newsfirstkannada.com

ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದ ಪವಿತ್ರಾ ರೌದ್ರಾವತಾರ.. ಕ್ರೌರ್ಯದ ರಹಸ್ಯ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

Share :

Published September 4, 2024 at 5:18pm

    ಪವಿತ್ರಾಗೌಡಗೆ ಮುಳುವಾಗುತ್ತಾ ಚಪ್ಪಲಿ, ಸಂಕಷ್ಟ ಗ್ಯಾರಂಟಿ?

    ಚಾರ್ಜ್​​ಶೀಟ್​ನಲ್ಲಿ ಪ್ರಕರಣದ ಭಯಾನಕ ಸತ್ಯ ಬಟಾ ಬಯಲು

    ಪೊಲೀಸರು ಚಪ್ಪಲಿ ಮೇಲಿನ ರಕ್ತದ ಕಲೆ ಪತ್ತೆ ಮಾಡಿದ್ದು ಹೇಗೆ?

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ A1 ಆರೋಪಿಯಾಗಿರುವ ಪವಿತ್ರಾಗೌಡಗೆ ಚಪ್ಪಲಿಯ ಹೊಡೆತವೇ ಅತಿ ದೊಡ್ಡ ಸಂಕಷ್ಟವಾಗಿದೆ. ಕೇಸ್​ನಲ್ಲಿ ಪವಿತ್ರಾಗೌಡಗೆ ವಿರುದ್ಧವಾಗಿ ಚಪ್ಪಲಿನೇ ಪ್ರಬಲ ಸಾಕ್ಷಿಯಾಗಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ವಾಶ್ ಮಾಡಿದ್ದ ದರ್ಶನ್‌ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ; ಏನಿದು ಲುಮಿನಲ್ ಟೆಸ್ಟ್‌?

ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾಗೌಡ ಚಪ್ಪಲಿಯಿಂದ ಹೊಡೆದಿರುವುದೇ ಅವರಿಗೆ ಮುಳುವಾಗುತ್ತಿದೆ. ಏಕೆಂದರೆ ಘಟನೆ ದಿನ ಪವಿತ್ರಾ ಗೌಡ ಪಟ್ಟಣಗೆರೆ ಶೆಡ್​ಗೆ ಹೋಗಿ ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದರು. ಈಗ ಅದೇ ಚಪ್ಪಲಿ ಮೇಲೆ ರೇಣುಕಾಸ್ವಾಮಿಯ ರಕ್ತದ ಕಲೆ ಇರುವುದು ಪತ್ತೆಯಾಗಿದೆ. ಇದರ ಲುಮಿನಲ್ ವರದಿಯನ್ನ ಸದ್ಯ ಚಾರ್ಜ್​ಶೀಟ್​ನಲ್ಲಿ ಪೊಲೀಸರು ಅಡಕ ಮಾಡಿದ್ದಾರೆ.

ಇದನ್ನೂ ಓದಿ: ದಾಸನಿಗೆ ಭಯ.. ಫೋನ್ ಮೂಲಕ ಪತ್ನಿ ವಿಜಯಲಕ್ಷ್ಮಿ ಜೊತೆ 5 ನಿಮಿಷ ಮಾತಾಡಿದ ದರ್ಶನ್​! 

ಪ್ರಕರಣದ ತನಿಖೆ ವೇಳೆ ಪೊಲೀಸರು ಪವಿತ್ರಾಗೌಡ ಮನೆಗೆ ಹೋಗಿ ಅಲ್ಲಿ ಪವಿತ್ರಾಗೌಡ ಚಪ್ಪಲಿಯನ್ನು ವಶಪಡಿಸಿಕೊಂಡಿದ್ದರು. ಬಳಿಕ ಚಪ್ಪಲಿಯನ್ನು ಎಫ್​​ಎಸ್​ಎಲ್​​ಗೆ ಕಳುಹಿಸಲಾಗಿತ್ತು. ಈ ವೇಳೆ ಚಪ್ಪಲಿ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಇರುವುದು ಎಫ್​​ಎಸ್​ಎಲ್ ವರದಿಯಲ್ಲಿ ದೃಢವಾಗಿದೆ. ಇದೇ ಪವಿತ್ರಾಗೌಡ ವಿರುದ್ಧ ಪ್ರಬಲ ಸಾಕ್ಷಿ ಆಗಲಿದೆ.

ಬಿಡಬೇಡಿ, ಸಾಯಿಸಿ.. ಕಿರುಚಾಡಿದ್ದ ಪವಿತ್ರಾ ಗೌಡ!
A1 ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಕೊಲೆಯಾದ ಜಾಗದಲ್ಲಿ ಏನು ಮಾಡಿದ್ರು ಅನ್ನೋದು ಇತರೆ ಆರೋಪಿಗಳಿಂದ ಗೊತ್ತಾಗಿದೆ. ರೇಣುಕಾಸ್ವಾಮಿಯನ್ನು ಸಾಯಿಸಲು ಪ್ರಚೋದನೆ ನೀಡಿದ್ದೇ ಪವಿತ್ರಾ ಗೌಡ ಎಂದು ಇತರೆ ಆರೋಪಿಗಳು ತಮ್ಮ ಹೇಳಿಕೆಯಲ್ಲಿ ನೀಡಿದ್ದಾರೆ. ಇದರಿಂದ ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಅವರ ಪಾತ್ರ ದೃಢವಾಗಿದೆ.

ಇದನ್ನೂ ಓದಿ: ‘ಅಷ್ಟೊಂದು ಸಾಕ್ಷಿನಾ?’ ಜೈಲಲ್ಲಿ ದಂಗಾದ ದರ್ಶನ್.. ಚಾರ್ಜ್​ಶೀಟ್ ಪುಟಗಳ ಸಂಖ್ಯೆ ತಿಳಿದು ಹೇಳಿದ್ದೇನು? 

ರೇಣುಕಾಸ್ವಾಮಿ ಮೇಲೆ ದರ್ಶನ್‌ ಗ್ಯಾಂಗ್‌ನ ಪ್ರತಿಯೊಬ್ಬರೂ ಹೊಡೆಯುವಾಗ ಪವಿತ್ರಾ ಗೌಡ ನಿಂತು ಕಿರುಚಾಡುತ್ತಿದ್ದಾರೆ. ಬಿಡಬೇಡಿ, ಸಾಯಿಸಿ ಅವನನ್ನ ಅಂತ ಪವಿತ್ರಾ ಕೂಗಾಡಿದ್ದಾರೆ. ಆಕೆ ಹೇಳಿದ್ದಕ್ಕೆ ನಾವು ಹಲ್ಲೆ ಮಾಡಿದ್ದೇವೆ ಅಂತ ಇತರ ಆರೋಪಿಗಳು ಹೇಳಿಕೆ ನೀಡಿದ್ದಾರೆ. ರೇಣುಕಾಸ್ವಾಮಿಯನ್ನು ಬಿಡಬೇಡಿ ಸಾಯಿಸಿ ಅಂದಿದ್ದ ಪವಿತ್ರಾ ಗೌಡ ಅವರ ಹೇಳಿಕೆಯಿಂದಲೇ ಪವಿತ್ರಾ ಗೌಡ ಅವರನ್ನು ಪೊಲೀಸರು A1 ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದ ಪವಿತ್ರಾ ರೌದ್ರಾವತಾರ.. ಕ್ರೌರ್ಯದ ರಹಸ್ಯ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

https://newsfirstlive.com/wp-content/uploads/2024/09/PAVITRA_GOWDA-2.jpg

Load More