newsfirstkannada.com

ಇನ್ಮುಂದೆ ಪಾರ್ಕಿಂಗ್​​ ಲಾಟ್​ ‘ಮ್ಯಾನೇಜ್ಮೆಂಟ್​​’ದೇ ವಾಹನಗಳ ಸಂಪೂರ್ಣ ಜವಾಬ್ದಾರಿ- ಕೋರ್ಟ್​​​

Share :

01-06-2023

    ಪೇಯ್ಡ್​​ ಪಾರ್ಕಿಂಗ್​​ ಮಾಡೋ ವಾಹನ ಮಾಲೀಕರಿಗೆ ಗುಡ್​ನ್ಯೂಸ್​​

    'ಪಾರ್ಕಿಂಗ್​​ ಲಾಟ್​ ಮ್ಯಾನೇಜ್ಮೆಂಟ್​​ದೇ ವಾಹನಗಳ ಜವಾಬ್ದಾರಿ'

    ಬೆಂಗಳೂರು ಗ್ರಾಹಕ ನ್ಯಾಯಾಲಯದಿಂದ ಮಹತ್ವದ ಆದೇಶ

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಕ್ರೈಮ್​​ ರೇಟ್​​ ಹೆಚ್ಚಾಗುತ್ತಲೇ ಇದೆ. ನಗರ ವ್ಯಾಪ್ತಿಯಲ್ಲಿ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳ ಸಂಖ್ಯೆ ಗಮನಿಸಿದರೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್​ ಇಲಾಖೆ ವಿಫಲವಾಗಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿವೆ. ಈ ಹಿಂದೆ ಮನೆ ಮುಂದೆ ಪಾರ್ಕ್​​​​ ಮಾಡುತ್ತಿದ್ದ ಬೈಕ್​ ಕಳವು ಮಾಡುತ್ತಿದ್ದ ಖತರ್ನಾಕ್​​ ಕಳ್ಳರು ಈಗ ತಮ್ಮ ಕಳ್ಳತನದ ಶೈಲಿಯನ್ನೇ ಬದಲಿಸಿದ್ದಾರೆ. ಈಗ ಹೈ ಸೆಕ್ಯೂರಿಟಿ ಇರೋ ಪಾರ್ಕಿಂಗ್​​ ಲಾಟ್​​​ನಲ್ಲೇ ಬೈಕ್​ ಕಳ್ಳತನ ದಂಧೆಗೆ ಇಳಿದಿದ್ದಾರೆ. ಹೀಗಾಗಿ ಇನ್ನು ಮುಂದೆ ಹಣ ಪಡೆದು ಪಾರ್ಕಿಂಗ್​​ ಮಾಡಿಸಿಕೊಳ್ಳೋ ಮ್ಯಾನೇಜ್​ಮೆಂಟ್ ಅವರದ್ದೇ ವಾಹನಗಳ ಸುರಕ್ಷತೆ ಮಾಡುವ ಸಂಪೂರ್ಣ ಜವಾಬ್ದಾರಿ ಎಂದು ಬೆಂಗಳೂರು ಗ್ರಾಹಕ ನ್ಯಾಯಾಲಯ ಆದೇಶಿಸಿದೆ.

ನಾಲ್ಕು ವರ್ಷಗಳ ಹಿಂದೆ 2019 ಆಗಸ್ಟ್​​ ತಿಂಗಳಿನಲ್ಲಿ HSR ಲೇಔಟ್​​ ಮೂಲದ ನಾರಾಯಣಸ್ವಾಮಿ ಎಂಬುವರು ಬೆಳ್ಳಂದೂರಿನ ಸೆಂಟ್ರಲ್​ ಸ್ಪಿರಿಟ್​​ ಮಾಲ್​ಗೆ ಸಿನಿಮಾ ನೋಡಲು KTM ಬೈಕ್​ನಲ್ಲಿ ಬಂದಿದ್ದರು. ಪೇಯ್ಡ್​​ ಪಾರ್ಕಿಂಗ್​​ ಲಾಟ್​​ನಲ್ಲಿ ಪಾರ್ಕ್​ ಮಾಡಿದ್ದರು. ಸಿನಿಮಾ ನೋಡಿ ಬಂದ ಕೂಡಲೇ ಬೈಕ್​ ಪಾರ್ಕಿಂಗ್​ ಲಾಟ್​​ನಲ್ಲಿ ಇರಲಿಲ್ಲ. ಈ ಬಗ್ಗೆ ಪಾರ್ಕಿಂಗ್​​ ಲಾಟ್​ನಲ್ಲಿದ್ದ ಸಿಬ್ಬಂದಿಯನ್ನು ಕೇಳಿದ್ರೆ, ನಿಮ್ಮ ಬೈಕ್​ ಕಳುವಿಗೆ ನಾವು ಜವಾಬ್ದಾರರಲ್ಲ ಎಂದಿದ್ದರು. ಇದರಿಂದ ಶಾಕ್​ ಆದ ಬೈಕ್​ ಮಾಲೀಕ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು. ಇಷ್ಟು ದಿನ ಕಳೆದರೂ ಈ ಬೈಕ್​ ಇನ್ನೂ ಸಿಕ್ಕಿಲ್ಲ. ಹೀಗಾಗಿ ಬೈಕ್​​ ಮಾಲೀಕ ಬೆಂಗಳೂರು ಗ್ರಾಹಕ ಕೋರ್ಟ್​​ ಮೆಟ್ಟಿಲೇರಿದ್ದಾರೆ.

ಸದ್ಯ ನಾರಾಯಣಸ್ವಾಮಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​​, 1 ಲಕ್ಷಕ್ಕೂ ಹೆಚ್ಚು ದಂಡ ಹಾಕಿದೆ. ಬೈಕ್​ ಮಾಲೀಕನಿಗೆ 1,06,288 ರೂ., ಕೋರ್ಟ್​ ಸಮಯ ಹಾಳು ಮಾಡಿದ್ದಕ್ಕೆ 5,000 ರೂ., ನಿರ್ಲಕ್ಷ್ಯ ತೋರಿದ್ದಕ್ಕಾಗಿ 10,000 ದಂಡ ಪಾವತಿಸಿ ಎಂದು ಪಾರ್ಕಿಂಗ್​ ಲಾಟ್​​ ಮ್ಯಾನೇಜ್​ಮೆಂಟ್​ಗೆ ಆದೇಶಿಸಿದೆ. ಮುಂದಿನ 45 ದಿನಗಳಲ್ಲಿ ಈ ದಂಡ ಪಾವತಿಸಬೇಕು ಎಂದು ಆದೇಶಿಸಿದ್ದಲ್ಲದೇ ಇನ್ನು ಮುಂದೆ ಪೇಯ್ಡ್​​ ಪಾರ್ಕಿಂಗ್​ ಲಾಟ್​​ ಮ್ಯಾನೇಜ್ಮೆಂಟ್​​ದೇ ವೆಹಿಕಲ್​ ಸೇಫಟಿ ಜವಾಬ್ದಾರಿ ಎಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ಮುಂದೆ ಪಾರ್ಕಿಂಗ್​​ ಲಾಟ್​ ‘ಮ್ಯಾನೇಜ್ಮೆಂಟ್​​’ದೇ ವಾಹನಗಳ ಸಂಪೂರ್ಣ ಜವಾಬ್ದಾರಿ- ಕೋರ್ಟ್​​​

https://newsfirstlive.com/wp-content/uploads/2023/06/Consumer-Court.jpg

Load More