newsfirstkannada.com

ಮೆಟ್ರೋ ನಿಲ್ದಾಣದಲ್ಲೇ ಪ್ರಯಾಣಿಕನಿಗೆ ಹಾರ್ಟ್​ ಅಟ್ಯಾಕ್​​.. ಜೀವ ಉಳಿಸಿ ಹೀರೋ ಆದ ಯೋಧ!

Share :

05-11-2023

    ದೆಹಲಿ ನಂಗ್ಲೋಯ್ ಮೆಟ್ರೋ ನಿಲ್ದಾಣದಲ್ಲಿ ನಡೆದ ಘಟನೆ

    ನೋಡ ನೋಡುತ್ತಿದ್ದಂತೆ ಕೆಳಗೆ ಕುಸಿದು ಬಿದ್ದ ಪ್ರಯಾಣಿಕ!

    ಸಿಪಿಆರ್​ ನೀಡಿ ಪ್ರಯಾಣಿಕನ ಜೀವ ಉಳಿಸಿದ ಯೋಧ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹಾರ್ಟ್ ​​ಅಟ್ಯಾಕ್ ಕೇಸ್​​ಗಳು ಜಾಸ್ತಿ ಆಗುತ್ತಿದೆ. ಅದರಲ್ಲೂ ಹಾರ್ಟ್ ​​ಅಟ್ಯಾಕ್ ಸಂಭವಿಸಿ ಜೀವ ಕಳೆದುಕೊಳ್ಳುತ್ತಿರೋ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತ್ತಿದೆ. ಹೀಗೆ ಇಲ್ಲೊಬ್ಬ ವ್ಯಕ್ತಿಗೆ ಮೆಟ್ರೋ ನಿಲ್ದಾಣದಲ್ಲಿ ಹೃದಯಾಘಾತ ಸಂಭವಿಸಿದೆ.

ಹೌದು, ರಾಷ್ಟ್ರ ರಾಜಧಾನಿ ದೆಹಲಿಯ ನಂಗ್ಲೋಯ್​​ನಲ್ಲಿ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಮೆಟ್ರೋ ನಿಲ್ದಾಣದ ಚಕ್ಕಿಂಗ್​ ಸ್ಥಳದಲ್ಲೆ ಬರುತ್ತಿದ್ದರು. ಇದೇ ವೇಳೆ ಏಕಾಏಕಿ ಕುಸಿದು ಬೀಳುತ್ತಾರೆ. ಕೂಡಲೇ ಕರ್ತವ್ಯದಲ್ಲಿದ್ದ CISF ಯೋಧರೊಬ್ಬರು ಓಡಿ ಬಂದು ಆ ವ್ಯಕ್ತಿಗೆ ಸಿಪಿಆರ್​ ನೀಡುತ್ತಾರೆ. ಸರಿಯಾದ ಸಮಯಕ್ಕೆ ಸಿಪಿಆರ್​ ನೀಡುವ ಮೂಲಕ ಪ್ರಯಾಣಿಕನ ಪ್ರಾಣ ಉಳಿಸಿದ್ದಾರೆ.

ಈ ದೃಶ್ಯ ದೆಹಲಿಯ ನಂಗ್ಲೋಯ್​​ನಲ್ಲಿ ಮೆಟ್ರೋ ನಿಲ್ದಾಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಯೋಧರ ಸಮಯ ಪ್ರಜ್ಞೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಟ್ರೋ ನಿಲ್ದಾಣದಲ್ಲೇ ಪ್ರಯಾಣಿಕನಿಗೆ ಹಾರ್ಟ್​ ಅಟ್ಯಾಕ್​​.. ಜೀವ ಉಳಿಸಿ ಹೀರೋ ಆದ ಯೋಧ!

https://newsfirstlive.com/wp-content/uploads/2023/11/accident-63.jpg

Load More