newsfirstkannada.com

​ಪಾರ್ಥೀವ್​ ಪಟೇಲ್​ ಆ ಒಂದು ಮಾತಿಗೆ ‘ನೀನಿನ್ನು ಮಗು’ ಎಂದಿದ್ದ ಖ್ಯಾತ ಕ್ರಿಕೆಟಿಗ! ಯಾಕೆ ಗೊತ್ತಾ?

Share :

11-07-2023

  ಅಂದು ವಿಕೆಟ್ ಕೀಪಿಂಗ್ ಮಾಡ್ತಿದ್ದ 19 ವರ್ಷದ ಪಾರ್ಥಿವ್

  19 ವರ್ಷದ ಪಾರ್ಥಿವ್ ಮಾತಿನಿಂದ ಕೆರಳಿದ್ದ ಆ ಕ್ರಿಕೆಟಿಗ

  ನಾನು​​ 18 ವರ್ಷದ ಹಿಂದೆ ಡೆಬ್ಯೂ ಮಾಡಿದಾಗ ನೀನಿನ್ನು ಮಗು

ಪಾರ್ಥಿವ್ ಪಟೇಲ್, ಸಾಮಾನ್ಯವಾಗಿ ತಾವಾಯ್ತು. ತಮ್ಮ ಕೆಲ್ಸವಾಯ್ತು ಅನ್ನೋ ಮನುಷ್ಯ. ಆದರೆ, 19 ವರ್ಷದಲ್ಲಿದ್ದಾಗ ಪಾರ್ಥಿವ್ ಮಾಡಿದ್ದ ಒಂದು ಕೆಲ್ಸದಿಂದ ಹಿರಿಯ ಆಟಗಾರರೆಲ್ಲಾ ಡ್ರೆಸ್ಸಿಂಗ್ ರೂಮ್​​ನಲ್ಲಿ ಮುಗಿಬಿದ್ದಿದ್ರಂತೆ. ಅದು ಯಾಕೆ ಗೊತ್ತಾ? ಈ ಸ್ಟೋರಿ ಓದಿ

17 ವರ್ಷಕ್ಕೆ ಟೀಮ್ ಇಂಡಿಯಾಗೆ ಕಾಲಿಟ್ಟ ಯಂಗೆಸ್ಟ್ ಕ್ರಿಕೆಟರ್ ಪಾರ್ಥೀವ್ ಪಟೇಲ್. ಸೌರವ್​ ಗಂಗೂಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾಗೆ ಡೆಬ್ಯೂ ಮಾಡಿದ್ದ ಪಾರ್ಥಿವ್​, 2004ರ ಸಿಡ್ನಿ ಟೆಸ್ಟ್​ನಲ್ಲಿ ಆಸ್ಟ್ರೇಲಿಯನ್ ದಿಗ್ಗಜ ಸ್ಟೀವ್ ವ್ಹಾರನ್ನೇ ಸ್ಲೆಡ್ಜ್ ಮಾಡಿದ್ರು. ಅಂದಹಾಗೆಯೇ 2004ರ ಸಿಡ್ನಿ ಟೆಸ್ಟ್, ಸ್ಟೀವ್​​ ವ್ಹಾರ ಕೊನೆ ಪಂದ್ಯವಾಗಿತ್ತು. ಆ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ 80 ರನ್​​ಗಳ ಅಮೋಘ ಇನ್ನಿಂಗ್ಸ್ ಆಡಿದ್ದ ಸ್ಟೀವ್ ವ್ಹಾ, ಆಸಿಸ್​​ ತಂಡವನ್ನ ಸೋಲಿನಿಂದ ಪಾರು ಮಾಡಿದ್ರು.

ಈ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡ್ತಿದ್ದ 19 ವರ್ಷದ ಪಾರ್ಥಿವ್​, ‘ಕಮಾನ್ ಸ್ಟೀವ್, ಕಮಾನ್ ಸ್ಟೀವ್.. ಕೊನೆದಾಗಿ ನಿನ್ನ ಪಾಪ್ಯುಲರ್ ಸ್ಲಾಗ್ ಸ್ವೀಪ್ ಶಾಟ್ ಆಡು’ ಅಂತ ಕಾಲೆಳೆದಿದ್ರಂತೆ. 19 ವರ್ಷದ ಪಾರ್ಥಿವ್ ಮಾತಿನಿಂದ ಕೆರಳಿದ್ದ ಸ್ಟೀವ್ ವಾ, ತಮ್ಮದೇ ಶೈಲಿಯಲ್ಲಿ ತೀರುಗೇಟು ನೀಡಿದ್ದರಂತೆ. ‘ನೋಡು ಗೆಳೆಯ.. ಸ್ವಲ್ಪ ಗೌರವ ನೀಡೋದನ್ನ ಕಲಿತುಕೋ. ನಾನು​​ 18 ವರ್ಷದ ಹಿಂದೆ ಡೆಬ್ಯೂ ಮಾಡಿದಾಗ ನೀನಿನ್ನು ಮಗುವಾಗಿದ್ದೆ’ ಅಂತ ಟಾಂಗ್ ನೀಡಿದ್ದರಂತೆ. ದಿನದಾಟದ ನಂತರ ​​ ಡ್ರೆಸ್ಸಿಂಗ್ ರೂಮ್​ನಲ್ಲಿ ಸಚಿನ್ ತೆಂಡುಲ್ಕರ್ ಸೇರಿದಂತೆ ತಂಡದ ಇತರೆ ಹಿರಿಯ ಆಟಗಾರರು ಸ್ಲೆಡ್ಜಿಂಗ್ ​​ಅನಾವಶ್ಯಕವಾಗಿತ್ತು ಎಂದು ಪಾರ್ಥಿವ್​ಗೆ ಬೈದು ಬುದ್ಧಿ ಹೇಳಿದ್ದರಂತೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

​ಪಾರ್ಥೀವ್​ ಪಟೇಲ್​ ಆ ಒಂದು ಮಾತಿಗೆ ‘ನೀನಿನ್ನು ಮಗು’ ಎಂದಿದ್ದ ಖ್ಯಾತ ಕ್ರಿಕೆಟಿಗ! ಯಾಕೆ ಗೊತ್ತಾ?

https://newsfirstlive.com/wp-content/uploads/2023/07/Parthiv-Patel.jpg

Load More