/newsfirstlive-kannada/media/post_attachments/wp-content/uploads/2024/07/Pavitra-Gowda-9.jpg)
‘ವಿಜಯಲಕ್ಷ್ಮೀ ಏನ್​ ಬಟ್ಟೆ ಹಾಕ್ತಾರೆ ಅದೇ ಬಟ್ಟೆ ಬೇಕು. ಅವ್ರು ಏನು ಒಡವೆ ಹಾಕ್ತಾರೆ ಅದೇ ಒಡವೆ ಬೇಕು. ಅವರು ಕಾರಲ್ಲಿ ಇಳಿದರೆ ಹಂಗೆ ಇವ್ರು ಕಾರಲ್ಲಿ ಇಳಿಬೇಕು’ ಎಂದು ಆಶಿಕಿ ನಿರ್ದೇಶಕಿ ಚಂದ್ರಕಲಾ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್​ ಮತ್ತು ಪವಿತ್ರಾ ಗೌಡ ಬಗ್ಗೆ ಮಾತನಾಡಿದ ನಿರ್ದೇಶಕಿ ಚಂದ್ರಕಲಾ ಈ ಪ್ರಕರಣದಲ್ಲಿ ದರ್ಶನ್​ಗೆ ಪಶ್ಚಾತ್ತಾಪ ಆಗಿರುತ್ತೆ. ಪವಿತ್ರಾಳಿಂದ ದೂರ ಉಳಿದುಕೊಳ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಒಂದೇ ವರ್ಷದಲ್ಲಿ 326 ಬಾಲೆಯರು ಮದುವೆಗೂ ಮುನ್ನ ಪ್ರೆಗ್ನೆಂಟ್​! ಇದು ಬೇರೆಲ್ಲೂ ಅಲ್ಲ ತುಮಕೂರಲ್ಲಿ!
ಕೊಲೆಯಾಗಲಿ, ದರೋಡೆಯಾಗಲಿ ಆಯಮ್ಮನಿಗೆ ಏನು ಬೇಕಿಲ್ಲ. ನನಗೆ ಬೇಕಿರೋದೇನು ದರ್ಶನ್​. ನಾನು ಸೆಟಲ್​ ಆಗಬೇಕು. ನಾನು ಗೆಲ್ಲಬೇಕು. ಕರ್ನಾಟಕದ ಬಾಕ್ಸ್​ ಆಫೀಸು ಸುಲ್ತಾನನೇ ಸಿಕ್ಕಿರುವಾಗ ಎಲ್ಲಾ ನೋಡೋದು ಅದೇ ರೇಂಜ್​ನಲ್ಲಿ ಇರುತ್ತದೆ ಎಂದು ಪವಿತ್ರಾ ಗೌಡ ಕುರಿತಾಗಿ ಚಂದ್ರಕಲಾ ಅಚ್ಚರಿಯ ಮಾತನಾಡಿದ್ದಾರೆ.
ಪವಿತ್ರಾ ಟ್ರ್ಯಾಪ್​​ಗೆ ದರ್ಶನ್ ತಗ್ಲಾಕೊಂಡ್ರು. ಅವಳಿಗೆ ಪಶ್ಚಾತ್ತಾಪ ಅನ್ನೋದೆ ಇಲ್ಲ. ನನಗೋಸ್ಕರ ಒಂದು ಕೊಲೆ ಆಯ್ತಲ್ಲಾ ಅಂತಾ ಖುಷಿ ಪಟ್ಟಿರುತ್ತಾಳೆ. ಆಕೆಯ ಬ್ರ್ಯಾಂಡ್​ ಹುಚ್ಚಿಗೆ ಗದ್ದುಗೆ ಸಿಕ್ತಲ್ಲ. ನಾನು ಸೆಟಲ್​ ಆಗಬೇಕು ಅನ್ನೋ ಖುಷಿಯಲ್ಲಿ ಬೇರೆಯವರು ಕೂತಿರುವ ಚೇರ್​​​ನಿಂದ ಎಬ್ಬಿಸಿ, ತಿನ್ನುತ್ತಿರುವ ಅನ್ನ ಕಿತ್ತುಕೊಂಡು ಏನು ಸೆಟಲ್​ ಆದ್ರೂ ಏನು ಪ್ರಯೋಜನ ಎಂದು ನಿರ್ದೇಶಕಿ ಚಂದ್ರಕಲಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us