newsfirstkannada.com

2 ಕೋಟಿಗೆ ಹೊಸ ಮನೆ ಖರೀದಿಸಿದ್ದ ಪವಿತ್ರಾ; ಸೌಂದರ್ಯ ಜಗದೀಶ್​​ ಆತ್ಮಹತ್ಯೆ ಹಿಂದೆ ‘ಡಿ’​ ಗ್ಯಾಂಗ್​?

Share :

Published June 24, 2024 at 10:14pm

    ರೇಣುಕಾ ಕೊಲೆ ಕೇಸ್​ನಲ್ಲಿ ದರ್ಶನ್​ ಸೇರಿ 17 ಆರೋಪಿಗಳು ಜೈಲುಪಾಲು

    ಸೌಂದರ್ಯ ಜಗದೀಶ್​ ‘ಡಿ’ ಗ್ಯಾಂಗ್​ ಜೊತೆಗಿನ ಆರ್ಥಿಕ ವ್ಯವಹಾರ ಬೆಳಕಿಗೆ

    ಹಣದ ವರ್ಗಾವಣೆಗೂ ಸಂಬಂಧ ಇದೆಯಾ ಎನ್ನುವ ಅನುಮಾನ ಶುರು!

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಮತ್ತು ಪವಿತ್ರಾ ಗೌಡ ಜೈಲುಪಾಲಾದ ಬೆನ್ನಲ್ಲೇ ಇದೀಗ ಮತ್ತೊಂದು ಆರೋಪ ಕೇಳಿ ಬರ ತೊಡಗಿದೆ. ಕೆಲ ತಿಂಗಳ ಹಿಂದೆ ಸಾವಿಗೆ ಶರಣಾದ ಸೌಂದರ್ಯ ಜಗದೀಶ್​ ಹಾಗೂ ದರ್ಶನ್​, ಪವಿತ್ರಾ ಗೌಡ ನಡುವೆ ಹಣದ ವ್ಯವಹಾರ ಇದ್ದ ಬಗ್ಗೆ ದಾಖಲೆ ಪತ್ತೆಯಾಗಿದ್ದು. ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಕೇಸ್​ಗೆ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಸ್ಯಾಂಡಲ್​ವುಡ್​ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್​ಗೆ ಇದೀಗ ಬಿಗ್ ​ಟ್ವಿಸ್ಟ್​ ಸಿಕ್ಕಿದೆ. ಸೌಂದರ್ಯ ಜಗದೀಶ್​ ಮತ್ತು ‘ಡಿ’ ಗ್ಯಾಂಗ್​ ಜೊತೆಗಿನ ಆರ್ಥಿಕ ವ್ಯವಹಾರ ಬೆಳಕಿಗೆ ಬಂದಿದ್ದು, ಸೌಂದರ್ಯ ಜಗದೀಶ್​​ ಆತ್ಮಹತ್ಯೆ ಹಿಂದೆ ‘ಡಿ’​ ಕರಿನೆರಳು ಮೂಡತೊಡಗಿದೆ.

ಇದನ್ನೂ ಓದಿ: ಜಿಮ್‌ ಟ್ರೈನರ್‌ಗೆ ಕಂಡೀಷನ್ ಹಾಕಿ ಮದುವೆ.. ಫೇಲ್ ಆಗಿದ್ದಕ್ಕೆ ಗಂಡನಿಗೆ ಡಿವೋರ್ಸ್​; ಕಾರಣವೇನು?

ಸೌಂದರ್ಯ ಜಗದೀಶ್​ ಸಾವಿನ ಕುರಿತಂತೆ ಹೊಸ ಸುದ್ದಿಯೊಂದು ಬೆಳಕಿಗೆ ಬಂದಿದೆ. ಜಗದೀಶ್‌ ಅಕೌಂಟ್‌ನಿಂದ ಕೋಟಿಗಟ್ಟಲೆ ಹಣ ಪವಿತ್ರಾ ಗೌಡ ಅಕೌಂಟ್‌ಗೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಇದೀಗ ಜಗದೀಶ್ ಸೂಸೈಡ್‌ಗೂ ಈ ಹಣದ ವರ್ಗಾವಣೆಗೂ ಸಂಬಂಧ ಇದೆಯಾ ಎನ್ನುವ ಅನುಮಾನ ಶುರುವಾಗಿದೆ. ಪತಿ ಸೌಂದರ್ಯ ಜಗದೀಶ್​ ಸಾವಿಗೆ ವ್ಯಾವಹಾರಿಕ ಪಾಲುದಾರರೇ ಕಾರಣ ಎಂದು ಸೌಂದರ್ಯ ಜಗದೀಶ್​ ಪತ್ನಿ ಆರೋಪ ಮಾಡಿದ್ದರು. ಹೀಗಾಗಿ ಮಹಾಲಕ್ಷ್ಮಿ ಲೇಔಟ್​ ಪೊಲೀಸರು ಪಾಲುದಾರಿಕರಾದ ಸುರೇಶ್​ ಎಂಬುವರರನ್ನು ವಿಚಾರಣೆಗೆ ಒಳಪಡಿಸಿದ್ರು. ಈ ವೇಳೆ ಪವಿತ್ರಾಗೌಡ ಮತ್ತು ಸೌಂದರ್ಯ ಜಗದೀಶ್​ ನಡುವಿನ ಹಣಕಾಸಿನ ವ್ಯವಹಾರ ಬಯಲಾಗಿದೆ.

ಪವಿತ್ರಾ ಗೌಡ ಮನೆ ಖರೀದಿಗೆ 2 ಕೋಟಿ ಕೊಟ್ರಾ ಸೌಂದರ್ಯ ಜಗದೀಶ್?

ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪಾಲುದಾರ ಸುರೇಶ್ ಎಂಬುವವರು ಹಣದ ವ್ಯವಹಾರದ ದಾಖಲೆಯನ್ನು ಪೊಲೀಸರಿಗೆ ನೀಡಿದ್ದಾರೆ. ಇದರಲ್ಲಿ ಒಟ್ಟು 2 ಕೋಟಿ ಹಣ ಪವಿತ್ರಾ ಗೌಡ ಖಾತೆಗೆ ವರ್ಗಾವರಣೆ ಆಗಿರೋದು ತಿಳಿದು ಬಂದಿದೆ. 2017 ನವೆಂಬರ್​ 13ರಂದು ಪವಿತ್ರಾ ಗೌಡಗೆ 1 ಕೋಟಿ ರೂ. ವರ್ಗಾವಣೆ ಆಗಿದೆ. ಇದಾದ ಬಳಿಕ 2018ರ ಜನವರಿ 23 ರಂದು ಪವಿತ್ರಾ ಗೌಡಗೆ ಮತ್ತೆ 1 ಕೋಟಿ ರೂ. ವರ್ಗಾವಣೆ ಆಗಿದೆ. ಒಟ್ಟು ಎರಡು ಕೋಟಿ ಹಣ ಬರುತ್ತಿದ್ದಂತೆ ಹೊಸ ಮನೆ ಖರೀದಿಸಿದ್ದ ಪವಿತ್ರಾ ಗೌಡ. 2018ರ ಜನವರಿ 24ರಂದು ಆರ್​ಆರ್​ ನಗರದ ಕೆಂಚನಹಳ್ಳಿಯಲ್ಲಿ ₹1.75 ಕೋಟಿಗೆ ನಟ ದರ್ಶನ್​ ಗೆಳತಿ ಪವಿತ್ರಾ ಗೌಡ ಮನೆ ಖರೀದಿಸಿದ್ದಾಳೆ. ಇನ್ನು, ಮನೆ ಖರೀದಿಯ ಪತ್ರದಲ್ಲಿ ಸಾಕ್ಷಿಯಾಗಿ ಸೌಂದರ್ಯ ಜಗದೀಶ್​ ಸಹಿ ಹಾಕಿದ್ದಾರೆ. ಈ ಹಣದ ವ್ಯವಹಾರವನ್ನು ಸೌಂದರ್ಯ ಜಗದೀಶ್​ ಪಾಲುದಾರರಿಂದ ಮುಚ್ಚಿಟ್ಟಿದ್ದರು ಎಂದು ಹೇಳಲಾಗ್ತಿದೆ.

ದರ್ಶನ್​ ಕಾರಣಕ್ಕೆ 2 ಕೋಟಿ ಕೊಟ್ಟರಾ ಸೌಂದರ್ಯ ಜಗದೀಶ್?

ಸೌಂದರ್ಯ ಜಗದೀಶ್ ಕಳೆದ ಏಪ್ರಿಲ್ 14ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಆ ಬಳಿಕ ಪಾಲುದಾರರ ವಿರುದ್ಧವೇ ಸೌಂದರ್ಯ ಜಗದೀಶ್ ಪತ್ನಿ ರೇಖಾ ಅವರು ದೂರು ನೀಡಿದ್ದರು. ಇದಾದ ಮೇಲೆ ಸೌಂದರ್ಯ ಜಗದೀಶ್ ವ್ಯವಹಾರದ ದಾಖಲೆಯನ್ನು ಪಾಲುದಾರರು ಕಲೆ ಹಾಕಿದ್ದಾರೆ. ನಟ ದರ್ಶನ್​ ಹಾಗೂ ಸೌಂದರ್ಯ ಜಗದೀಶ್​ ಸಾಕಷ್ಟು ಆಪ್ತರಾಗಿದ್ದರು. ಹೀಗಾಗಿ ದರ್ಶನ್ ಒತ್ತಡಕ್ಕೆ ಮಣಿದು ಸೌಂದರ್ಯ ಜಗದೀಶ್ ಅವರು 2 ಕೋಟಿ ರೂಪಾಯಿ ಹಣ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದ್ರೆ ಈ ಆರೋಪವನ್ನು ಸೌಂದರ್ಯ ಜಗದೀಶ್​ ಪತ್ನಿ ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: ಮುದ್ದು ಮುದ್ದಾದ ಅವಳಿ ಶಿಶುಗಳನ್ನೇ ಸುಟ್ಟು ಹಾಕಿದ ಪಾಪಿ ತಂದೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ನನಗೂ ಗೊತ್ತಿಲ್ಲ. ಮಾಧ್ಯಮದಲ್ಲಿ ನೋಡಿದ್ದೇನೆ ಅಷ್ಟೇ. ಲಾಸ್ಟ್ ಟೈಮ್ ಪಾಲುದಾರರ ಮೇಲೆ ಕೇಸ್ ಆಗಿ ತನಿಖೆ ನಡೀತಿದೆ. 25 ದಿನ ನಾಪತ್ತೆ ಆಗಿದ್ದರು. ಈಗ ಬೇಲ್ ಮೇಲೆ ಹೊರಗಡೆ ಬಂದಿದ್ದಾರೆ. ಅವರು ಹೋಗಿ ಏನೆಲ್ಲ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ ಗೊತ್ತಿಲ್ಲ. ಯಜಮಾನ್ರು ಸಾವನ್ನಪ್ಪಿದಕ್ಕೆ ಕಾರಣ ಪಾಟ್ನರ್ಸ್ ಅನ್ನೋದು ನಮಗೆ ಗೊತ್ತಿದೆ. ಈಗಾಗಲೇ ನಾವು ನೋವಲ್ಲಿ ಇದ್ದೇವೆ. ಸಡನ್ ಆಗಿ ನಮ್ಮ ಯಜಮಾನ್ರ ಹೆಸರು ನೋಡಿ ಆಶ್ಚರ್ಯ ಆಯ್ತು. ಆ ರೀತಿಯಾಗಿ ಅಮೌಂಟ್ ಕೊಟ್ಟಿರುವ ಬಗ್ಗೆ ಗೊತ್ತಿಲ್ಲ. ಅದರಿಂದ ಏನು ತೊಂದರೆ ಆಗಿಲ್ಲ, ಅದರಿಂದ ನಮ್ಮ ಯಜಮಾನ್ರು ಸತ್ತಿಲ್ಲ. ನಾನು ಸ್ಟೇಟ್‌ಮೆಂಟ್ ತಗೊಂಡು ಮಾತನಾಡುತ್ತೇನೆ. ದರ್ಶನ್, ಪವಿತ್ರ ಗೌಡ ಜೊತೆಗೆ ನಮ್ಮ ಯಜಮಾನ್ರು ಯಾವುದೇ ವ್ಯವಹಾರ ಮಾಡಿಲ್ಲ, ಖಂಡಿತ ಇಲ್ಲ. ದರ್ಶನ್ ಅವರ ಜೊತೆಗೂ ಯಾವುದೇ ಸಿನಿಮಾ ಮಾತುಕತೆ ಆಗಿರಲಿಲ್ಲ. ಒಂದು ಸಿನಿಮಾ ಅನೌನ್ಸ್ ಆಗಿತ್ತು. ಆದರೆ ಕೋವಿಡ್ ಇರುವುದರಿಂದ ಮುಂದಕ್ಕೆ ಹೋಯ್ತು ಆಮೇಲೆ ಮಾಡೋಣ ಅಂತ ಸುಮ್ಮನೆ ಆಗಿದ್ದೇವೆ.

ಶಶಿರೇಖಾ, ಸೌಂದರ್ಯ ಜಗದೀಶ್​ ಪತ್ನಿ

‘ಡಿ’ ಗ್ಯಾಂಗ್​​​ನಿಂದ ನಷ್ಟ?

‘ಡಿ’ ಗ್ಯಾಂಗ್​​ನಿಂದ ಜಗದೀಶ್​ಗೆ ಸಾಲು ಸಾಲು ಸಂಕಷ್ಟ!
ಡಿ ಗ್ಯಾಂಗ್​​ನಿಂದಾಗಿ 25 ದಿನ ಬಂದ್​ ಆಗಿದ್ದ ಜೆಟ್​​ಲ್ಯಾಗ್​
ಸಕ್ಸಸ್​ ಪಾರ್ಟಿ ನೆಪದಲ್ಲಿ ತಡರಾತ್ರಿವರೆಗೆ ಡಿ ಗ್ಯಾಂಗ್​ ಪಾರ್ಟಿ
ಜಗದೀಶ್​ ಮಾಲೀಕತ್ವದ ಜೆಟ್​​ಲ್ಯಾಗ್​​ನಲ್ಲಿ ಲೇಟ್​ ನೈಟ್ ಪಾರ್ಟಿ
ಮುಂಜಾನೆಯವರೆಗೆ ಪಾರ್ಟಿ ಮಾಡಿದ್ದಕ್ಕೆ ಕೇಸ್ ದಾಖಲಾಗಿತ್ತು
ವಿಚಾರಣೆ ವೇಳೆ ಪಬ್​​ನ ತಪ್ಪು ಎಂದು ವಾದಿಸಿದ್ದ ‘ಡಿ’ ಗ್ಯಾಂಗ್​​
ಅದೇ ಕಾರಣಕ್ಕೆ 25 ದಿನ ಲೈಸೆನ್ಸ್​ ರದ್ದು ಮಾಡಿದ್ದ ಅಬಕಾರಿ ಇಲಾಖೆ
ಎಂಜಾಯ್​ ಮಾಡಿದ್ದು ಇವರು, ನಷ್ಟ ಅನುಭವಿಸಿದ್ದು ಜಗದೀಶ್​​

ಒಟ್ಟಾರೆ ಪವಿತ್ರಾ ಗೌಡ ಮತ್ತು ಸೌಂದರ್ಯ ಜಗದೀಶ್​ ನಡುವಿನ ಹಣವ ವ್ಯವಹಾರ ಬಯಲಾಗ್ತಿದ್ದಂತೆ, ಇದರ ಹಿಂದೆ ಡಿ ಗ್ಯಾಂಗ್​ ಕರಿನೆರಳು ಕಾಣಿಸಿದೆ. ದರ್ಶನ್​ ಒತ್ತಡದ ಅನುಮಾನದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸೌಂದರ್ಯ ಜಗದೀಶ್​ ಸಾವಿನ ಹಿಂದಿನ ಅಸಲಿ ರಹಸ್ಯವನ್ನು ಪೊಲೀಸರು ಪತ್ತೆ ಹಚ್ಚಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2 ಕೋಟಿಗೆ ಹೊಸ ಮನೆ ಖರೀದಿಸಿದ್ದ ಪವಿತ್ರಾ; ಸೌಂದರ್ಯ ಜಗದೀಶ್​​ ಆತ್ಮಹತ್ಯೆ ಹಿಂದೆ ‘ಡಿ’​ ಗ್ಯಾಂಗ್​?

https://newsfirstlive.com/wp-content/uploads/2024/06/darshan55.jpg

Load More