ವಿವಾದಗಳ ನಡುವೆಯೂ ಪಠಾಣ್ಗೆ ಬಿಗ್ ಸಕ್ಸಸ್
ದೀಪಿಕಾ-ಶಾರೂಖ್ ಅಭಿನಯದ ಪಠಾಣ್ ಚಿತ್ರ
ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಹಣ ಬಾಚಿದ ಸಿನಿಮಾ
ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ ಖಾನ್ ‘ಪಠಾಣ್’ ಸಿನಿಮಾದ ಮೂಲಕ ಕೋಟಿ ಕೋಟಿ ಎಣಿಸುತ್ತಿದ್ದಾರೆ. ಸಿನಿಮಾ ಬಿಡುಗಡೆಯಾದಾಗಿನಿಂದಲೂ ಭರ್ಜರಿ ಕಲೆಕ್ಷನ್ ಮಾಡುತ್ತಾ ಬಂದಿರುವ ಈ ಚಿತ್ರ ಸತತ 4ನೇ ವಾರವೂ ಕೂಡ ಕೋಟಿ ಕೋಟಿ ಎಣಿಸುತ್ತಿದೆ. ಅಷ್ಟರಮಟ್ಟಿಗೆ ಬಾಲಿವುಡ್ನಲ್ಲಿ ಶಾರುಖ್ ನಟನೆಯ ಪಠಾಣ್ ಸಿನಿಮಾದ ಸೌಂಡ್ ಜೋರಾಗಿದೆ.
ಪಠಾಣ್ ಸಿನಿಮಾ ಕೇಸರಿ ವಿವಾದಲ್ಲಿ ಸಿಲುಕಿತ್ತು. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಒಟ್ಟಿಗೆ ಮೈ ಬಳುಕಿಸಿದ ಬೀಷರಮ್ ಹಾಡು ಗದ್ದಲಕ್ಕೆ ಎಡೆ ಮಾಡಿಕೊಟ್ಟಿತ್ತು. ಕಾರಣ ಅದರಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇಷ್ಟೆಲ್ಲಾ ವಿಚಾರದ ಸುಳಿಯಲ್ಲಿದ್ದ ಸಿನಿಮಾವು ಕಿಂಚಿತ್ತು ನಿರ್ಮಾಪಕರಿಗೆ ಮೋಸ ಮಾಡಿಲ್ಲ. ಅದಕ್ಕೆ ಸಾಕ್ಷಿ ಎಂದರೆ ಸಿನಿಮಾದ ಕಲೆಕ್ಷನ್
ಕೋಟಿ ಕೋಟಿ ಲೂಟಿ ಮಾಡಿದ ಪಠಾಣ್
ಪಠಾಣ್ ಸಿನಿಮಾ 26ನೇ ದಿನದತ್ತ ಸಾಗುತ್ತಿದೆ. ನಾಲ್ಕನೇ ವಾರಂತ್ಯದಲ್ಲಿ 4.28 ಕೋಟಿ ಕಲೆಕ್ಷನ್ ಮಾಡಿದೆ ಎಂದು ಸ್ಕ್ಯಾನ್ಲಿಂಕ್ ವರದಿ ಮಾಡಿದೆ. ಆ ಮೂಲಕ 992 ಕೋಟಿ ಲೂಟಿ ಮಾಡಿದ್ದು, 1000 ಕೋಟಿ ಕ್ಲಬ್ ಸೇರಿದೆ.
ಸದ್ಯ ಬಾಲಿವುಡ್ನಲ್ಲಿ ಶೆಹ್ಜಾದಾ ಸಿನಿಮಾ ಮತ್ತು ಮಾರ್ವೆಲ್ಸ್ ಆಂಟ್-ಮ್ಯಾನ್ ಮತ್ತು ವಾಸ್ಪ್: ಕ್ವಾಂಟುಮೇನಿಯಾ ಸಿನಿಮಾ ಬಿಡುಗಡೆಗೊಂಡು ಸೌಂಟ್ ಮಾಡುತ್ತಿದೆ. ಈ ಸಿನಿಮಾಗಳೆದರು ಕಿಂಗ್ ಖಾನ್ ಸಿನಿಮಾ ತನ್ನ ಕಲೆಕ್ಷನ್ ಎಣಿಸುತ್ತಿದೆ ಎಂದರೆ ಅಚ್ಚರಿಯೇ ಸರಿ.
ಸಿನಿಮಾ ಬಗ್ಗೆ ಮಾಹಿತಿ ಇಲ್ಲಿದೆ
ಪಠಾಣ್ ಸಿನಿಮಾ ಜನವರಿ 25 ರಂದು ತೆರೆಕಂಡಿದೆ. ಈ ಸಿನಿಮಾದಲ್ಲಿ ನಾಯಕನಾಗಿ ಕಿಂಗ್ ಖಾನ್ ಶಾರುಖ್ ಖಾನ್ ಮೆರೆದರೆ, ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಯಶ್ ರಾಜ್ ಫಿಲಮ್ಸ್ ವಿತರಣೆ ಮಾಡಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್‌ನಲ್ಲಿ