ಅನೇಕ ಐತಿಹಾಸಿಕ ನಿರ್ಣಯಗಳನ್ನು ಈ ಸಂಸತ್ನಲ್ಲಿ ತೆಗೆದುಕೊಳ್ಳಲಾಗಿದೆ
75 ವರ್ಷದ ಸಾಧನೆ ಅಂದರೆ ಸಾಮಾನ್ಯ ವ್ಯಕ್ತಿಗೂ ಸಂಸತ್ ಮೇಲೆ ನಂಬಿಕೆ
ಅನೇಕ ಐತಿಹಾಸಿಕ ನಿರ್ಣಯಗಳನ್ನ ಈ ಸಂಸತ್ನಲ್ಲಿ ತೆಗೆದುಕೊಳ್ಳಲಾಗಿದೆ
ನವದೆಹಲಿ: ಇಂದಿನಿಂದ 5 ದಿನಗಳ ಕಾಲ ಲೋಕಸಭೆಯಲ್ಲಿ ವಿಶೇಷ ಅಧಿವೇಶನ ಆರಂಭವಾಗಿದ್ದು ಹಳೆಯ ಸಂಸತ್ ಭವನಕ್ಕೆ ವಿದಾಯ ಹೇಳಿ ಹೊಸ ಸಂಸತ್ ಭವನಕ್ಕೆ ಎಲ್ಲರೂ ಹೋಗೋಣ ಎಂದು ಅಧಿವೇಶನದಲ್ಲಿ ಪ್ರಧಾನಿ ಮೋದಿ ಕರೆ ನೀಡಿದರು.
ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಒಕ್ಕೂಟ ವ್ಯವಸ್ಥೆಯು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಹಳೆಯ ಸಂಸತ್ಗೆ ವಿದಾಯ ಹೇಳುತ್ತಿರುವುದು ದುಃಖದ ಸಂಗತಿಯಾಗಿದೆ. ಇಲ್ಲಿ ಅನೇಕ ವರ್ಷಗಳ ಕಾಲ ಬಹಳಷ್ಟು ಅಭಿವೃದ್ಧಿ ಕೆಲಸಗಳಿಗೆ ಮುನ್ನುಡಿ ಬರೆಯಲಾಗಿದೆ. ಇಲ್ಲಿ ತೆಗೆದುಕೊಂಡ ನಿರ್ಣಯಗಳು ದೇಶದ ಮೇಲೆ ನೇರವಾಗಿ ಪರಿಣಾಮ ಬೀರಿವೆ. ಸಾಕಷ್ಟು ವಾದ-ವಿವಾದಗಳು ನಡೆದಿವೆ. ಸಮಯಕ್ಕೆ ತಕ್ಕಂತೆ ಕೆಲವೊಂದು ಬದಲಾವಣೆಗೆ ಹೊಂದಿಕೊಳ್ಳಬೇಕು. ಅದರಂತೆ ನಾವು ನಾಳೆ ಗಣೇಶ ಚತುರ್ಥಿಯಂದು ಹೊಸ ಸಂಸತ್ ಭವನವನ್ನು ಪ್ರವೇಶ ಮಾಡೋಣ ಎಂದು ಮೋದಿ ಹೇಳಿದರು.
ನಾನು ಕನಸಿನಲ್ಲೂ ಈ ಸಂಸತ್ ಭವನ ಪ್ರವೇಶಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಮೊದಲ ಬಾರಿಗೆ ಸಂಸತ್ ಭವನಕ್ಕೆ ಬರುವಾಗಿ ಶಿರಬಾಗಿ ನಮಸ್ಕಾರ ಮಾಡಿದ್ದೇನೆ. ಒಳ ಬರುತ್ತಿದ್ದಂತೆ ನಾನು ಭಾವುಕನಾಗಿದ್ದೆ. ಆ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಸಂಸತ್ ಭವನದ ಜೊತೆಗಿನ ತಮ್ಮ ಹಳೆಯ ನೆನಪಗಳನ್ನು ಪ್ರಧಾನಿ ಮೋದಿಯವರು ಮೆಲುಕು ಹಾಕಿದರು. ಕಠಿಣ ಸಮಯದಲ್ಲಿ ಕೆಲವರು ಕೆಲಸ ನಿರ್ವಹಿಸಿದ್ದಾರೆ. ಇಳಿ ವಯಸ್ಸಿನಲ್ಲೂ ಕೆಲವರು ಕ್ಷೇತ್ರವನ್ನು ನಿರ್ವಹಿಸಿ ಯಶಸ್ಸು ಕಂಡಿದ್ದಾರೆ. ಈಗಲೂ ಮಾಜಿ ಸಂಸದರು ಸಂಸತ್ ಭೇಟಿಕೊಟ್ಟು ಹೋಗುತ್ತಿರುತ್ತಾರೆ. ಇದು ದೇಶದ ಶಕ್ತಿ ಎಂದು ಮೋದಿ ಹೇಳಿದ್ದಾರೆ.
ಸಭೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಜವಾರ್ ಲಾಲ್ ನೆಹರು, ಇಂದಿರಾ ಗಾಂಧಿ, ಭಗತ್ ಸಿಂಗ್, ಲಾಲ್ ಬಹೂದ್ದೂರ್ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿ, ಚರಣ್ ಸಿಂಗ್, ನರಸಿಂಹರಾವ್ ಸೇರಿದಂತೆ ಅತ್ಯಂತ ಗಣ್ಯ ವ್ಯಕ್ತಿಗಳು ಈ ಸಂಸತ್ ಭವನದ ನೇತೃತ್ವವನ್ನು ವಹಿಸಿ ದೇಶದ ಅಭಿವೃದ್ಧಿಗೆ ಕಾರಣವಾಗಿದ್ದಾರೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ