newsfirstkannada.com

Parliament Monsoon Session: ಬರೋಬ್ಬರಿ 31 ಮಸೂದೆ ಪಾಸ್​ ಮಾಡಲು ಕೇಂದ್ರ ತಯಾರಿ.. ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳ ಅಸ್ತ್ರಗಳು ಏನೇನು ಗೊತ್ತಾ..?

Share :

20-07-2023

    ಇಂದಿನಿಂದ ಸಂಸತ್​​ನ ಮುಂಗಾರು ಅಧಿವೇಶನ ಆರಂಭ

    ಕಲಾಪದಲ್ಲಿ ಏನೆಲ್ಲಾ ವಿಷಯಗಳು ಚರ್ಚೆಗೆ ಬರುತ್ತವೆ..?

    ದೇಶದಲ್ಲಿ ಏಕರೂಪ ನಾಗರಿಕೆ ಸಂಹಿತೆ ಜಾರಿ ಗ್ಯಾರಂಟಿನಾ?

ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಆಗಸ್ಟ್ 11ರವರೆಗೆ ನಡೆಯಲಿದೆ. ಈ ಬಾರಿಯ ಅಧಿವೇಶನದಲ್ಲಿ ಒಟ್ಟು 31 ಬಿಲ್ ಮಂಡನೆ ಮಾಡಲು ಮೋದಿ ಸರ್ಕಾರ ನಿರ್ಧಾರ ಮಾಡಿದೆ.

ಯುಸಿಸಿ (ಏಕರೂಪ ನಾಗರಿಕೆ ಸಂಹಿತೆ) ಮಸೂದೆ ಕೂಡ ಮಂಡನೆಯಾಗಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಇತ್ತ ಸರ್ಕಾರವನ್ನು ಇಕ್ಕಟ್ಟಿಗೆ ತಳ್ಳಲು ವಿಪಕ್ಷಗಳು ತಯಾರಿ ನಡೆಸಿವೆ. ಮಣಿಪುರ ಗಲಭೆ, ರಾಹುಲ್ ಗಾಂಧಿ ಅನರ್ಹತೆ, ದೆಹಲಿ ಸುಗ್ರಿವಾಜ್ಞೆ, ಪ್ರವಾಹ, ಬಾಲಕೋಟ್ ರೈಲು ದುರಂತ, ಬೆಲೆ ಏರಿಕೆ, ನಿರುದ್ಯೋಗ, ಫೆಡರಲ್ ರಚನೆಯ ಮೇಲಿನ ದಾಳಿ ಮತ್ತು ಭಾರತ-ಚೀನಾ ಗಡಿಯಲ್ಲಿನ ಪರಿಸ್ಥಿತಿ ವಿಚಾರಗಳನ್ನು ಇಟ್ಟುಕೊಂಡು ವಿಪಕ್ಷ ಕೇಂದ್ರ ಸರ್ಕಾರವನ್ನು ಕಟ್ಟಿಹಾಕಲು ಪ್ಲಾನ್ ಮಾಡಿದೆ.

ರಾಜ್ಯಸಭೆಯಲ್ಲಿ ಅಡ್ಡಿ 

ಇನ್ನು ಕೇಂದ್ರ ಸರ್ಕಾರ ಬಂಗಾಳದ ಪಂಚಾಯತ್ ಚುನಾವಣೆಯಲ್ಲಿ ನಡೆದ ಗಲಾಟೆ ಬಗ್ಗೆಯೂ ಪ್ರಸ್ತಾಪ ಮಾಡಲು ನಿರ್ಧರಿಸಿದೆ. ಇನ್ನು, ಕೇಂದ್ರ ಸರ್ಕಾರ ತಯಾರಿ ಮಾಡಿಕೊಂಡಿರುವ 31 ಮುಸೂದೆಗಳು ಲೋಕಸಭೆಯಲ್ಲಿ ಸರಾಗವಾಗಿ ಪಾಸ್ ಆಗಲಿವೆ. ಆದರೆ ಅವುಗಳು ರಾಜ್ಯಸಭೆಯಲ್ಲಿ ಪಾಸ್ ಆಗೋದು ಕಷ್ಟ. ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿ ಅಡ್ಡಿಪಡಿಸಬಹುದು.

ಯಾಕಂದ್ರೆ ರಾಜ್ಯಸಭೆಯಲ್ಲಿ ಒಟ್ಟು 238 ಸದಸ್ಯರಿದ್ದು, ಬಿಜೆಪಿ, ಮಿತ್ರಪಕ್ಷಗಳು ಹಾಗೂ ನಾಮ ನಿರ್ದೇಶಿತ ಸದಸ್ಯರು ಸೇರಿ ಒಟ್ಟು 111 ಮಂದಿ ಇದ್ದಾರೆ. ಪ್ರತಿಪಕ್ಷಗಳು 106 ಸದಸ್ಯರ ಬಲವನ್ನು ಹೊಂದಿದೆ. ಇನ್ನು, ಬಿಜೆಡಿ, ವೈಎಸ್‌ಆರ್‌ಸಿಪಿ, ಬಿಎಸ್‌ಪಿ, ಟಿಡಿಪಿ ಮತ್ತು ಜೆಡಿಎಸ್ ಯಾರಿಗೆ ಬೆಂಬಲ ನೀಡುತ್ತವೆ ಅನ್ನೋದರ ಮೇಲೆ 31 ಮಸೂದೆಗಳ ಭವಿಷ್ಯ ನಿಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Parliament Monsoon Session: ಬರೋಬ್ಬರಿ 31 ಮಸೂದೆ ಪಾಸ್​ ಮಾಡಲು ಕೇಂದ್ರ ತಯಾರಿ.. ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳ ಅಸ್ತ್ರಗಳು ಏನೇನು ಗೊತ್ತಾ..?

https://newsfirstlive.com/wp-content/uploads/2023/07/AMIT.jpg

Load More