newsfirstkannada.com

×

ದರ್ಶನ್​​ ಸಾಕಿದ ಬುಲ್​​ ಬುಲ್ ಹದ್ದಾಗಿ ಕುಕ್ಕಿತಾ? ರೇಣುಕಾಸ್ವಾಮಿ ಅಂತ್ಯಕ್ಕೆ ಅಮ್ಮಾಜಿ ಆಜ್ಞೆ ಏನು ಗೊತ್ತಾ?

Share :

Published September 9, 2024 at 9:09pm

Update September 9, 2024 at 9:10pm

    ಸ್ವಇಚ್ಛಾ ಹೇಳಿಕೆಯಲ್ಲಿ ತನ್ನ ತಪ್ಪೇ ಇಲ್ಲ ಎಂದಿರುವ ಪವಿತ್ರಾ ಗೌಡ

    ದರ್ಶನ್​ಗೆ ಉಲ್ಟಾ ಹೊಡೆದರಾ? ಏನಿದು ಪವಿತ್ರಾ ಗೌಡ ಖೆಡ್ಡಾ?

    ಬುಲ್ ಬುಲ್ ಮಿಸ್ಸಾಯ್ತು, ದರ್ಶನ್​​ಗೆ ಫಿಕ್ಸಾಯ್ತು ಲವ್ ಸ್ಟೋರಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಜಾರ್ಜ್​​ಶೀಟ್​​ ರಣರೋಚಕ ರಹಸ್ಯಗಳನ್ನು ಬಿಚ್ಚಿಡುತ್ತಿದೆ. ಒಬ್ಬೊಬ್ಬ ಆರೋಪಿ ಕೊಟ್ಟ ಸ್ವಇಚ್ಛಾ ಹೇಳಿಕೆ ಒಂದೊಂದು ಮಗ್ಗುಲಿನ ಕಥೆಯನ್ನು ಹೇಳುತ್ತಿದೆ. ಅದರಲ್ಲೂ ಮುಖ್ಯವಾಗಿ ಈ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ದರ್ಶನ್​​​ ಪಾಲಿಗೆ ಮಹಾ ಕಂಟಕ ಆಗಿದ್ದಾರೆ ಅನ್ನೋ ಸುಳಿವು ಬಿಟ್ಟುಕೊಟ್ಟಿದೆ. ಮೂರು ಪುಟಗಳ ಪವಿತ್ರಾ ಗೌಡಾಳ ಸ್ವ ಇಚ್ಛಾ ಹೇಳಿಕೆಯಲ್ಲಿ ರೇಣುಕಾ ಕೊಟ್ಟ ಕಿರುಕುಳ ಎಂಥದ್ದು? ಆ ಬಳಿಕ ಪಟ್ಟಣಗೆರೆ ಶೆಡ್​​ನಲ್ಲಿ ಏನೇನಾಯ್ತು ಅನ್ನೋದನ್ನ ಸಾರಿ ಸಾರಿ ಹೇಳುತ್ತಿದೆ.

ದರ್ಶನ್​ಗೆ ಉಲ್ಟಾ ಹೊಡೆದರಾ? ಏನಿದು ಪವಿತ್ರಾರ ಖೆಡ್ಡಾ?
ಮೂರು ಪುಟಗಳ ಸ್ವ ಇಚ್ಛಾ ಹೇಳಿಕೆ ಪವಿತ್ರಾ ಗೌಡ ಪೊಲೀಸರ ಎದುರು ತೆರೆದಿಟ್ಟ ಚಿತ್ರಣ. ರೇಣುಕಾಸ್ವಾಮಿ ಕೊಲೆ ಹೇಗಾಯ್ತು? ಯಾರು ಮಾಡಿದ್ದು? ಏಕೆ ಮಾಡಿದ್ದು? ಅನ್ನೋ ಪ್ರಶ್ನೆಗಳಿಗೆ ಖುದ್ದು ಪವಿತ್ರಾ ಗೌಡ ಪೊಲೀಸರು ಹೇಳಿದ ಒಪ್ಪಿಗೆಯ ಬರಹವಿದು. ಇದೇ ಮೂರು ಪುಟಗಳ ಸ್ವ ಇಚ್ಛಾ ಹೇಳಿಕೆಯಲ್ಲೇ 10 ಬಹುಮುಖ್ಯ ಸಂಗತಿಗಳು ದರ್ಶನ್​​ ಪಾಲಿಗೆ ಬಹುದೊಡ್ಡ ಕಂಟಕ ತರಲಿವೆ ಅನ್ನೋದನ್ನ ಸಾರಿ ಸಾರಿ ಹೇಳುತ್ತಿವೆ. ಪವಿತ್ರಾ ಗೌಡ ಹದ್ದಾಗಿ ಎಷ್ಟು ಸಲ ಕುಟುಕಿದ್ದಾರೆ? ಗಜನನ್ನ ಪವಿತ್ರಾ ಖೆಡ್ಡಾ ತೋಡಿ ಹೇಗೆ ಬೀಳಿಸಿದಳು ಅನ್ನೋದು ಸ್ಪಷ್ಟವಾಗುತ್ತೆ.

ಪವಿತ್ರಾ ಖೆಡ್ಡಾ 1:ಬುಲ್ ಬುಲ್ ಮಿಸ್ಸಾಯ್ತು, ದರ್ಶನ್​​ಗೆ ಫಿಕ್ಸಾಯ್ತು!
ಪವಿತ್ರಾ ಗೌಡ ಅನ್ನೋ ಈ ಅಂದದ ಚೆಂದದ ಬಿಂಕದ ಚೆಂದುಳ್ಳಿ ಚೆಲುವೆ ದರ್ಶನ್​​​ರನ್ನು ಅಕ್ಷರಶಃ ಖೆಡ್ಡಾಕ್ಕೆ ಬೀಳಿಸಿಕೊಂಡಿದ್ದಾರೆ. ರೀಲ್ಸ್​​ ನೋಡಿ ರಾಂಗ್ ಆದ ರೇಣುಕಾಸ್ವಾಮಿಯಂತೆಯೇ ಪವಿತ್ರಾ ಗೌಡ ಕೂಡ ದರ್ಶನ್​ರನ್ನು ಮೊದಲು ಕ್ಯಾಚ್ ಹಾಕಿಕೊಂಡಿದ್ದು ಮೆಸೇಜ್​​ ಮೂಲಕವೇ. ಇಂಥದ್ದೊಂದು ಸಂಗತಿಯನ್ನು ಖುದ್ದು ಪವಿತ್ರಾ ಪೊಲೀಸರಿಗೆ ನೀಡಿರೋ ಸ್ವ ಇಚ್ಛಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬುಲ್​​​ ಬುಲ್ ಸಿನಿಮಾದ ನಟಿ ಆಯ್ಕೆಗಾಗಿ ಆಡಿಷನ್​​ ನಡೆದಿತ್ತು. ಅವತ್ತು ರಚಿತಾ ರಾಮ್​​ ತುಸು ಮುಂಚೆ ಬಂದಿದ್ದರಿಂದಾಗಿ ಪವಿತ್ರಾ ಗೌಡಗೆ ಬುಲ್ ಬುಲ್ ಮಿಸ್ಸಾಗಿತ್ತು. ದರ್ಶನ್​​ ಪವಿತ್ರಾ ಪಾಲಿಗೆ ಫಿಕ್ಸ್​ ಆಗಿದ್ರು.

2014ರಲ್ಲಿ ಬುಲ್​​ ಬುಲ್ ಚಿತ್ರದ ಅಡೀಷನ್‌ಗೆ ಹೋಗಿದ್ದಾಗ, ನನ್ನ ಮಾಡಲಿಂಗ್ ಪ್ರೊಫೈಲನ್ನು ದರ್ಶನ್​ರವರಿಗೆ ಶೇರ್​ ಮಾಡಿ, ಅವರೊಂದಿಗೆ ಮಾತನಾಡಲು ಅವರ ಮೊಬೈಲ್ ನಂಬರ್‌ನ್ನು ಪರಿಚಿತ ಮ್ಯಾನೇಜರ್​​ರವರಿಂದ ಕೊಂಡಿರುತ್ತೇನೆ. ಈ ವಿಚಾರವಾಗಿ ದರ್ಶನ್​ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಬುಲ್ ಬುಲ್ ಚಿತ್ರಕ್ಕೆ ಆಗಲೇ ಆಡಿಷನ್ ಮುಗಿದಿದ್ದು, ಬೇರೆ ಇನ್ನು ಯಾವುದಾದರೂ ಚಿತ್ರಕ್ಕೆ ಅವಶ್ಯಕತೆ ಇದ್ದರೆ ತಿಳಿಸುವುದಾಗಿ ಹೇಳಿರುತ್ತಾರೆ. ನಂತರ ಇದನ್ನೇ ನೆಪವಾಗಿಟ್ಟಿಕೊಂಡು ಪ್ರತಿದಿನ ದರ್ಶನ್​​ ಅವರೊಂದಿಗೆ ಫೋನ್​​ನಲ್ಲಿ, ವಾಟ್ಸಾಪ್​​ನಲ್ಲಿ, ಚಾಟಿಂಗ್​ ಮತ್ತು ದೂರವಾಣಿ ಕರೆ ಮಾಡಿ ಮಾತಾಡುತ್ತಿದ್ದೆವು.
ಥೇಟ್​​ ರೇಣುಕಾಸ್ವಾಮಿ ರೀತಿಯಲ್ಲೇ ಮೊದಲು ಪವಿತ್ರಾ ಗೌಡ ದರ್ಶನ್​ರನ್ನ ತನ್ನತ್ತ ಸೆಳೆದುಕೊಂಡಿರುವುದು ಕಾಣುತ್ತದೆ. ಖುದ್ದು ಪವಿತ್ರಾ ಗೌಡ ಕೊಟ್ಟಿರೋ ಹೇಳಿಕೆಯನ್ನೇ ನೋಡಿದರೆ, ದರ್ಶನ್​​ ಟೀಮ್ ಬುಲ್ ಬುಲ್ ಆಡೀಷನ್​​ ಮುಗಿದಿದೆ ಎಂದ ಮೇಲೂ ದುಂಬಾಲು ಬಿದ್ದು ಮ್ಯಾನೇಜರ್​ ಮೂಲಕ ದರ್ಶನ್​ ನಂಬರ್​ ಪಡೆದುಕೊಂಡಿದ್ದಾಳೆ ಪವಿತ್ರಾ. ಆ ಬಳಿಕ ಫೋನೂ, ಮೆಸೇಜು, ಚಾಟು, ವಾಟ್ಸಾಪು ಅಂತ ಟ್ರ್ಯಾಕಿಗೆ ತೆಗೆದುಕೊಂಡಿದ್ದಾಳೆ ಪವಿತ್ರಾ.

ಪವಿತ್ರಾ ಖೆಡ್ಡಾ 2 :ದರ್ಶನ್​ ಪವಿತ್ರಾ ಪ್ರೀತಿ ಸಲುಗೆ ಬೆಲೆ ₹1.75 ಕೋಟಿನಾ?
ಪವಿತ್ರಾ ಗೌಡ ಅನ್ನೋ ಈ ರೀಲ್ಸ್​ ರಾಣಿ ಕೊಟ್ಟಿರೋ ಹೇಳಿಕೆ ಸಾಕಷ್ಟು ಸಂಗತಿಗಳನ್ನು ಮುಂದಿಡುತ್ತಿದೆ. ಕೇವಲ​ ಫೋನ್ ಮೂಲಕವೇ ದರ್ಶನ್​​ನನ್ನ ಟ್ರ್ಯಾಕಿಗೆ ತಂದುಕೊಂಡ ಪವಿತ್ರಾ ತಮ್ಮಿಬ್ಬರ ಸಂಬಂಧ ಎಂಥದ್ದು ಅನ್ನೋದನ್ನ ಹೇಳಿಕೊಂಡಿದ್ದಾಳೆ. ನಮ್ಮಿಬ್ಬರದ್ದು ಪ್ರೀತಿ, ಸಲುಗೆ ಅನ್ನೋ ಎರಡು ಶಬ್ಧಗಳ ಸಾಲಿನ ಮೂಲಕ ವಿವರಿಸಿದ್ದಾಳೆ.

ಪವಿತ್ರಾ ಗೌಡ ಸ್ವಇಚ್ಛಾ ಹೇಳಿಕೆ 
ನನಗೆ ಪರಿಚಯವಾದ ದರ್ಶನ್​ ಅವರನ್ನು ಆಗಾಗ್ಗೆ ಭೇಟಿ ಮಾಡಿ ಸಲುಗೆಯಿಂದ ಇದ್ದು, ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದೆವು. ದರ್ಶನ್​ರವರು ವಿಜಯಲಕ್ಷ್ಮಿಯವರೊಂದಿಗೆ ಮದುವೆಯಾಗಿ ಮಗ ಇರುವ ವಿಚಾರ ನನಗೆ ತಿಳಿದಿರುತ್ತದೆ. ನಾವು ವಾಸ ಮಾಡುತ್ತಿದ್ದ ಜೆ.ಪಿ ನಗರ ಮನೆಗೆ ದರ್ಶನ್​ ಬರುತ್ತಿದ್ದು, ನಾವು ಲಾಂಗ್​ಡ್ರೈವ್ ಹೋಗುತ್ತಿದ್ದವು. ನನ್ನ ಮಗಳು ಹಾಗೂ ದರ್ಶನ್ ಮೂರು ಜನರು ವಾಸ ಮಾಡಲೆಂದು ಆರ್​ಆರ್​ ನಗರದ ದರ್ಶನ್​​ ಮನೆಯ ಹತ್ತಿರ 2018ರಲ್ಲಿ ಮನೆಯನ್ನು ನನ್ನ ಹೆಸರಿಗೆ ಖರೀದಿ ಮಾಡಿರುತ್ತಾರೆ.

ಇದನ್ನೂ ಓದಿ: ದರ್ಶನ್‌ಗೂ ಮುಂಚೆ ಪವಿತ್ರಾಗೌಡ ಲೈಫ್ ಹೇಗಿತ್ತು; ಮೊದಲ ಪತಿಗೆ ಡಿವೋರ್ಸ್​ ಕೊಟ್ಟ ಅಸಲಿ ಕಾರಣವೇನು?
ದರ್ಶನ್​​ ಪರಿಚಯ ಆದ ಕೂಡಲೇ ಪ್ರೀತಿ ಶುರುವಾಯ್ತು. ಸಲುಗೆಯಿಂದ ಇರುತ್ತಿದ್ದೆವು ಅನ್ನೋ ಮಾತಿನ ಮೂಲಕ ತಮ್ಮಿಬ್ಬರ ಸಂಬಂಧ ಎಂಥದ್ದು ಅನ್ನೋದನ್ನ ಹೇಳಿಕೊಂಡಿದ್ದಾರೆ. ಪವಿತ್ರಾ ದರ್ಶನ್​​ ಪ್ರೀತಿ ಸಲುಗೆ ಬೆಲೆ ಎಷ್ಟು ಅನ್ನೋದಕ್ಕೆ ಮುಂದಿನ ಸಾಲುಗಳಲ್ಲಿ ಮನೆ ಖರೀದಿಸಿದ ವಿಚಾರವನ್ನೂ ಉಲ್ಲೇಖಿಸಿದ್ದಾರೆ. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ ಸೌಂದರ್ಯ ಜಗದೀಶ್​​ ಬಳಿ 1.75 ಕೋಟಿ ಹಣ ಪಡೆದುಕೊಂಡು, ಆ ಹಣದಿಂದಲೇ ದರ್ಶನ್​​ ತಮ್ಮ ಹೆಸರಿಗೆ ಒಂದು ಮನೆಯನ್ನು ಖರೀದಿಸಿದ್ದಾರೆ ಅನ್ನೋದನ್ನೂ ಹೇಳಿದ್ದಾಳೆ. ಈ ಮೂಲಕ ದರ್ಶನ್​ ಭೇಟಿಯಾದ ಕೆಲವೇ ದಿನಗಳಲ್ಲೇ ಪವಿತ್ರಾ ಕೋಟಿ ಕೋಟಿ ಬೆಲೆಯ ಮನೆಯ ಮಾಲೀಕಳಾದರು. ಇದೇ ಸಂದರ್ಭವೇ ದರ್ಶನ್​​ ಕಾರಣದಿಂದ ಯಾರೆಲ್ಲಾ ಗೊತ್ತು ಅನ್ನೋದನ್ನ ವಿವರಿಸಿದ್ದಾರೆ.

ಪವಿತ್ರಾ ಖೆಡ್ಡಾ 3:ಅಮ್ಮಾಜಿ ಅಜ್ಞೆಯಂತೆಯೇ ಪವನ್ ಕೆಲಸ ಮಾಡಿದನಾ?
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ3 ಪವನ್. ಪವಿತ್ರಾ ಗೌಡ ಸ್ವಇಚ್ಛಾ ಹೇಳಿಕೆಯಲ್ಲಿ ಇಲ್ಲಿಂದೀಚೆಗೆ ಅಸಲಿ ವಿಚಾರಗಳ ಉಲ್ಲೇಖವಾಗಿದೆ. ದರ್ಶನ್​ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್​​ನನ್ನ ಖುದ್ದು ದರ್ಶನ್​ ಪವಿತ್ರಾ ಗೌಡಾಳ ಮನೆಗೆ ಕೆಲಸಕ್ಕೆ ತಂದು ನೇಮಿಸಿದ್ದರು, ಸಂಬಳವನ್ನೂ ನೀಡುತ್ತಿದ್ದರು. ಅಸಲಿಗೆ ಅಕ್ಕ ಅಕ್ಕ ಅಕ್ಕ ಅನ್ನುತ್ತಿದ್ದ ಪವನ್ ತನ್ನ ಫೋನ್​​ನಲ್ಲಿ ಪವಿತ್ರಾ ಗೌಡ ಹೆಸರನ್ನು ಅಮ್ಮಾಜಿ ಅಂತ ಸೇವ್ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲ. ಪವಿತ್ರಾ ಗೌಡ ತನ್ನ ಮನೆಯನ್ನು ವಿಜಯಲಕ್ಷ್ಮಿಯಿಂದ 1.5 ಕಿ.ಮೀ ದೂರದಲ್ಲಿ ಇರುವಂತೆಯೇ ನೋಡಿಕೊಂಡಿದ್ದಾರೆ.

ಪವಿತ್ರಾ ಸ್ವ ಇಚ್ಛಾ ಹೇಳಿಕೆ
ರೇಣುಕಾಸ್ವಾಮಿ ಕೊಲೆ ಕೇಸ್​​​ನ ಎ1,ಎ2,ಎ3 ಈ ಮೂವರು ಒಟ್ಟಿಗೆ ಸೇರಿದ್ದು ಹೇಗೆ ಅನ್ನೋದನ್ನ ಖುದ್ದು ಪವಿತ್ರಾ ಗೌಡ ವಿವರಿಸಿರೋದು ಹೀಗೆ. ದರ್ಶನ್​ ಅಣತಿಯಂತೆಯೇ ರೇಣುಕಾಸ್ವಾಮಿ ಕಿಡ್ನಾಪ್​​ಗೂ ಮುನ್ನ ಇದೇ ಪವನ್ ಏನೆಲ್ಲಾ ಮಾಡಿದ್ದ ಅನ್ನೋದನ್ನೂ ಇಲ್ಲಿ ಪವಿತ್ರಾ ಗೌಡ ವಿವರಿಸಿದ್ದಾರೆ.

ಪವಿತ್ರಾ ಖೆಡ್ಡಾ 4 ; 2018ರಲ್ಲೇ ಗೃಹ ಪ್ರವೇಶ, ಅಂದಿನಿಂದಲೇ ಸಂಸಾರ
ಪವಿತ್ರಾ ಗೌಡ ಅನ್ನೋ ಚೆಂದುಳ್ಳಿ ಚೆಲುವ ದರ್ಶನ್​​ ಜೊತೆಗಿನದ್ದು ಪ್ರೀತಿ ಸಲುಗೆ ಅಂದಿದ್ದರು. 2018ರಲ್ಲೇ ಕೋಟಿ ಕೋಟಿ ಬೆಲೆಯ ಮನೆಯನ್ನೂ ತನ್ನ ಹೆಸರಿನಲ್ಲಿ ಖರೀದಿಸುವಂತೆ ನೋಡಿಕೊಂಡಿದ್ದಳು. ಯಾವಾಗ ಹೊಸ ಮನೆಯ ಗೃಹ ಪ್ರವೇಶ ಆಯ್ತೋ, ಆ ದಿನದಿಂದಲೇ ತಮ್ಮಿಬ್ಬರ ಸಂಸಾರವೂ ಶುರುವಾಯ್ತು ಅನ್ನೋದನ್ನ ಪವಿತ್ರಾ ಗೌಡ ಹೇಳಿಕೊಂಡಿದ್ದಾರೆ.

ಪವಿತ್ರಾ ಸ್ವ ಇಚ್ಛಾ ಹೇಳಿಕೆ 
2018ರ ಫೆಬ್ರವರಿ ಮಾಹೆಯಲ್ಲಿ ಮನೆಯ ಗೃಹ ಪ್ರವೇಶವನ್ನು ಮಾಡಿ ಅಂದಿನಿಂದ ನಾವಿಬ್ಬರೂ ಸಂಸಾರ ಮಾಡಿಕೊಂಡಿರುತ್ತೇವೆ. 2013ರಲ್ಲಿ ನಾನು ನನ್ನ ವೈಯಕ್ತಿಕ ಹಾಗೂ ಮಾಡೆಲಿಂಗ್ ವಿಚಾರದಲ್ಲಿ ನನ್ನದೇ ಆದ ಇನ್​​ಸ್ಟಾಗ್ರಾಮ್ ಹೊಂದಿರುತ್ತೇನೆ. ಸದರಿ ಖಾತೆಯನ್ನು ನಾನು ಖುದ್ದಾಗಿ ನನ್ನ ಮೊಬೈಲ್‌ನಿಂದ ನಿರ್ವಹಣೆ ಮಾಡುತ್ತಿರುತ್ತೇನೆ.

2018ರಲ್ಲೇ ದರ್ಶನ್​ ಖರೀದಿಸಿಕೊಟ್ಟಿದ್ದ ಮನೆಯ ಗೃಹ ಪ್ರವೇಶ ಆಗಿತ್ತು. ಆ ದಿನದಿಂದಲೇ ತನ್ನ ಹಾಗೂ ದರ್ಶನ್​​ ನಡುವಿನ ಸಂಸಾರ ಕೂಡ ಶುರುವಾಯ್ತು. ಆ ಕ್ಷಣದಿಂದಲೇ ಸಂಸಾರ ಮಾಡಿಕೊಂಡಿರುತ್ತೇವೆ ಎಂದಿದ್ದಾರೆ ಪವಿತ್ರಾ ಗೌಡ. ಅಷ್ಟೇ ಅಲ್ಲ, ತನ್ನ ಮಾಡೆಲಿಂಗ್ ಜೀವನ ಶುರುವಾದಾಗಲೇ ಇನ್​ಸ್ಟಾಗ್ರಾಮ್ ಖಾತೆಯೂ ಆರಂಭವಾಗಿತ್ತು. ಅದನ್ನ ತನ್ನ ಮೊಬೈಲ್​ ಫೋನ್​ನಲ್ಲೇ ನಿಭಾಯಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಪವಿತ್ರಾ ಖೆಡ್ಡಾ 5 ; ದರ್ಶನ್​​ ಕೊಡಿಸಿದ್ದ ಐಫೋನ್ ಮ್ಯಾಕ್ಸ್​ನಿಂದ್ಲೇ ಕಿರಿಕ್ಕು!
ದರ್ಶನ್​​ ಗೆಳತಿ ಪವಿತ್ರಾ ಗೌಡ ಪೊಲೀಸರಿಗೆ ನೀಡಿರೋ ಸ್ವಇಚ್ಛಾ ಹೇಳಿಕೆಯ ಲೆಕ್ಕಾಚಾರ ನೋಡಿದರೇ ರೇಣುಕಾಸ್ವಾಮಿ ಕೊಲೆಗೆ ಮೂಲ ಕಾರಣ ದರ್ಶನ್​ ಕೊಡಿಸಿದ್ದ ಐಫೋನ್ ಮ್ಯಾಕ್ಸ್​ 14. ಇದೇ ಫೋನ್ ಪವಿತ್ರಾ ಗೌಡ ಕೈ ಸೇರಿದ ಮೇಲೆಯೇ ಕಿರಿಕ್ಕೂ ಶುರುವಾಯ್ತು.

ಇದನ್ನೂ ಓದಿ: ‘ಬರೋಬ್ಬರಿ 1.75 ಕೋಟಿ ಸಾಲ ಮಾಡಿ ಪವಿತ್ರಾ ಗೌಡಗೆ ಮನೆ ಕೊಡಿಸಿದ್ದೆ’- ನಟ ದರ್ಶನ್​​

ಪವಿತ್ರಾ ಸ್ವ ಇಚ್ಛಾ ಹೇಳಿಕೆ 

ನನ್ನದು ಐ ಪೋನ್ ಮ್ಯಾಕ್ಸ್ 14 ಮೊಬೈಲ್ ಪೋನ್ ಆಗಿದ್ದು. ಈ ಮೊಬೈಲ್ ಪೋನ್‌ನ್ನು ದರ್ಶನ್​ರವರು ಕೊಡಿಸಿದ್ದರು. ನಾನು ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಹಲವಾರು ನೆಟ್ಟಿಗರು ಖಾತೆಯನ್ನು ಹಿಂಬಾಲಿಸುತ್ತಿರುತ್ತಾರೆ. ನನ್ನ ಇನ್​​ಸ್ಟಾಗ್ರಾಮ್​ ಖಾತೆಯ ಪಬ್ಲಿಕ್ ಆಗಿರುವುದರಿಂದ ನೆಟ್ಟಿಗರು ನೇರವಾಗಿ ಮಸೇಜ್ ಮಾಡುತ್ತಿರುತ್ತಾರೆ (ಡಿ.ಎಂ) ಕೆಲವೊಮ್ಮೆ ನನ್ನ ಇನ್​​ಸ್ಟಾಗ್ರಾಮ್​ ಖಾತೆಯ ಮೆಸೇಜ್ ಬಾಕ್ಸ್‌ನಲ್ಲಿ ನೂರಾರು ನೆಟ್ಟಿಗರು ಮೆಸೇಜ್ ಮಾಡಿರುವುದು ಕಂಡು ಬಂದಿರುತ್ತದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್​​​ ಬ್ಲಾಸ್ಟ್​​ ಕೇಸ್​​; ರಾಜ್ಯ ಬಿಜೆಪಿ ಕಚೇರಿಯನ್ನೇ ಉಡಾಯಿಸಲು ಪ್ಲಾನ್​ ಮಾಡಿದ್ದ ಆರೋಪಿಗಳು!

ದರ್ಶನ್​​ ಕೊಡಿಸಿದ ಮನೆ ಇತ್ತು. ದರ್ಶನ್​ ಕೊಡಿಸಿದ ಐ ಫೋನ್​ ಮೂಲಕವೇ ಕಿರಿಕ್ಕು ಶುರುವಾಯ್ತು. ಮೊದಲಿಗೆ ಯಾರ್ಯಾರೋ ರೀಲ್ಸ್​ ನೋಡಿ ಕೆಟ್ಟದಾಗಿ ಮೆಸೇಜ್​ ಮಾಡುತ್ತಿದ್ದರು. ಅಂತಹ ಕೆಟ್ಟ ಮೆಸೇಜ್​ಗಳ ಸ್ಕ್ರೀನ್​ ಶಾಟ್​​ ತೆಗೆದು ದರ್ಶನ್​ ಅವರಿಗೆ ಪವಿತ್ರಾ ಗೌಡ ತೋರಿಸುತ್ತಿದ್ದರು. ಇಲ್ಲಿಯ ತನಕವೂ ದರ್ಶನ್ ಪವಿತ್ರಾ ಬಾಳಿನಲ್ಲಿ ರೇಣುಕಾಸ್ವಾಮಿ ಎಂಟ್ರಿಯೇ ಆಗಿರಲಿಲ್ಲ. ಅಸಲಿ ದರ್ಶನ್​ ಮನೆಯಲ್ಲಿ ಶುರುವಾಗಿದ್ದು ಇಲ್ಲಿಂದೀಚೆಗೆ.

ಪವಿತ್ರಾ ಖೆಡ್ಡಾ 6 ;ದುಬೈನಲ್ಲಿ ವಿವಾಹ ವಾರ್ಷಿಕೋತ್ಸವ, ಅಲ್ಲೇ ಬಿಟ್ಟ ಮಾತು!
ದರ್ಶನ್​ರವರು 2024 ಮೇ-19ರಂದು ವಿಜಯಲಕ್ಷ್ಮಿಯೊಂದಿಗೆ ನನಗೆ ತಿಳಿಸದೇ ದುಬೈಗೆ ಹೋಗಿ ಮದುವೆ ವಾರ್ಷಿಕೋತ್ಸವನ್ನು ಆಚರಣೆ ಮಾಡಿಕೊಂಡಿದ್ದು, ಅವತ್ತಿನಿಂದ ನಾನು ದರ್ಶನ್​​ರವರೊಂದಿಗೆ ಜಗಳ ಮಾಡಿಕೊಂಡು ಮಾತನಾಡುವುದನ್ನು ನಿಲ್ಲಿಸಿರುತ್ತೇನೆ.

ಇದನ್ನೂ ಓದಿ: ರೇಣುಕಾಸ್ವಾಮಿ ಜೀವ ತೆಗೆದ ನಂತರ ದರ್ಶನ್​​ ಗ್ಯಾಂಗ್​ನಿಂದ ಮಾಸ್ಟರ್​ ಪ್ಲಾನ್​​; ಸ್ಟೋರಿ ಓದಿದ್ರೆ ಬೆಚ್ಚಿಬೀಳ್ತೀರಾ!

ಮೇ 19, 2024ರಂದೇ ದರ್ಶನ್​​ ಜೊತೆ ಜಗಳ ಮಾಡಿಕೊಂಡು ಮಾತು ಬಿಟ್ಟಿದ್ದೆ. ದುಬೈನಲ್ಲೇ ನಾವು ಮಾತಾಡುವುದನ್ನು ನಿಲ್ಲಿಸಿದ್ದೆವು ಅನ್ನೋ ಟ್ವಿಸ್ಟ್​ ಕೊಟ್ಟಿದ್ದಾರೆ ಪವಿತ್ರಾಗೌಡ. ಹೀಗೆ ಹಂತ ಹಂತವಾಗಿ ದರ್ಶನ್​​ ಪಾಲಿಗೆ ಅಂದದ ಚೆಂದದ ಮುದ್ದು ಮುದ್ದಾದ ಅರಗಿಣಿ ಹದ್ದಾಗಿ ಕುಕ್ಕೋದಕ್ಕೆ ಶುರು ಮಾಡಿದ್ದು ಇಲ್ಲಿಂದೀಚೆಗೆ.

ದರ್ಶನ್​​ ಸಾಕಿದ ಬುಲ್​​ ಬುಲ್ ಹದ್ದಾಗಿ ಕುಕ್ಕಿತಾ? ರೇಣುಕಾಸ್ವಾಮಿ ಅಂತ್ಯಕ್ಕೆ ಅಮ್ಮಾಜಿ ಆಜ್ಞೆ ಏನು ಗೊತ್ತಾ?

https://newsfirstlive.com/wp-content/uploads/2024/09/Darshan-Chargesheet-Photos.jpg

Load More