newsfirstkannada.com

‘ಬಾಯಿ ಮುಚ್ಚಿಸೋ’ ಮಾತನ್ನಾಡಿದ್ದ ಆಸಿಸ್​ ನಾಯಕ; ಕೊಟ್ಟ ಮಾತಿನಂತೆ ನಡೆದುಕೊಂಡ ಕ್ಯಾಪ್ಟನ್​ ಕಮಿನ್ಸ್..!​

Share :

20-11-2023

    ಫೈನಲ್​ ಪಂದ್ಯದಲ್ಲಿ ಕಮಿನ್ಸ್​ ಜಬರ್ದಸ್ತ್​​ ಪರ್ಫಾಮೆನ್ಸ್

    ಮೊದಲಾರ್ದದಲ್ಲಿ ಕಮಿನ್ಸ್​ ಮಾತಿನಂತೆ ನಡೀತು ಪಂದ್ಯ

    ವಿಶ್ವಕಪ್ ಫೈನಲ್​​ನಲ್ಲಿ ಆಸಿಸ್ ವಿರುದ್ಧ ಭಾರತಕ್ಕೆ ಸೋಲು

ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಸೋತಿದ್ದು ನಿನ್ನೆ. ಈ ಸೋಲಿನ ಭವಿಷ್ಯವನ್ನ ಆಸಿಸ್​ ನಾಯಕ ಪ್ಯಾಟ್​ ಕಮಿನ್ಸ್​ ಪಂದ್ಯಕ್ಕೂ ಒಂದು ದಿನ ಮುನ್ನವೇ ನುಡಿದಿದ್ರು. ನಮೋ ಮೈದಾನಕ್ಕೆ ಬರೋ ಟೀಮ್​ ಇಂಡಿಯಾ ಫ್ಯಾನ್ಸ್​ಗೆ ಅಬ್ಬರಕ್ಕೆ ಬ್ರೇಕ್​ ಹಾಕ್ತೀನಿ ಅಂದಿದ್ರು. ಇಷ್ಟೇ ಅಲ್ಲ. ಆ ಮಾತನ್ನ ಪ್ಯಾಟ್​ ಕಮಿನ್ಸ್​, ಮೈದಾನದಲ್ಲಿ ನಿಜವಾಗಿಸಿ ಬಿಟ್ಟರು.

ವಿಶ್ವದ ಅತಿ ದೊಡ್ಡ ಮೈದಾನದಲ್ಲಿ ನೆಚ್ಚಿನ ಟೀಮ್​ ಇಂಡಿಯಾಗೆ ಚಿಯರ್​ ಮಾಡಲು ಫ್ಯಾನ್ಸ್​ ತುದಿಗಾಲಲ್ಲಿ ನಿಂತಿದ್ರು. 1 ಲಕ್ಷಕ್ಕೂ ಅಧಿಕ ಸೀಟುಗಳಿರೋ ಸ್ಟೇಡಿಯಂನ ಎಲ್ಲಾ ಟಿಕೆಟ್​ಗಳು ಮೊದಲೇ ಸೋಲ್ಡ್​ ಆಗಿದ್ವು. ಸೇಲಾದ ಟಿಕೆಟ್​ಗಳ ಪೈಕಿ 90ರಷ್ಟು ಟಿಕೆಟ್​ಗಳು ಟೀಮ್​ ಇಂಡಿಯಾ ಫ್ಯಾನ್ಸ್​ ಜೇಬಲ್ಲೇ ಇದ್ವು. ನಿನ್ನೆ ಇಡೀ ನಮೋ ಮೈದಾನ ನೀಲಿಮಯವಾಗಿತ್ತು. ತ್ರಿವರ್ಣ ಧ್ವಜದ ಹಾರಾಟ ಜೋರಾಗಿತ್ತು.. ಫ್ಯಾನ್ಸ್​ ಜೈಕಾರ ಮುಗಿಲುಮುಟ್ಟಿತ್ತು.

ಆರಂಭದಲ್ಲಿ ಎಲ್ಲವೂ ಅದ್ಭುತವಾಗೇ ಇತ್ತು.. ಫ್ಯಾನ್ಸ್​​ ಹೈ ಜೋಷ್​ನಲ್ಲೇ ಇದ್ರು.. ಆದ್ರೆ ಯಾವಾಗ ಟೀಮ್​ ಇಂಡಿಯಾದ ಪೆವಿಲಿಯನ್​ ಪರೇಡ್​ ಶುರುವಾಯ್ತೋ, ಮೈದಾನದಲ್ಲಿದ್ದ ಫ್ಯಾನ್ಸ್​​ ಮೌನಕ್ಕೆ ಶರಣಾಗಿ ಬಿಟ್ರು. ಮುಗಿಲುಮುಟ್ಟಿದ್ದ ಜಯಘೋಷವೆಲ್ಲಾ ಮಾಯವಾಗಿ ನೀರವ ಮೌನ ಮೈದಾನವನ್ನ ಆವರಿಸಿಬಿಡ್ತು. ಅಬ್ಬರ, ಆರ್ಭಟವೇ ತುಂಬಿದ್ದ ಮೈದಾನ ಇದ್ದಕ್ಕಿದ್ದಂತೆ ಫುಲ್​ ಸೈಲೆಂಟ್​ ಆಯ್ತು.

‘ಬಾಯಿ ಮುಚ್ಚಿಸೋ’ ವಾಗ್ದಾನ ಮಾಡಿದ್ದ ಆಸಿಸ್​ ನಾಯಕ.!

ಫುಲ್​ ಜಾಮ್​ಪ್ಯಾಕ್ಡ್​​ ಸ್ಟೇಡಿಯಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಹೋಮ್​​ಕ್ರೌಡ್​ ಎದುರಿಗೆ ಪರ್ಫಾಮ್​ ಮಾಡಲು ಎಂಟೆದೆ ಗುಂಡಿಗೆ ಬೇಕು. ಅಂತಾದ್ರಲ್ಲಿ ಹೋಮ್​ ಕ್ರೌಡ್​ ಅಬ್ಬರಕ್ಕೆ ಬ್ರೇಕ್​​ ಹಾಕಿ, ಅವರನ್ನ ಸೈಲೆಂಟ್​​ ಮಾಡೋದು ಅಂದ್ರೆ ಅದು ಸಾಮಾನ್ಯದ ವಿಚಾರನಾ..? ಇಂತಾ ಅಸಮಾನ್ಯ ಸಾಧನೆ ಮಾಡ್ತೀನಿ ಅಂತಾ ಪ್ಯಾಟ್​ ಕಮಿನ್ಸ್​ ಪಂದ್ಯಕ್ಕೂ ಮುನ್ನವೇ ಭವಿಷ್ಯ ನುಡಿದಿದ್ರು.

ಕ್ರೀಡೆಯಲ್ಲಿ ಹೆಚ್ಚಿನ ಅಭಿಮಾನಿಗಳನ್ನ ಸುಮ್ಮನಿರಿಸಿದಾಗ ಸಿಗೋ ತೃಪ್ತಿಗಿಂತ ಹೆಚ್ಚಿನದು ಇಲ್ಲ. ಅದೇ ನಾಳಿನ ಪಂದ್ಯದಲ್ಲಿ ನಮ್ಮ ಗುರಿ-ಪ್ಯಾಟ್​ ಕಮಿನ್ಸ್​, ಆಸ್ಟೇಲಿಯಾ ನಾಯಕ

ಇಂಡೋ-ಆಸಿಸ್​ ಫೈನಲ್​ ಕದನಕ್ಕೆ ಮುನ್ನವೇ ಆಸ್ಟ್ರೇಲಿಯಾ ನಾಯಕ ಪ್ಯಾಟ್​ ಕಮಿನ್ಸ್​, ಅಭಿಮಾನಿಗಳನ್ನ ಸೈಲೆಂಟ್​ ಮಾಡೋ ಮಾತನ್ನಾಡಿದ್ರು. ಈ ಮಾತನ್ನು ಉಳಿಸಿಕೊಂಡರೂ ಕೂಡ. ಟಾಸ್​ ಸೋತು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾ ಉತ್ತಮ ಆರಂಭ ಪಡೆದ್ರೂ ಬಳಿಕ ಎಡವಿತು. ಘಟಾನುಘಟಿ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ ಸೇರ್ತಿದ್ರೆ ಮೈದಾನದಲ್ಲಿ ಕಾಂಗರೂಗಳ ಘರ್ಜನೆ ಜೋರಾಯ್ತು. ಭಾರತೀಯ ಫ್ಯಾನ್ಸ್​ ಕೂಡ ಸೈಲೆಂಟ್​ ಮೂಡ್​ಗೆ ಜಾರಿದ್ರು.

ಆಡಿದ ಮಾತಿನಂತೆ ನಡೆದುಕೊಂಡ ಕ್ಯಾಪ್ಟನ್​ ಕಮಿನ್ಸ್​..!

ಆಸಿಸ್​ ನಾಯಕ ಪ್ಯಾಟ್​​ ಕಮಿನ್ಸ್​ ಪ್ರೆಸ್​ಮೀಟ್​ನಲ್ಲಿ ಮಾತನಾಡಿದಷ್ಟಕ್ಕೆ ಸುಮ್ಮನಾಗಲಿಲ್ಲ. ಆನ್​ ಫೀಲ್ಡ್​ನಲ್ಲೂ ಆಡಿದ ಮಾತಿನಂತೆ ನಡೆದುಕೊಂಡರು. ನಾಯಕತ್ವವನ್ನ ಚಾಣಾಕ್ಷನಂತೆ ನಿರ್ವಹಿಸಿದ್ರು. ಬೌಲಿಂಗ್​ನಲ್ಲೂ ಭರ್ಜರಿ ಪ್ರದರ್ಶನ ನೀಡಿದ್ರು. ನಮೋ ಅಂಗಳದಲ್ಲಿ ಅದ್ದೂರಿ ಪರ್ಫಾಮೆನ್ಸ್​ ನೀಡಿ, ಟೀಮ್​ ಇಂಡಿಯಾವನ್ನ ಇಕ್ಕಟ್ಟಿಗೆ ಸಿಲುಕಿಸಿದ್ರು.

30 ಡಾಟ್​ ಬಾಲ್​

ಆಸಿಸ್​ ನಾಯಕ ಪ್ಯಾಟ್​ ಕಮಿನ್ಸ್​ ಬೌಲಿಂಗ್​ನ ಹೈಲೆಟ್ಸ್​ ಇದು. ಹಾಕಿದ 10 ಓವರ್​​ಗಳಲ್ಲಿ 30 ಡಾಟ್​ ಬಾಲ್​ಗಳನ್ನ ಹಾಕಿದ ಪ್ಯಾಟ್​ ಕಮಿನ್ಸ್​, ಕೇವಲ 34 ರನ್​ ಬಿಟ್ಟು ಕೊಟ್ರು. ತನ್ನ 10 ಓವರ್​ ಕೋಟಾದಲ್ಲಿ ಒಂದೇ ಒಂದು ಬೌಂಡರಿಯನ್ನ ಹೊಡೆಸಿಕೊಳ್ಳದ ಆಸಿಸ್​ ನಾಯಕ, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​ರಂತಹ ಬಿಗ್​ ಫಿಶ್​​ಗಳಿಗೆ ಗಾಳ ಹಾಕಿದ್ರು.

ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ನುಡಿದ ಮಾತಿನಂತೆ ಆಸಿಸ್​ ನಾಯಕ ನಿನ್ನೆಯ ಫೈನಲ್​ ಫೈಟ್​ನಲ್ಲಿ ನಡೆದುಕೊಂಡ್ರು. ತಂಡವನ್ನು ಚಾಂಪಿಯನ್​ ಮಾಡಲೇಬೇಕು ಅನ್ನೋ ಛಲದೊಂದಿಗೆ ಕಣಕ್ಕಿಳಿದ ಕ್ಯಾಪ್ಟನ್​ ಕಮಿನ್ಸ್​ಗೆ ತಂಡ ಕೂಡ ಸಖತ್ ಸಾಥ್​ ನೀಡ್ತು. ಸ್ಪಷ್ಟ ಗುರಿ, ದಿಟ್ಟ ಹೋರಾಟ ನಡೆಸಿದ ಆಸ್ಟ್ರೇಲಿಯಾ ಟ್ರೋಫಿಯನ್ನೂ ಜಯಿಸಿತು.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಬಾಯಿ ಮುಚ್ಚಿಸೋ’ ಮಾತನ್ನಾಡಿದ್ದ ಆಸಿಸ್​ ನಾಯಕ; ಕೊಟ್ಟ ಮಾತಿನಂತೆ ನಡೆದುಕೊಂಡ ಕ್ಯಾಪ್ಟನ್​ ಕಮಿನ್ಸ್..!​

https://newsfirstlive.com/wp-content/uploads/2023/11/PAT.jpg

Load More