newsfirstkannada.com

ಪವಿತ್ರಾ ಗೌಡ ವಾಟ್ಸ್‌ಆ್ಯಪ್ ಹಿಸ್ಟರಿ ಓಪನ್ ಮಾಡಿದ ಪೊಲೀಸರು; ಕೊಲೆ ಕೇಸ್‌ಗೆ ಮೇಜರ್ ಟ್ವಿಸ್ಟ್!

Share :

Published June 12, 2024 at 5:03pm

    ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪವಿತ್ರಾಗೌಡ ತೀವ್ರ ವಿಚಾರಣೆ

    ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಪವಿತ್ರಾಗೌಡ ತೀವ್ರ ತನಿಖೆ

    ವಾಟ್ಸಾಪ್ ಚಾಟ್ ಹಿಸ್ಟರಿ ಓಪನ್ ಮಾಡಿ ಪವಿತ್ರಾಗೆ ಪೊಲೀಸರ ಪ್ರಶ್ನೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ ನಟ ದರ್ಶನ್, ನಟಿ ಪವಿತ್ರಗೌಡ ಸೇರಿ ಒಟ್ಟು 13 ಆರೋಪಿಗಳು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸ್ ಅಧಿಕಾರಿಗಳು ಒಂದೊಂದೇ ವಿಚಾರವನ್ನು ಬಯಲಿಗೆ ಎಳೆಯುತ್ತಿದ್ದಾರೆ.

ಇದನ್ನೂ ಓದಿ: ಪವಿತ್ರಗೌಡಗೆ ಕಳುಹಿಸಿದ್ನಂತೆ ‘ಆ’ ಫೋಟೋ.. ದರ್ಶನ್​ಗೆ ಗೊತ್ತಾದ ಮೇಲೆ ನಡೆಯಿತು ಅನಾಹುತ..!

ಇನ್ನು, ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟಿ ಪವಿತ್ರಾಗೌಡಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. 161 ಸ್ವ ಇಚ್ಚಾ ಹೇಳಿಕೆ ದಾಖಲಿಸೋ ಮುನ್ನಾ ಪವಿತ್ರಾ ಗೌಡಗೆ ಪೊಲೀಸರು ಪ್ರಶ್ನೆಗಳ ಸುರಿಮಳೆ ಗೈಯುತ್ತಿದ್ದಾರೆ. ಮೃತ ರೇಣುಕಾಸ್ವಾಮಿ ಹಾಗೂ ಪವಿತ್ರಾಗೌಡ ಪರಿಚಯದ ಬಗ್ಗೆ ತನಿಖಾಧಿಕಾರಿಗಳಿಂದ ಪ್ರಶ್ನೆ ಮಾಡುತ್ತಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗಳು ಪವಿತ್ರಾ ಗೌಡಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಪವಿತ್ರಾ ಗೌಡರಿಗೆ ತನಿಖಾಧಿಕಾರಿಗಳು ಕೇಳುತ್ತಿರೋ ಪ್ರಶ್ನೆಗಳೇನು?

ರೇಣುಕಾಸ್ವಾಮಿ ಹೇಗೆ ನಿಮಗೆ ಪರಿಚಯ ಆಗಿದ್ದು? ಆತ ನಿಮಗೆ ಏನಂಥಾ ಚಾಟ್ ಮಾಡಿದ್ದ? ರೇಣುಕಾಸ್ವಾಮಿ ಬಗ್ಗೆ ದರ್ಶನ್​ಗೆ ಹೇಳಿದ್ಯಾರು? ರೇಣುಕಾಸ್ವಾಮಿರನ್ನು ನಿಮ್ಮ ಗಮನಕ್ಕೆ ತಂದು ಬೆಂಗಳೂರಿಗೆ ಕರಿಸಲಾಗಿತ್ತಾ? ರೇಣುಕಾಸ್ವಾಮಿಗೆ ಹಲ್ಲೆ ಮಾಡೋ ವೇಳೆ ನೀವು ಆರ್.ಆರ್.ನಗರದ ಶೆಡ್ ಬಳಿ ತೆರಳಿದ್ರಾ? ಇಷ್ಟೆಲ್ಲ ಆದ್ರು ಪೊಲೀಸರಿಗೆ ಯಾಕೆ ದೂರು ನೀಡಲಿಲ್ಲ? ಎಂಬ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಕೇಳುತ್ತಿದ್ದಾರೆ.

ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗೆ ಪವಿತ್ರಾ ಗೌಡ, ರೇಣುಕಾಸ್ವಾಮಿ ನನಗೆ ಪರಿಚಯವಿಲ್ಲ. ಸೋಷಿಯಲ್ ಮೀಡಿಯಾ ಅಕೌಂಟ್​ನಲ್ಲಿ ಅಶ್ಲೀಲವಾಗಿ ಪೋಸ್ಟ್ ಹಾಕಿದ್ದ. ರೇಣುಕಾಸ್ವಾಮಿ ಬಗ್ಗೆ ದರ್ಶನ್​ಗೆ ನಾನು ಹೇಳಿಲ್ಲ. ಮನೆಕೆಲಸದಾತ ಪವನ್​ರಿಗೆ ಮಾತ್ರ ಈ ವಿಚಾರ ಗೊತ್ತಾಗಿತ್ತು. ಆದರೆ ಪವನ್ ದರ್ಶನ್​ಗೆ ಹೇಳಿದ್ದಾನೋ ಇಲ್ಲವೋ ನನಗೆ ಗೊತ್ತಿಲ್ಲ ಅಂತ ಹೇಳಿಕೆ ನೀಡುತ್ತಿದ್ದಾರಂತೆ. ಸದ್ಯ ಹತ್ತಾರು ಆಯಾಮಗಳಲ್ಲಿ ಪವಿತ್ರಾ ಗೌಡಳಿಗೆ ಪೊಲೀಸರು ತೀವ್ರ ವಿಚಾರಣೆ ಶುರು ಮಾಡಿದ್ದಾರೆ. ಈಗ ಪೊಲೀಸರು ಪವಿತ್ರಾ ಗೌಡ ಮೊಬೈಲ್ ಸೀಜ್ ಮಾಡಿಕೊಂಡು ವಾಟ್ಸ್‌ ಆ್ಯಪ್ ಚಾಟ್ ಹಿಸ್ಟರಿಯ ಸ್ಕ್ರೀನ್ ಶಾಟ್ ಹಿಡಿದು ಪ್ರಶ್ನೆ ಪೊಲೀಸರು ಪ್ರಶ್ನೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವಿತ್ರಾ ಗೌಡ ವಾಟ್ಸ್‌ಆ್ಯಪ್ ಹಿಸ್ಟರಿ ಓಪನ್ ಮಾಡಿದ ಪೊಲೀಸರು; ಕೊಲೆ ಕೇಸ್‌ಗೆ ಮೇಜರ್ ಟ್ವಿಸ್ಟ್!

https://newsfirstlive.com/wp-content/uploads/2024/06/pavitra-gowda-3.jpg

Load More