಲ್ಲಿ ಜಪಾನ್, ಆಸ್ಟ್ರೇಲಿಯಾ ಇದೆ.
/newsfirstlive-kannada/media/post_attachments/wp-content/uploads/2024/08/VOLIMPiCS.jpg)
ಪ್ಯಾರಿಸ್ ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಭಾರತ 6 ಪದಕಗಳೊಂದಿಗೆ 71ನೇ ಸ್ಥಾನದಲ್ಲಿದೆ. ಒಂದೇ ಒಂದು ಪದಕ ಗೆದ್ದಿರುವ ಪಾಕಿಸ್ತಾನ ಪದಕ ಪಟ್ಟಿಯಲ್ಲಿ ಭಾರತಕ್ಕಿಂತ ಮೇಲೇರಿದೆ. ಪಾಕಿಸ್ತಾನವು ಪ್ಯಾರಿಸ್‌ನಲ್ಲಿ ಕೇವಲ ಒಂದು ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಅದರೊಂದಿಗೆ ಪದಕ ಪಟ್ಟಿಯಲ್ಲಿ 62 ನೇ ಸ್ಥಾನದಲ್ಲಿ ಉಳಿದಿದೆ. ಪದಕ ಪಟ್ಟಿಯಲ್ಲಿ ಹೆಚ್ಚು ಚಿನ್ನ, ಬೆಳ್ಳಿ ಮತ್ತು ಕಂಚು ಗೆಲ್ಲುವ ಮೂಲಕ ದೇಶದ ಸ್ಥಾನವನ್ನು ನಿರ್ಧರಿಸಲಾಗುತ್ತದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಒಂದು ಚಿನ್ನ ಸೇರಿ ಒಟ್ಟು 7 ಪದಕ ಗೆದ್ದಿದೆ. ಒಲಿಂಪಿಕ್ಸ್​​ನಲ್ಲಿ ಭಾರತ ಇದುವರೆಗೆ ಗೆದ್ದ ಹೆಚ್ಚು ಪದಕ ಇದೇ ಆಗಿದೆ. ಈ ಬಾರಿ ಕೇವಲ 6 ಪದಕಗಳಿಗೆ ತೃಪ್ತಿಪಡಬೇಕಾಯಿತು. ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ನಿರ್ಧಾರದ ನಂತರ ಭಾರತದ ಖಾತೆಗೆ 7ನೇ ಪದಕ ಸೇರ್ಪಡೆ ಆಗಬಹುದು. 100 ಗ್ರಾಂ ಅಧಿಕ ತೂಕದ ಕಾರಣ ವಿನೇಶ್ ಫೈನಲ್‌ಗೂ ಮುನ್ನ ಅನರ್ಹಗೊಂಡಿದ್ದರು. ಇದಾದ ನಂತರ ಬೆಳ್ಳಿ ಪದಕಕ್ಕಾಗಿ ಕೋರ್ಟ್​ನಲ್ಲಿ ಮನವಿ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us