newsfirstkannada.com

ದರ್ಶನ್​​ ಈ ಸ್ಥಿತಿಗೆ ಕಾರಣ ಯಾರು? ಪವಿತ್ರಾ ಗೌಡ ಮಾಜಿ ಗಂಡ ಸಂಜಯ್​ ಬಿಚ್ಚಿಟ್ಟ ಅಸಲಿ ಸತ್ಯ!

Share :

Published June 14, 2024 at 6:05am

  ಪವಿತ್ರಾಗೌಡ ಪರ ಮಾಜಿ ಪತಿ ಸಂಜಯ್ ಸಿಂಗ್ ವಕಾಲತು

  ‘ದೊಡ್ಡ ಕನಸು ಕಂಡಿದ್ದ ಪವಿತ್ರಾ ಗೌಡ ಹಾಗೆ ಮಾಡೋದಿಲ್ಲ’!

  ನಟ ದರ್ಶನ್ ಪ್ರಕರಣದಿಂದ ತೀವ್ರ ಬೇಸರಗೊಂಡ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾಗೌಡ ಮೊದಲನೇ ಆರೋಪಿಯಾಗಿದ್ದಾರೆ. ಆದ್ರೆ ಪವಿತ್ರಾಗೌಡಗೆ ಈಗಾಗಲೇ ಮದುವೆಯಾಗಿತ್ತು. ಗಂಡನಿಂದ ಡಿವೋರ್ಸ್‌ ಕೂಡಾ ಪಡೆದಿದ್ದಳು. ಇದೀಗ ಮಾಜಿ ಪತಿ ಸಂಜಯ್ ಸಿಂಗ್ ಪವಿತ್ರ ಗೌಡ ಪರ ಮಾತಾಡಿ ಅಚ್ಚರಿ ಮೂಡಿಸಿದ್ದಾರೆ. ಆಕೆ ಕೊಲೆ ಮಾಡಿಸುವ ಕೆಲಸಕ್ಕೆ ಕೈ ಹಾಕಲ್ಲ ಅಂತ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್‌ ಹುಚ್ಚು ಅಭಿಮಾನಿ.. ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದ A5 ನಂದೀಶ್ ಹಿನ್ನೆಲೆ ಏನು? ಯಾರಿವರು?

ರೇಣುಕಾಸ್ವಾಮಿ ಕಳುಹಿಸಿದ್ದ ಒಂದು ಅಶ್ಲೀಲ ಮೆಸೇಜ್ ನಟ ದರ್ಶನ್ ಜೀವನದಲ್ಲಿ ಸುಂಟರಗಾಳಿ ಎಬ್ಬಿಸಿದೆ. ಈ ವಿಚಾರವನ್ನು ದರ್ಶನ್​ಗೆ ತಿಳಿಸಿದ್ದೇ ಅಮಾಯಕನ ಹತ್ಯೆಗೆ ಕಾರಣ ಎನ್ನಲಾಗಿದೆ. ಆದ್ರೆ ಪ್ರಕರಣದಲ್ಲಿ ಆರೋಪಿ ಅಂದ್ರೂ ಪವಿತ್ರಾಗೌಡ ಮೊದಲ ಪತಿ ಸಂಜಯ್​ ಸಿಂಗ್​ ನಂಬಲು ಸಿದ್ಧರಿಲ್ಲ. ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಈ ಸ್ಥಿತಿಗೆ ಗೆಳತಿ ಪವಿತ್ರಾ ಗೌಡ ಕಾರಣ ಎನ್ನಲಾಗ್ತಿದೆ. ಕೊಲೆ ಕೇಸ್‌ನಲ್ಲಿ ದರ್ಶನ್‌ ಹಾಗೂ ಪವಿತ್ರಾ ಗೌಡ ಬಂಧನವಾಗುತ್ತಿದ್ದಂತೆ, ಪವಿತ್ರಾಳ ಮೊದಲ ಗಂಡ ಸಂಜಯ್‌ ಸಿಂಗ್‌ ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ಪವಿತ್ರಾ ಈ ರೀತಿ ಮಾಡಿರೋಕೆ ಸಾಧ್ಯವೇ ಇಲ್ಲ, ಪವಿತ್ರಾ ದೊಡ್ಡ ಉದ್ಯಮಿ ಆಗೋಕೆ ಕನಸು ಕಂಡವರು, ಇಂತಹ ಚಿಲ್ಲರೆ ಕೆಲಸ ಮಾಡಲು ಸಾಧ್ಯವಿಲ್ಲ ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ.

ನನ್ನ ಪ್ರಕಾರ, ಈ ಕೇಸ್​​ನಲ್ಲಿ ಪವಿತ್ರಾ ಅವರದ್ದು ಏನು ತಪ್ಪಿಲ್ಲ ಅನ್ಸುತ್ತೆ. ತುಂಬಾ ನಂಬಿಕಸ್ತಾ, ಸಭ್ಯ ಮಹಿಳೆ. ಅವ್ರು ಇಂತಹ ಚಿಲ್ಲರೆ ಕೆಳ್ಸಾ ಮಾಡಲ್ಲ. ಸುಮಾರು 10, 11 ವರ್ಷದಿಂದ ನಾವು ದೂರ ಆಗಿದ್ದೇವೆ. ನನ್ನದು ಲವ್​ ಮತ್ತು ಅರೇಂಜ್​ ಮ್ಯಾರೇಜ್. ನಾನು ಬೆಂಗಳೂರಿಗೆ ಬಂದಿದ್ದೆ ಐಟಿ ಇಂಡಸ್ಟ್ರೀಗೆ. ಒಂದೇ ಲೊಕಾಲಿಟಿಯಲ್ಲಿ ಇದ್ದ ಕಾರಣ ಇಬ್ಬರಿಗ್ರೂ ಇಷ್ಟವಾಯ್ತು. ಪೋಷಕರನ್ನು ಒಪ್ಪಿಸಿ ಮದುವೆ ಮಾಡಿಕೊಂಡ್ವಿ. ನಾನು ಪವಿತ್ರಾ ಅವರನ್ನು ನೋಡಿದ್ದು ಮಾತನಾಡಿದ್ದು ಕೋರ್ಟ್​ನಲ್ಲಿ. ಕೋರ್ಟ್​ನಲ್ಲಿ ಸಹಿ ಮಾಡ್ತೇವೆ ಅಲ್ವಾ ಅಲ್ಲೇ ಮಾತನಾಡಿದ್ದು. ನನಗನಿಸಿದ ಪ್ರಕಾರ, ಪವಿತ್ರಾ ಗೌಡ ಅವರು ಇಂತಹ ಕೆಲಸ ಮಾಡಲಿಕ್ಕಿಲ್ಲ. ಯಾಕಂದ್ರೆ ಅವರಿಗೆ ಟೈಂ ಎಲ್ಲಿದೆ ಸರ್​. ಅವಳಿಗೆ ಬೆಳಿಯಬೇಕು. ಕೆರಿಯರ್​ ಬೆಳೆಸಬೇಕು. ದೊಡ್ಡ ಬ್ಯುಸಿನೆಸ್​ ಮಾಡಬೇಕು ಅಂತ ಆಸೆ ಅವಳಿಗೆ. ಅದಕೋಸ್ಕರ ಅವಳು ಎಷ್ಟು ಕಷ್ಟಪಟ್ಟಿದ್ದಾಳೆ. ನಾನು ಕೂಡ ಆಕೆ ಚೆನ್ನಾಗಿರಬೇಕು ಎಂದು ದೂರವಾದೆವು. ಸಕ್ಸಸ್​ ಕಾಣಬೇಕು ಒಂದು ಸಾಧನೆ ಮಾಡಬೇಕು. ವಿಭಿನ್ನವಾಗಿ ಯೋಚಿಸಿದ್ದಾಳೆ. ಬೇರೆಯವರ ಹಾಗೆ ಯೋಚಿಸಿಲ್ಲ.

ಸಂಜಯ್ ಸಿಂಗ್, ಪವಿತ್ರಾಗೌಡ ಮಾಜಿ ಪತಿ 

ಇನ್ನು, ಉತ್ತರ ಪ್ರದೇಶ ಮೂಲದ ಸಂಜಯ್ ಬೆಂಗಳೂರಿಗೆ ಬಂದು ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ವೇಳೆ ಪರಿಚಯವಾಗಿದ್ದ ಪವಿತ್ರಾ ಗೌಡ ಜೊತೆ ಮದುವೆಯಾಗಿದ್ದರಂತೆ, ಬಳಿಕ ಕೆಲ ಕಾರಣಗಳಿಂದ ಇಬ್ಬರು ಡಿವೋರ್ಸ್ ಪಡೆದಿದ್ದರು. ಡಿವೋರ್ಸ್‌ ಆದ ಬಳಿಕ ನಟ ದರ್ಶನ್ ಪರಿಚಯ ಆಗಿ ಪರಿಚಯದಿಂದ ಸಲುಗೆ ಬೆಳೆದು ದರ್ಶನ್‌ಗೆ ನಾನೇ 2ನೇ ಪತ್ನಿ ಎಂದು ಹೇಳಿಕೊಂಡಿರುವ ಪವಿತ್ರಾ, ದರ್ಶನ್ ಜೊತೆಗಿದ್ದಾರೆ. ಇದೇ ವಿಚಾರಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪವಿತ್ರಾ ನಡುವೆ ಸೋಷಿಯಲ್‌ ಮಿಡಿಯಾದಲ್ಲಿ ವಾರ್ ನಡೆಯುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕ್ರೂರ ಕೊಲೆ‌ ಕೇಸ್‌ಗೆ ಮೇಜರ್ ಟ್ವಿಸ್ಟ್.. ತನಿಖಾಧಿಕಾರಿ ದಿಢೀರ್ ಬದಲಾವಣೆ; ಯಾಕೆ?

ಸೋಷಿಯಲ್ ಮೀಡಿಯಾ ಅಕೌಂಟ್ ನಿಷ್ಕ್ರಿಯಗೊಳಿಸಿದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಕೊಲೆ ಪ್ರರಕಣದಲ್ಲಿ ಪವಿತ್ರಾ ಗೌಡ, ದರ್ಶನ್ ಅರೆಸ್ಟ್​​ ಆಗ್ತಿದ್ದಂತೆ ಮೊನ್ನೆ ಇನ್​​ಸ್ಟಾದಲ್ಲಿ ಪತ್ನಿ ವಿಜಯಲಕ್ಷ್ಮಿ ದರ್ಶನ್​ನ ಅನ್​ಫಾಲೋ ಮಾಡಿದ್ದರು. ಅಲ್ಲದೇ ದರ್ಶನ್ ಫ್ಯಾನ್​ ಪೇಜ್​ ಅನ್​​ಫಾಲೋ ಮಾಡಿದ್ದರು. ಇನ್​​ಸ್ಟಾಗೆ ಇದ್ದ ಡಿಪಿ ಫೋಟೋ ಕೂಡ ತೆಗೆದು ಹಾಕಿದ್ದರು. ಈ ಬೆನ್ನಲ್ಲೇ ನಿನ್ನೆ ತಮ್ಮ ಇನ್​ಸ್ಟಾ ಖಾತೆಯನ್ನು ವಿಜಯಲಕ್ಷ್ಮಿ ಡಿಆ್ಯಕ್ಟಿವೇಟ್ ಮಾಡಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದ ವಿಜಯಲಕ್ಷ್ಮೀ ಅಕೌಂಟ್​ ಡಿಲೀಟ್​ ಮಾಡಿರೋದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಒಟ್ಟಾರೆ, ಕೊಲೆ ಆರೋಪಿ ಪವಿತ್ರಾ ಗೌಡ ಪರ ಮಾಜಿ ಪತಿ ನಿಂತಿರೋದು ಆಶ್ಚರ್ಯ ತಂದಿದೆ. ಮತ್ತೊಂದೆಡೆ ಸೋಷಿಯಲ್ ಮೀಡಿಯಾ ಅಕೌಂಟ್ ಡಿಆ್ಯಕ್ಟಿವೇಟ್ ಮಾಡಿರೋ ವಿಜಯಲಕ್ಷ್ಮಿ ಪ್ರಕರಣದಿಂದ ನೊಂದಿದ್ದಾರೆ ಅನ್ನೋದ್ರಲ್ಲಿ ಆಶ್ಚರ್ಯವಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​​ ಈ ಸ್ಥಿತಿಗೆ ಕಾರಣ ಯಾರು? ಪವಿತ್ರಾ ಗೌಡ ಮಾಜಿ ಗಂಡ ಸಂಜಯ್​ ಬಿಚ್ಚಿಟ್ಟ ಅಸಲಿ ಸತ್ಯ!

https://newsfirstlive.com/wp-content/uploads/2024/06/dboss13.jpg

Load More