ಎಲ್ಲರಿಗಿಂತಲೂ ಮೊದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದೇಕೆ ಪವಿತ್ರಾಗೌಡ?
ತಾನೊಬ್ಬಳು ಬಚಾವಾದ್ರೆ ಸಾಕು ಅನ್ನೋ ಮಟ್ಟಕ್ಕೆ ಬಂದ್ರಾ ದರ್ಶನ್ ಗೆಳತಿ?
ಅರ್ಜಿಯಲ್ಲಿ ಉಲ್ಲೇಖಿಸಿರುವ ಕಾರಣಗಳು ಮೂಡಿಸಿವೆ ಹಲವು ಅನುಮಾನ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 17 ಮಂದಿ ಆರೋಪಿಗಳು ತಗಲಾಕಿಕೊಂಡು ನರಳಾಡ್ತಿದ್ದಾರೆ. ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡ್ತಾ ಇದ್ದದ್ದು ಇದೇ ಪವಿತ್ರಾ ಗೌಡಳಿಗೆ. ಆ ವಿಚಾರವನ್ನ ಯಾವಾಗ ಪವಿತ್ರಾ ತನ್ನ ಗೆಳೆಯ ದರ್ಶನ್‌ಗೆ ಹೇಳಿದ್ಲೋ ಅಲ್ಲಿಂದ ಕಥೆ ಡೆಡ್ಲಿ ಕ್ರೈಂ ಸ್ಟೋರಿಯಾಗಿ ಪರಿವರ್ತನೆಯಾಯ್ತು ಅನ್ನೋದು ತನಿಖೆಯಲ್ಲೇ ಬಯಲಾಗಿರೋ ಸತ್ಯ. ಆದ್ರೆ, ಇವತ್ತು ಪವಿತ್ರಾ ಕೋರ್ಟ್‌ನಲ್ಲಿ ನಿಂತು ತನಗೂ ಈ ಕೇಸ್‌ಗೂ ಸಂಬಂಧವೇ ಇಲ್ಲ ಅಂತ ಹೊಸ ವರಸೆ ತೆಗೆದಿದ್ದಾರೆ. ಕೊಂದವರೇ ಬೇರೆ, ನನ್ನನ್ಯಾಕೆ ಹೀಗೆ ಜೈಲು ಹಾಕಿ ಹಿಂಸೆ ಕೊಡ್ತಿದ್ದೀರಿ, ನಾನೊಬ್ಬ ಹೆಣ್ಣುಮಗಳು, ಬಿಟ್ಟುಬಿಡಿ, ಕೊಲೆ ಮಾಡಿದೋರನ್ನ ಶಿಕ್ಷಿಸಿ ಅಂತಾ ದರ್ಶನ್ ಬುಡವೇ ನಡುಗುವಂತಾ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ: ಆ ಜೈಲಿಗೆ ಮಾತ್ರ ಕಳಿಸ್ಬೇಡಿ.. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗ್ಯಾಂಗ್ ನರಳಾಟ; ಬೇಡಿಕೊಂಡಿದ್ದೇನು?
ದರ್ಶನ್ ಸಹವಾಸದಿಂದ ಕೈತೊಳೆದುಕೊಂಡ್ರಾ ಪವಿತ್ರಾ?
ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ನಂಬರ್ ಒನ್ ಆಗಿರೋ ಪವಿತ್ರಾ ಗೌಡ ಕಳೆದ ವಾರವೇ ಬೇಲ್‌ಗೆ ಅರ್ಜಿ ಹಾಕಿ ಅಚ್ಚರಿ ಹುಟ್ಸಿದ್ರು. ಯಾಕಂದ್ರೆ, ದರ್ಶನ್ ಇನ್ನೂ ಸಹ ಬೇಲ್‌ಗೆ ಅರ್ಜಿ ಹಾಕಿಲ್ಲ. ಆದ್ರೆ ದರ್ಶನ್‌ನೇ ತನ್ನ ಪ್ರಾಣ, ತಮ್ಮದು 10 ವರ್ಷದ ಸಂಬಂಧ ಅಂತೆಲ್ಲಾ ಪೋಸ್ಟ್ ಮಾಡಿ ಗುಟ್ಟಾಗಿದ್ದ ವಿಚಾರವನ್ನ ಜಗತ್ ಜಾಹೀರು ಮಾಡಿದ್ದ ಪವಿತ್ರಾ. ತನ್ನ ಗೆಳೆಯನಿಗಿಂತಲೂ ಮೊದಲೇ ಬೇಲ್‌ಗೆ ಅರ್ಜಿ ಹಾಕ್ಕೊಂಡಿದ್ದು ಹಲವು ಪ್ರಶ್ನೆಗಳಿಗೆ ಎಡೆಮಾಡಿತ್ತು. ಆ ಅನುಮಾನಗಳಿಗೆ ಈಗ ರೆಕ್ಕೆ ಪುಕ್ಕ ಹುಟ್ಟಿದೆ. ಯಾಕಂದ್ರೆ, ಅತ್ತ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಕಮಾನ್ ಎತ್ತಿದ್ರೆ.. ಇತ್ತ ಪವಿತ್ರಾ ಬೇಲ್ ಕೊಟ್ಟುಬಿಡಿ ಹೊರಗೆ ಆರಾಮಾಗಿರ್ತೀನಿ ಅಂತ ಕೋರ್ಟ್ ಮೊರೆ ಹೋಗಿದ್ದಾರೆ.
ಕೋರ್ಟ್‌ನಲ್ಲಿ ಪವಿತ್ರಾ ಗೌಡ ಪರ ವಕೀಲರ ವಾದ ನಿಜಕ್ಕೂ ಅಚ್ಚರಿ!
ಚಾರ್ಜ್‌ಶೀಟ್ ಸಲ್ಲಿಸೋಕು ಮೊದಲೇ ಬೇಲ್ ಅರ್ಜಿ ಹಾಕಿರೋ ಪವಿತ್ರಾ ಗೌಡ ಪರ ವಕೀಲರು ಕೋರ್ಟ್‌ನಲ್ಲಿ ಮಾಡಿರೋ ಈ ವಾದ ಕೇಳಿದ್ರೆ ಎಂಥವರಿಗೂ ಅಚ್ಚರಿಯಾಗುತ್ತೆ. ಯಾಕಂದ್ರೆ, ಪವಿತ್ರಾ ಗೌಡ ಪರ ವಕೀಲರ ಮೊದಲ ಲಾ ಪಾಯಿಂಟ್ ಪ್ರಕಾರ ಈಕೆ ಮೇಲೆ ಕೇಳಿಬಂದಿರೋ ಆರೋಪಗಳೆಲ್ಲವೂ ಸುಳ್ಳಂತೆ. ಪೊಲೀಸರು ಮಾಡಿರೋ ಆರೋಪಗಳಲ್ಲಿ ಸತ್ಯಾಂಶವಿಲ್ಲವಂತೆ. ಇದಕ್ಕಿಂತಲೂ ಶಾಕಿಂಗ್ ವಾದದ ಬಗ್ಗೆ ಹೇಳ್ತೀವ್ ಕೇಳಿ. ಪವಿತ್ರಾ ಗೌಡ ತಾನು ಸೇಫ್ ಆಗೋದಕ್ಕೆ ಎಲ್ಲವನ್ನೂ ದರ್ಶನ್ ಮೇಲೆ ಎತ್ತಿ ಹಾಕ್ತಿದ್ದಾಳಾ ಎಂಬ ಶಂಕೆ ಶುರುವಾಗುವಂತೆ ಮಾಡಿರೋದೇನು ಗೊತ್ತಾ? ದರ್ಶನ್ ಸೂಚನೆಯಂತೆ ಕಿಡ್ನಾಪ್ ನಡೆದಿದೆ ಅನ್ನೋ ಪವಿತ್ರಾ ಪರ ವಕೀಲರ ವಾದ!
ಸದ್ಯ ಇದು ಪವಿತ್ರಾ ಗೌಡ ಪರ ವಕೀಲರು ಕೋರ್ಟ್‌ನಲ್ಲಿ ಮಾಡಿರೋ ವಾದ. ಅಂದ್ರೆ, ಪವಿತ್ರಾ ಗೌಡ ಪರ ವಕೀಲರು ಪರೋಕ್ಷವಾಗಿ ದರ್ಶನ್ ಕಿಡ್ನಾಪ್ ಮಾಡಿಸಿರೋದು ಸತ್ಯ ಅಂತ ಒಪ್ಪಿಕೊಂಡ್ರಾ?
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಸಿನಿಮಾ ಕೊರಿಯೋಗ್ರಾಫರ್ ನವ್ಯಾ ಬರ್ಬರ ಹತ್ಯೆ; ಅಸಲಿಗೆ ಆಗಿದ್ದೇನು?
ಅದನ್ನ ನ್ಯಾಯಾಲಯ, ತನಿಖಾಧಿಕಾರಿಗಳೇ ತೀರ್ಮಾನ ಮಾಡ್ತಾರೆ ಬಿಡಿ. ಆದ್ರೆ, ತನಗೂ ಇದಕ್ಕೂ ಸಂಬಂಧವಿಲ್ಲ. ಯಾರು ಕೊಲೆ ಮಾಡಿದ್ರು ಗೊತ್ತಿಲ್ಲ ಎಂಬ ವಾದಕ್ಕೂ.. ದರ್ಶನ್ ಸೂಚನೆಯಂತೆ ಕಿಡ್ನಾಪ್ ಆಗಿದೆ ಎಂಬ ವಾದಕ್ಕೂ ಎಷ್ಟು ವ್ಯತ್ಯಾಸ ಇದೆ ಅಲ್ವಾ? ಇದುವೇ ಈಗ ಪವಿತ್ರಾ ಗೌಡ ಮೇಲೆ ಅನುಮಾನ ಹುಟ್ಟಲು ಪ್ರಮುಖ ಕಾರಣ! ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎಲ್ಲವನ್ನೂ ಡಿಗ್ಯಾಂಗ್ ತಲೆಗೆ ಕಟ್ಟಿ.. ತಾನು ಮಾತ್ರ ಪಾರಾಗ್ಬೇಕು, ಎಲ್ಲರಿಗಿಂತ ಮೊದಲೇ ಬೇಲ್ ಪಡೆದುಕೊಳ್ಳಬೇಕು ಅಂತಾ ಪವಿತ್ರಾ ಕೋರ್ಟ್‌ನಲ್ಲಿ ಉಲ್ಟಾ ಹೊಡೆದುಬಿಟ್ರಾ? ಬಣ್ಣ ಬದಲಿಸಿಬಿಟ್ರಾ? ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿರೋ ಮತ್ತೊಂದು ಲಾ ಪಾಯಿಂಟ್ ಇದೆ.
‘ಅಶ್ಲೀಲ ಮೆಸೇಜ್ ವಿಚಾರವನ್ನ ಪವನ್‌ಗಷ್ಟೇ ಹೇಳಿದ್ದು’
ನಿಮಗೆಲ್ಲಾ ಇದಾಗಲೇ ತಿಳಿದಿರುವಂತೆ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಮಾಡ್ತಾ ಇದ್ದ ಎಂಬ ಆರೋಪವಿದೆ. ಪೊಲೀಸ್ ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿತ್ತು. ಮತ್ತು, ರೇಣುಕಾಸ್ವಾಮಿ ಕಿಡ್ನಾಪ್‌ಗೂ ಇದುವೇ ಪ್ರಮುಖ ಉದ್ದೇಶ ಎಂಬುದಕ್ಕೂ ಪೊಲೀಸರು ಸಾಕ್ಷಿ ಸಂಗ್ರಹಿಸಿದ್ದಾರೆಂಬ ಮಾಹಿತಿಯಿದೆ. ವಿಶೇಷ ಅಂದ್ರೆ, ಬೇಲ್‌ಗೆ ಅರ್ಜಿ ಸಲ್ಲಿಸಿರೋ ಪವಿತ್ರಾ ಗೌಡ ಪರ ವಕೀಲರು ಈ ವಿಚಾರವನ್ನ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆಗೆ ಚಿತ್ರಹಿಂಸೆ ಕೊಟ್ಟು ಭಯಾನಕ ಹತ್ಯೆ; ಕಾರಣವೇನು?
ತನ್ನ ಕಕ್ಷಿದಾರರಾದ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೆೇಜ್ ಮತ್ತು ಕಾಮೆಂಟ್ ಮಾಡ್ತಿದ್ದ ಮತ್ತು ಆ ಮೆಸೇಜ್ ವಿಚಾರವನ್ನ ಪವಿತ್ರಾ ಗೌಡ ತನ್ನ ಆಪ್ತಸಹಾಯಕ ಪವನ್‌ಗೆ ಹೇಳಿದ್ದರು. ತಾನು ಹೇಳಿದ ವಿಚಾರವನ್ನ ದರ್ಶನ್‌ಗೆ ಹೇಳಬೇಡ ಎಂದಿದ್ರೂ. ಆತ ಹೇಳಿಬಿಟ್ಟಿದ್ದ ಅಂತಲೇ ವಾದ ಮಂಡಿಸಿದ್ದಾರೆ.
ಅನುಮಾನಕ್ಕೆ ಆ ವಾದವೇ ಪ್ರಮುಖ ಕಾರಣ!
ಪವಿತ್ರಾ ಗೌಡ ಪರ ವಕೀಲರ ವಾದದ ಪ್ರಕಾರ. ರೇಣುಕಾಸ್ವಾಮಿ ಮಾಡ್ತಿದ್ದ ಅಶ್ಲೀಲ ಮೆಸೇಜ್ ವಿಚಾರವನ್ನ ಪವನ್‌ಗೆ ಹೇಳಿದ್ದರು. ಪವನ್ ಅದನ್ನ ದರ್ಶನ್ ಕಿವಿಯಲ್ಲಿ ಊದಿದ್ದ. ಕುಪಿತಗೊಂಡ ದರ್ಶನ್ ತನ್ನ ದುರ್ಗದ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ಕರೆ ಮಾಡಿ ಕಿಡ್ನಾಪ್ ಮಾಡೋಕೆ ಸೂಚಿಸಿದ್ದ ಅಂತಲೇ ಪವಿತ್ರಾ ಪರ ವಕೀಲರು ವಾದಿಸಿದ್ದಾರೆ. ಹಾಗಾಗಿ, ರೇಣುಕಾಸ್ವಾಮಿಯನ್ನು ದರ್ಶನ್ ಕಿಡ್ನಾಪ್ ಮಾಡಿಸಿದ್ದು ಸತ್ಯ ಅಂತಾ ಪವಿತ್ರಾ ಒಪ್ಪಿಕೊಂಡಂತಾಯ್ತಾ? ಅದನ್ನ ಕೋರ್ಟ್ ತೀರ್ಮಾನ ಮಾಡುತ್ತೆ. ಬಟ್, ತಾನು ಬಚಾವಾಗೋಕೆ ಪವಿತ್ರಾ ಎಲ್ಲವನ್ನೂ ಡಿಗ್ಯಾಂಗ್ ಮೇಲೆ ಎತ್ತಿಹಾಕೋ ಮೊದಲ ಪ್ರಯತ್ನವಿದು ಅಂದ್ರೂ ತಪ್ಪಿಲ್ಲ.
ಕಪಾಳಮೋಕ್ಷದಿಂದ ಸಾವು ಸಂಭವಿಸಿರೋ ವರದಿಯಿಲ್ಲ’
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಡೆದ ಹಲ್ಲೆ’ ಅಂತಲೇ ಪವಿತ್ರಾಗೌಡ ಪರ ವಕೀಲರು ವಾದಿಸಿದ್ದಾರೆಂಬ ಮಾಹಿತಿಯಿದೆ. ಶೆಡ್‌ನಲ್ಲಿ ಹಲ್ಲೆ ಮಾಡಿದವರ ಗ್ಯಾಂಗ್‌ನಲ್ಲಿ ಪವಿತ್ರಾ ಗೌಡ ಇರಲಿಲ್ಲ. ಅವರು ಯಾವುದೇ ಮಾರಕಾಸ್ತ್ರ ಬಳಿಸಿದ್ದಾರೆ ಎಂಬುದಕ್ಕೂ ಸಾಕ್ಷಿಗಳಿಲ್ಲ ಎಂಬುದು ಪವಿತ್ರಾ ಪರ ವಕೀಲರ ವಾದ. ಹಾಗಾದ್ರೆ, ಡಿಗ್ಯಾಂಗ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರೋದು ಸತ್ಯ ಎಂದಾಯ್ತಲ್ಲಾ ಅಂತ ನೀವು ಕೇಳ್ಬೋದು. ಅದನ್ನೂ ಕೋರ್ಟ್ ಡಿಸೈಡ್ ಮಾಡುತ್ತೆ ಬಿಡಿ. ಆದ್ರಿಲ್ಲಿ ವಿಷ್ಯ ಏನಂದ್ರೆ, ತಾನು ಬಚಾವಾಗೋದಕ್ಕೆ ಪವಿತ್ರಾ ಗೌಡ ನಡೆದಿದ್ದೆಲ್ಲವನ್ನೂ ಪರೋಕ್ಷವಾಗಿ ಒಪ್ಕೊಳ್ತಿದ್ದಾಳಾ. ಅರ್ಥಾತ್, ತಮ್ಮ ಲಾಯರ್ ಮೂಲಕ ಕೋರ್ಟ್ ಎದುರು ಎಳೆ ಎಳೆಯಾಗಿ ತೆರೆದಿಡ್ತಿದ್ದಾಳಾ ಎಂಬ ಶಂಕೆ ಹುಟ್ಟದೇ ಇರದು.ಬಹುಮುಖ್ಯವಾಗಿ ತನ್ನ ಗೆಳೆತ ದರ್ಶನ್ ಮೇಲೆಯೇ ಪವಿತ್ರಾ ಉಲ್ಟಾ ಹೊಡೆಯುತ್ತಿರೋದು ಕೇಸ್‌ಗೆೆ ಅತಿದೊಡ್ಡ ಟ್ವಿಸ್ಟ್ ಕೊಟ್ಟಿದೆ.
ಇದನ್ನೂ ಓದಿ: ದರ್ಶನ್ ಬಳ್ಳಾರಿ ಜೈಲಿಗೆ ಹೋಗೋದು ಯಾವಾಗ? ಕಾನೂನು ಪ್ರಕ್ರಿಯೆ ಏನೇನು? ಇಲ್ಲಿದೆ ಕಂಪ್ಲೀಟ್ ಮಾಹಿತಿ!
‘ಅಚಾತುರ್ಯ ಆಗಿ ಹೋಗಿದೆ, ಇದರಲ್ಲಿ ನನ್ನ ಪಾತ್ರ ಇಲ್ಲ’ ಅನ್ನೋದು ಪವಿತ್ರಾ ಗೌಡಳ ಒನ್ ಲೈನ್ ವಾದ. ಅಂದ್ರೆ, ಕೃತ್ಯ ನಡೆದಿರೋದು ನಿಜ. ಮಾಡಿದ್ದು ನಾನಲ್ಲ ಅನ್ನೋ ಅರ್ಥವದು. ಅಲ್ಲದೆ, ಯಾಱರು ತನ್ನ ವಿರುದ್ಧ ಸಾಕ್ಷಿ ನುಡಿದಿದ್ದಾರೋ ಅವರು ಹೇಳ್ತಿರೋದೆಲ್ಲಾ ಸುಳ್ಳು. ಕೇಸ್‌ನಲ್ಲಿ ತನ್ನನ್ನ ಸಿಲುಕಿಸೋದಕ್ಕೆ ಈ ಪ್ಲಾನ್ ಮಾಡಿದ್ದಾರೆ ಅಂತಲೂ ಪವಿತ್ರಾ ಗೌಡ ಪರ ವಕೀಲರು ವಾದಿಸಿದ್ದಾರೆ. ಇವೆಲ್ಲವನ್ನೂ ನೋಡ್ತಿದ್ರೆೆ ಪವಿತ್ರಾ ಗೌಡ ಈ ಕೇಸ್‌ನಲ್ಲಿ ದರ್ಶನ್ ಸಮೇತ ಹದಿನೈದೂ ಆರೋಪಿಗಳ ಕಥೆ ಏನಾದ್ರು ಆಗ್ಲಿ. ತಾನು ಮಾತ್ರ ಬಚಾವ್ ಆಗಿಬಿಡ್ಬೇಕು ಅಂತಾ ನಿರ್ಧರಿಸಿದಂತೆ ಕಾಣ್ತಿದೆ.
ಇದೆಲ್ಲದರ ನಡುವೆ ನ್ಯಾಯಾಲಯ ಪವಿತ್ರಾ ಗೌಡಳ ಜಾಮೀನು ಅರ್ಜಿ ತೀರ್ಪನ್ನು ಶನಿವಾರ ಅಂದ್ರೆ ಇದೇ 31ನೇ ತಾರೀಖಿಗೆ ಕಾಯ್ದಿರಿಸಿದೆ. ಅಲ್ಲಿಯವರೆಗೂ ಪವಿತ್ರಾಗೆ ಪರಪ್ಪನ ಅಗ್ರಹಾರವೇ ಗತಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ