/newsfirstlive-kannada/media/post_attachments/wp-content/uploads/2024/10/TATA.jpg)
ಮುಂಬೈ: ಖ್ಯಾತ ಉದ್ಯಮಿ, ಟಾಟಾ ಸನ್ಸ್​​ನ ಮುಖ್ಯಸ್ಥ ರತನ್ ಟಾಟಾ (86) ಅವರು ನಿಧನ ಹೊಂದಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ. ಸದ್ಯ ಇವರ ಅಂತ್ಯಕ್ರಿಯೆ ಹೇಗೆ ಮಾಡುತ್ತಾರೆ ಎಂಬುದರ ಕುರಿತು ಯಾವುದೇ ಮಾಹಿತಿ ತಿಳಿದು ಬಂದಿಲ್ಲ.
ರತನ್ ಟಾಟಾ ಅವರ ಪಾರ್ಥಿವ ಶರೀರವನ್ನು ಮುಂಬೈಯಲ್ಲಿನ ಕೋಲ್ಬಾದ ಅವರ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿಂದ ಅವರ ಪಾರ್ಥಿವ ಶರೀರವನ್ನು ವರ್ಲಿ ಚಿತಾಗಾರಕ್ಕೆ ಸ್ಥಳಾಂತರಿಸಲಾಗುತ್ತದೆ. ರತನ್ ಟಾಟಾ ಅವರನ್ನು ಪಾರ್ಸಿ ಪದ್ಧತಿ ಪ್ರಕಾರ ದಹನ ಮಾಡಲಾಗುತ್ತದೆಯೇ, ಇಲ್ಲವೇ ಎಂಬುದರ ಕುರಿತು ಯಾವುದೇ ನಿಖರ ಮಾಹಿತಿ ಇಲ್ಲ. ಪಾರ್ಸಿ ಸಮುದಾಯದ ಸಂಪ್ರದಾಯಗಳು ಹಿಂದು, ಮುಸ್ಲಿಂ, ಕ್ರೈಸ್ತರಿಗಿಂತ ವಿಭಿನ್ನವಾಗಿರುತ್ತವೆ.
ಇದನ್ನೂ ಓದಿ: ರತನ್ ಟಾಟಾಗೆ ಸಂತಾಪ ಸೂಚಿಸಿದ ಕ್ರಿಕೆಟರ್ಸ್​.. ಸೂರ್ಯಕುಮಾರ್, ಶಮಿ, ಸೇಹ್ವಾಗ್ ಹೇಳಿದ್ದು ಏನು?
/newsfirstlive-kannada/media/post_attachments/wp-content/uploads/2024/10/RATAN-TATA-3-1.jpg)
ಪಾರ್ಸಿಗಳು ಹಿಂದು, ಮುಸ್ಲಿಮರಂತೆ ಶವಸಂಸ್ಕಾರ ಮಾಡಲ್ಲ. ಇವರ ಈ ಸಂಪ್ರದಾಯ 3 ಸಾವಿರ ವರ್ಷಗಳಷ್ಟು ಹಳೆಯದಾಗಿದೆ. ಇವರು ಸ್ಮಶಾನವನ್ನು ದಖ್ಮಾ ಅಥವಾ ಟವರ್ ಆಫ್ ಸೈಲೆನ್ಸ್ ಎನ್ನುತ್ತಾರೆ. ಈ ಜನಾಂಗದಲ್ಲಿ ಯಾರದರೂ ಸಾವನ್ನಪ್ಪಿದರೆ ಭೌತಿಕ ದೇಹ ಶುದ್ಧೀಕರಿಸುವ ಪ್ರಕ್ರಿಯೆ ಮಾಡುತ್ತಾರೆ. ನಂತರ, ಅವರ ದೇಹವನ್ನು ಟವರ್ ಆಫ್ ಸೈಲೆನ್ಸ್​​ನ ತೆರೆದ ಸ್ಥಳದಲ್ಲಿ ಬಿಡಲಾಗುತ್ತದೆ. ಪಾರ್ಸಿಯ ಅಂತ್ಯಕ್ರಿಯೆ ಪ್ರಕ್ರಿಯೆಯನ್ನ ದೋಖ್ಮೆನಾಶಿ ಎನ್ನುವರು.
ಪಾರ್ಸಿ ಜನಾಂಗದಲ್ಲಿ ಮೃತ ದೇಹಗಳನ್ನು ಆಕಾಶದಲ್ಲಿ ಹೂಳಲಾಗುತ್ತದೆ (Sky Burials). ಅಂದರೆ ಮೃತದೇಹವನ್ನ ಸೂರ್ಯರಶ್ಮಿಗೆ ಹಾಗೂ ಮಾಂಸಾಹಾರಿ ಪಕ್ಷಿಗಳಿಗಾಗಿ ಆಹಾರವಾಗಲಿ ಎಂದು ಬಯಲಿನಲ್ಲಿಡುತ್ತಾರೆ. ಇದರ ಅರ್ಥ ಮನುಷ್ಯ ಮರಣದ ನಂತರವೂ ಪರೋಪಕಾರ ಆಗಿರಲಿ ಎನ್ನುವುದು ಆಗಿದೆ. ಈ ಪಾರ್ಸಿ ಸಮುದಾಯದಂತೆ ಬೌದ್ಧರು ಕೂಡ ಮೃತದೇಹಗಳನ್ನ ರಣಹದ್ದುಗಳಿಗೆ ಆಹಾರವಾಗಿ ನೀಡುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us