newsfirstkannada.com

Pawan Kalyan: ಡಿವೋರ್ಸ್ ವದಂತಿಗೆ ಪವನ್ ಕಲ್ಯಾಣ್ ಸ್ಪಷ್ಟನೆ -ನಿಟ್ಟುಸಿರು ಬಿಟ್ಟ ಅಭಿಮಾನಿಗಳು

Share :

06-07-2023

    3ನೇ ಪತ್ನಿಗೂ ವಿಚ್ಛೇದನ ನೀಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು

    ಜನಸೇನಾ ಅಧಿಕೃತ ಟ್ವಿಟರ್​ನಲ್ಲಿ ಮಾಹಿತಿ ನೀಡಿದ ಪವರ್​

    ಅಭಿಮಾನಿಗಳಿಗೆ ಪವನ್ ಕಲ್ಯಾಣ್ ಕಳುಹಿಸಿದ ಸಂದೇಶ ಏನು..?

ಟಾಲಿವುಡ್​ನ ಪವರ್​ ಸ್ಟಾರ್​​ ಪವನ್ ಕಲ್ಯಾಣ್ ರಾಜಕೀಯ, ಸಿನಿಮಾ ಕ್ಷೇತ್ರದಲ್ಲಿ ಅತ್ಯಂತ ಬ್ಯುಸಿ ಇರುವ ವ್ಯಕ್ತಿ. ಒಂದು ಕ್ಷಣವೂ ವ್ಯರ್ಥ ಮಾಡದೇ ಈ ಎರಡು ಕ್ಷೇತ್ರದಲ್ಲಿ ನಿರಂತರವಾಗಿ ದುಡಿಯುತ್ತಿದ್ದಾರೆ. ಪವನ್​ ಕಲ್ಯಾಣ್​ ಅವರು ತಮ್ಮ 3ನೇ ಪತ್ನಿಗೂ ವಿಚ್ಛೇದನ ನೀಡಿದ್ದಾರೆ ಎಂಬ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಎರಡ್ಮೂರು ದಿನದಿಂದ ಬಿರುಗಾಳಿಯಂತೆ ಹಬ್ಬಿತ್ತು. ಇದಕ್ಕೆ ಬ್ರೇಕ್​ ಹಾಕಿರುವ ನಟ, ತಮ್ಮ ಜನಸೇನಾ ಪಾರ್ಟಿಯ ಅಧಿಕೃತ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಪವನ್ ಕಲ್ಯಾಣ್ ಅವರು ತಮ್ಮ 3ನೇ ಪತ್ನಿಯಾದ ಅನ್ನಾ ಲೆಜ್ನೆವಾರಿಗೆ ಡಿವೋರ್ಸ್​ ನೀಡಿದ್ದಾರೆ ಎನ್ನಲಾಗಿತ್ತು. ಜನಸೇನಾ ಪಾರ್ಟಿ ಅಧಿಕೃತ ಟ್ವಿಟರ್​ನಲ್ಲಿ​, ಇಬ್ಬರ ಸಂಸ್ಕಾರಿಕ ಸಂಬಂಧ ಗಟ್ಟಿಯಾಗಿದೆ. ಆಂಧ್ರ ಪ್ರದೇಶದಲ್ಲಿ ಪವನ್ ನೇತೃತ್ವದಲ್ಲಿ ನಡೆಯುತ್ತಿರುವ ವಾರಾಹಿ ಯಾತ್ರೆ ಮೊದಲ ಹಂತದ ಪ್ರವಾಸ ಯಶಸ್ವಿ ಆಗಿದೆ. ಈ ಹಿನ್ನೆಲೆಯಲ್ಲಿ ಪವನ್​ ಕಲ್ಯಾಣ್ ಅವರು ಹೈದರಾಬಾದ್​ನ ತಮ್ಮ ನಿವಾಸದಲ್ಲಿ ಪತ್ನಿ ಅನ್ನಾ ಲೆಜ್ನೆವಾ ಜೊತೆ ಪೂಜೆ ನೆರವೇರಿಸಿದ್ದರು. ಈ ಬಗ್ಗೆ ಕ್ಲಿಕ್ಕಿಸಿದಂತಹ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಿಂದ ಇಷ್ಟು ದಿನ ಹೇಳಲಾಗುತ್ತಿದ್ದ ಡಿವೋರ್ಸ್​ ಕಥೆ ಇಲ್ಲಿಗೆ ಮುಗಿದಂತೆ ಆಗಿದೆ.

ಅಂದಹಾಗೆಯೇ ಪವನ್ ಕಲ್ಯಾಣ್ ಈ ಮೊದಲು ನಂದಿನಿ, ರೇಣು ದೇಸಾಯಿಯನ್ನು ಮದುವೆಯಾಗಿ ಡಿವೋರ್ಸ್ ನೀಡಿದ್ದರು. ಆ ಬಳಿಕ ಅನ್ನಾ ಲೆಜ್ನೆವಾರನ್ನು ಪ್ರೀತಿಸಿ 3ನೇ ವಿವಾಹವಾಗಿದ್ದರು. ಈಗ ಮೂರನೇ ವಿವಾಹ ಕೂಡ ಮುರಿದು ಬಿದ್ದಿದೆ ಎಂದು ಹೇಳಲಾಗಿತ್ತು. ಹರಿದಾಡುತ್ತಿರುವ ಮಾಹಿತಿ ಪ್ರಕಾರ 3ನೇ ಪತ್ನಿ ಅನ್ನಾ ಲೆಜ್ನೆವಾ ದುಬೈ, ಸಿಂಗಾಪುರ್​ನಲ್ಲಿ ಮಕ್ಕಳ ಜೊತೆಗೆ ವಾಸ್ತವ್ಯ ಹೂಡಿದ್ದು, ಪವನ್ ಕಲ್ಯಾಣ್ ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ ಎನ್ನಲಾಗಿತ್ತು. ಸದ್ಯ ಜನಸೇನಾ ಪಾರ್ಟಿಯ ಅಧಿಕೃತ ಟ್ವಿಟರ್​ ಪೋಸ್ಟ್​ ಇದಕ್ಕೆಲ್ಲ ಫುಲ್​ ಸ್ಟಾಪ್​ ಇಟ್ಟಿದೆ. ಪವನ್ ದಂಪತಿ ಒಂದಾಗಿ ಸಂತೋಷವಾಗಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Pawan Kalyan: ಡಿವೋರ್ಸ್ ವದಂತಿಗೆ ಪವನ್ ಕಲ್ಯಾಣ್ ಸ್ಪಷ್ಟನೆ -ನಿಟ್ಟುಸಿರು ಬಿಟ್ಟ ಅಭಿಮಾನಿಗಳು

https://newsfirstlive.com/wp-content/uploads/2023/07/PAWAN_KALYAN-1.jpg

Load More