newsfirstkannada.com

BREAKING: ಭೀಕರ ರಸ್ತೆ ಅಪಘಾತ.. ಪಾರ್ವತಮ್ಮ ರಾಜ್​ಕುಮಾರ್ ತಮ್ಮನ ಪುತ್ರನಿಗೆ ಗಂಭೀರ ಗಾಯ

Share :

25-06-2023

    ಸೂರಜ್ ಕಾಲನ್ನು ಕತ್ತರಿಸಿ ತೆಗೆದಿರುವ ವೈದ್ಯರು

    ಯುವ ನಟ ಕೂಡ ಆಗಿರುವ ಸೂರಜ್

    ಸೂರಜ್ ಆರೋಗ್ಯ ವಿಚಾರಿಸಲು ಶಿವಣ್ಣ ಆಗಮನ

ಮೈಸೂರು: ದಿವಂಗತ ಪಾರ್ವತಮ್ಮ ರಾಜ್​ಕುಮಾರ್ ಅವರ ತಮ್ಮನ ಮಗ, ಯುವ ನಟ ಸೂರಜ್​​ಗೆ ಅಪಘಾತವಾಗಿದೆ. ದುರ್ಘಟನೆಯಲ್ಲಿ ಸೂರಜ್​​​ ಬಲಗಾಲಿಗೆ ಗಂಭೀರ ಪೆಟ್ಟು ಬಿದ್ದಿದೆ.

ಊಟಿಗೆ ಹೋಗುತ್ತಿದ್ದಾಗ ಮೈಸೂರಿನ ನಂಜನಗೂಡು ರಸ್ತೆಯಲ್ಲಿ ದುರ್ಘಟನೆ ಸಂಭವಿಸಿದೆ. ಬೈಕ್​ನಲ್ಲಿ ಹೋಗ್ತಿದ್ದಾಗ ಟಿಪ್ಪರ್ ಹರಿದು ಅನಾಹುತ ಸಂಭವಿಸಿದೆ. ಸೂರಜ್ ಬಲಗಾಲಿಗೆ ಗಂಭೀರವಾಗಿ ಗಾಯವಾದ ಹಿನ್ನೆಲೆಯಲ್ಲಿ ಮಂಡಿಯವರೆಗೆ ಕಾಲನ್ನು ವೈದ್ಯರು ಕತ್ತರಿಸಿ ತೆಗೆದಿದ್ದಾರೆ ಎನ್ನಲಾಗಿದೆ.

ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದೆ. ಯುವ ನಟ ಸೂರಜ್‌ ಮೈಸೂರಿನಿಂದ ಊಟಿಗೆ ತೆರಳುತ್ತಿದ್ದ ಎನ್ನಲಾಗಿದೆ. ಸದ್ಯ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಸೂರಜ್‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ಧ್ರುವನ್ ಅಲಿಯಾಸ್ ಸೂರಜ್ ಪಾರ್ವತಮ್ಮ ರಾಜ್‌ಕುಮಾರ್ ಅವರ ಸಹೋದರನ ಪುತ್ರ. 2020 ಆಗಸ್ಟ್ ತಿಂಗಳು ಧ್ರುವನ್ ನಟನೆಯ ಹೊಸ ಸಿನಿಮಾದ ಮುಹೂರ್ತವಾಗಿತ್ತು. ಆದರೆ ನಿರ್ಮಾಪಕ ಮತ್ತು ನಟರ ನಡುವಿನ ಮುನಿಸಿನಿಂದ ಸಿನಿಮಾದ ಚಿತ್ರೀಕರಣ ನಿಂತು ಹೋಗಿತ್ತು. ಇದಾದ ಬಳಿಕ ಕಳೆದ ಡಿಸೆಂಬರ್ ತಿಂಗಳಿನಿಂದ ಹೊಸ ಸಿನಿಮಾ ಲಾಂಚ್​​ಗೆ ಸೂರಜ್ ಓಡಾಡುತ್ತಿದ್ದರು. 2-3 ಹೊಸ ಸಿನಿಮಾಗಳ ಮಾತುಕಥೆಯನ್ನು ನಡೆಸಿದ್ದ ಧ್ರುವನ್, ಈಗ ತನ್ನ ಬಲಗಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಭೀಕರ ರಸ್ತೆ ಅಪಘಾತ.. ಪಾರ್ವತಮ್ಮ ರಾಜ್​ಕುಮಾರ್ ತಮ್ಮನ ಪುತ್ರನಿಗೆ ಗಂಭೀರ ಗಾಯ

https://newsfirstlive.com/wp-content/uploads/2023/06/SURAJ.jpg

Load More