newsfirstkannada.com

2 ಗ್ಯಾಂಗ್ ನಡುವೆ ಗುಂಡಿನ ಕಾಳಗ; ಮೂವರ ಸಾವು; ಇಡೀ ಹಳ್ಳಿಯಲ್ಲಿ ಆತಂಕದ ವಾತಾವರಣ

Share :

15-09-2023

    ತಡರಾತ್ರಿ ಎರಡು ಗುಂಪುಗಳ ಮಧ್ಯೆ ನಡೆಯಿತು ಗುಂಡಿನ ದಾಳಿ

    ಫೈರಿಂಗ್ ಹಿನ್ನೆಲೆಯಲ್ಲಿ ಇಡೀ ಹಳ್ಳಿಯಲ್ಲಿ ಆತಂಕದ ವಾತಾವರಣ

    ಅಸಲಿ ಕಹಾನಿ ತಿಳಿಯಲು ತನಿಖೆ ನಡೆಸುತ್ತಿರುವ ಪೊಲೀಸರು..!

ಪಾಟ್ನಾ: ತಡರಾತ್ರಿ ಎರಡು ಗ್ಯಾಂಗ್​ಗಳ ನಡುವೆ ಫೈರಿಂಗ್ ನಡೆದು ಮೂವರು ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಹಾರದ ಫತುಹಾ ನಗರದಲ್ಲಿ ನಡೆದಿದೆ.

ಎರಡು ಗ್ಯಾಂಗ್ ಮಧ್ಯೆ ಯಾವ ಕಾರಣಕ್ಕೆ ಫೈರಿಂಗ್ ನಡೆದಿದೆ ಎಂದು ಗೊತ್ತಿಲ್ಲದಿದ್ದರೂ ಹಾಲಿಗೆ ಸಂಬಂಧಿಸಿದ ಬಾಕಿ ಹಣ ಪಾವತಿಗಾಗಿ ಗ್ಯಾಂಗ್​ಗಳ ಮಧ್ಯೆ ಫೈರಿಂಗ್ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಫತುಹಾ ನಗರದ ಸುರಗಾ ಗ್ರಾಮದಲ್ಲಿ ಎರಡು ಗ್ಯಾಂಗ್​ಗಳು ಮನ ಬಂದಂತೆ ಫೈರಿಂಗ್ ಮಾಡಿದ್ದಾರೆ. ಈ ವೇಳೆ ಒಂದು ಗ್ಯಾಂಗ್​ನ ಇಬ್ಬರು ಹಾಗೂ ಇನ್ನೊಂದು ಗ್ಯಾಂಗ್​ನ ಒಬ್ಬರು ಒಟ್ಟು ಮೂವರು ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ವೈದ್ಯರು ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಪಾಟ್ನಾದ NMMCH ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಈ ಘಟನೆಯಿಂದ ಇಡೀ ಹಳ್ಳಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು ಜನರು ಹೊರ ಬರಲು ಭಯ ಪಡುತ್ತಿದ್ದಾರೆ ಎನ್ನಲಾಗಿದೆ. ಹಾಲಿನ ಬಾಕಿ ಹಣ ಪಾವತಿಗೆ ಸಂಬಂಧಿಸದಂತೆ ಎರಡು ಗ್ಯಾಂಗ್​ ಒಟ್ಟಿಗೆ ಸೇರಿ ಚರ್ಚೆ ಮಾಡುತ್ತಿದ್ದವು. ಆಗ ಮಾತುಗಳು ತಾರಕಕ್ಕೇರಿದ್ದು ಗಲಾಟೆ ಶುರುವಾಗಿ ಫೈರಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2 ಗ್ಯಾಂಗ್ ನಡುವೆ ಗುಂಡಿನ ಕಾಳಗ; ಮೂವರ ಸಾವು; ಇಡೀ ಹಳ್ಳಿಯಲ್ಲಿ ಆತಂಕದ ವಾತಾವರಣ

https://newsfirstlive.com/wp-content/uploads/2023/09/BIHAR_FIRING.jpg

Load More