ಲೋಕಸಭಾ ಸ್ಥಾನದಿಂದ ವಜಾಗೊಳಿಸಲು ಸಂಸತ್ ಎಥಿಕ್ಸ್ ಸಮಿತಿ ಒಪ್ಪಿಗೆ
ಮುಂದಿನ ಚಳಿಗಾಲದ ಲೋಕಸಭಾ ಅಧಿವೇಶನದಲ್ಲಿ ಮಂಡನೆ ಸಾಧ್ಯತೆ
ಮಹುವಾ ಮೊಯಿತ್ರಾ ವಜಾಗೊಳಿಸುವ ನಿರ್ಧಾರಕ್ಕೆ 4 ಸದಸ್ಯರಿಂದ ವಿರೋಧ
ನವದೆಹಲಿ: ಲಂಚ ಪಡೆದು ಪ್ರಶ್ನೆ ಕೇಳಿದ ಆರೋಪದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಗಿಫ್ಟ್ ಪಡೆದ ಪ್ರಕರಣದಲ್ಲಿ ಸಂಸತ್ ಎಥಿಕ್ಸ್ ಸಮಿತಿ ವಿಚಾರಣೆ ನಡೆಸಿದ್ದು ವರದಿಯನ್ನು ಸಿದ್ಧಪಡಿಸಿದೆ. ಸಂಸತ್ ಎಥಿಕ್ಸ್ ಸಮಿತಿಯ ವರದಿಯಲ್ಲಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ವಜಾಗೊಳಿಸಲು ಶಿಫಾರಸು ಮಾಡಲಾಗಿದೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭಾ ಸ್ಥಾನದಿಂದ ವಜಾಗೊಳಿಸಲು ಸಂಸತ್ ಎಥಿಕ್ಸ್ ಸಮಿತಿಯ ವರದಿ ಒಪ್ಪಿಗೆ ನೀಡಿದೆ. ಎಥಿಕ್ಸ್ ಸಮಿತಿಯ ಈ ಶಿಫಾರಸು ವರದಿ ಲೋಕಸಭೆಯಲ್ಲಿ ಮಂಡನೆ ಆಗುವುದು ಬಾಕಿ ಉಳಿದಿದೆ. ಸಮಿತಿಯು ತನ್ನ ವರದಿಯನ್ನು ಲೋಕಸಭಾ ಸ್ಪೀಕರ್ ಅವರಿಗೆ ನೀಡಲಿದ್ದು, ಮುಂದಿನ ಚಳಿಗಾಲದ ಲೋಕಸಭಾ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.
ಸಂಸತ್ ಎಥಿಕ್ಸ್ ಸಮಿತಿಯಲ್ಲಿ ಮಹುವಾ ಮೊಯಿತ್ರಾ ಅವರನ್ನು ವಜಾಗೊಳಿಸುವ ನಿರ್ಧಾರಕ್ಕೆ 6 ಸದಸ್ಯರು ಬೆಂಬಲ ಸೂಚಿಸಿದ್ದಾರೆ. ನಾಲ್ವರು ಸದಸ್ಯರು ಸಮಿತಿಯ ಈ ಶಿಫಾರಸನ್ನು ವಿರೋಧಿಸಿದ್ದಾರೆ. ಈ ಎಥಿಕ್ಸ್ ಸಮಿತಿಯ ವರದಿಯನ್ನು ಲೋಕಸಭೆಯಲ್ಲಿ ಮಂಡನೆ ಮಾಡಲು ಪ್ಲಾನ್ ಮಾಡಲಾಗಿದೆ. ಲೋಕಸಭೆ ಒಪ್ಪಿಗೆ ನೀಡಿದರೆ ಮಹುವಾ ಮೋಯಿತ್ರಾ ಅವರ ಲೋಕಸಭಾ ಸದಸ್ಯತ್ವ ವಜಾಗೊಳ್ಳಲಿದೆ. ಹೀಗಾಗಿ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ವಜಾಗೊಳಿಸೋ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ