newsfirstkannada.com

ಪವನ್ ಕಲ್ಯಾಣ್ ಸೆನ್ಸೇಷನ್ ಪೋಸ್ಟ್‌, ವೆಲ್ಲೂರಿನಲ್ಲಿ ಸಮಂತಾ ರೋಡ್ ಟ್ರಿಪ್; ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು

Share :

16-07-2023

  ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ಸ್ಯಾಂಡಲ್​ವುಡ್​ ಸ್ಟಾರ್ಸ್​ ಸಾಥ್​​!

  'ಭಜರಂಗಿ ಭಾಯಿಜಾನ್'​​ ಚಿತ್ರದಲ್ಲಿ ನಟಿಸಿದ ಬಾಲನಟಿ ಹೇಗಿದ್ದಾರೆ ಗೊತ್ತಾ..?

  ತಮಿಳುನಾಡಿನಾದ್ಯಂತ ರೋಡ್​ ಟ್ರಿಪ್​ನಲ್ಲಿ ಮೂಳುಗಿದ ನಟಿ ಸಮಂತಾ

ಪವನ್ ಕಲ್ಯಾಣ್ ಮೊದಲ ಪೋಸ್ಟ್​

ಇತ್ತೀಚೆಗಷ್ಟೇ ಇನ್​​ಸ್ಟಾಗ್ರಾಮ್​ಗೆ ಎಂಟ್ರಿ ಕೊಟ್ಟಿದ್ದ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಒಂದೇ ಒಂದು ಪೋಸ್ಟ್​ ಹಾಕದೆಯೇ 2.4 ಮಿಲಿಯನ್ ಫಾಲೋವರ್ಸ್​ ಹೊಂದಿದ್ದರು. ಇದೀಗ ಇನ್​ಸ್ಟಾಗ್ರಾಮ್​​​ ಖಾತೆ ತೆರೆದ ಹನ್ನೊಂದು ದಿನಗಳ ಬಳಿಕ ಪವನ್ ಕಲ್ಯಾಣ್​ ಮೊದಲ ಪೋಸ್ಟ್​ ಹಾಕಿದ್ದಾರೆ. ಚಿತ್ರರಂಗದ ಜೊತೆಗಿನ ನೆನಪುಗಳನ್ನ ಹಂಚಿಕೊಂಡಿರುವ ಪವನ್ ಕಲ್ಯಾಣ್, ಚಿರಂಜೀವಿ, ಬಾಲಕೃಷ್ಣ, ಅಮಿತಾಭ್ ಬಚ್ಚನ್ ಸೇರಿ ಹಲವು ಸ್ಟಾರ್​ ನಟರ ಹಾಗೂ ನಟಿಯರ ಜೊತೆಗಿನ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಸದ್ಯ ಪವನ್ ಕಲ್ಯಾಣ್​ ಶೇರ್ ಮಾಡಿರೋ ಪೋಸ್ಟ್​ಗೆ 9 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿದೆ.

View this post on Instagram

A post shared by Pawan Kalyan (@pawankalyan)

ಸಮಂತಾ ರೋಡ್ ಟ್ರಿಪ್

ಹೆಚ್ಚಿನ ಚಿಕಿತ್ಸೆಗಾಗಿ ನಟನೆಯಿಂದ ಬ್ರೇಕ್ ತೆಗೆದುಕೊಳ್ಳುತ್ತಿರುವ ನಟಿ ಸಮಂತಾ ರೋಡ್​ ಟ್ರಿಪ್​ ಮಾಡುತ್ತಾ ಇರೋದು ಗಮನ ಸೆಳೆದಿದೆ. ಇತ್ತೀಚೆಗಷ್ಟೇ ಸಿಟಾಡೆಲ್ ಮತ್ತು ಖುಷಿ ಚಿತ್ರಗಳ ಶೂಟಿಂಗ್ ಮುಗಿಸಿದ ಸಮಂತಾ ಇದೀಗ ತಮಿಳುನಾಡಿನಾದ್ಯಂತ ರೋಡ್​ ಟ್ರಿಪ್ ಹಮ್ಮಿಕೊಂಡಿದ್ದಾರೆ. ಸದ್ಯ ವೇಲೂರಿನ ಕಡೆ ಪ್ರಯಾಣ ಬೆಳೆಸಿರುವ ಸಮಂತಾ ಒಂದಿಷ್ಟು ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ವೈರಲ್ ಆಗಿದೆ.

ಭಜರಂಗಿ ಭಾಯಿಜಾನ್ ಮುನ್ನಿ ಇವರೇ ನೋಡಿ

ಸಲ್ಮಾನ್ ಖಾನ್ ನಟನೆಯ ‘ಭಜರಂಗಿ ಭಾಯಿಜಾನ್’​​ ಚಿತ್ರದಲ್ಲಿ ನಟಿಸಿದ್ದ ಬಾಲನಟಿ ಹರ್ಷಾಲಿ ಮಲ್ಹೋತ್ರಾ ಮತ್ತೆ ಟ್ರೆಂಡ್​ ಆಗಿದ್ದಾರೆ. ಭಜರಂಗಿ ಭಾಯಿಜಾನ್ ಚಿತ್ರದಲ್ಲಿ ಬಹಳ ಚಿಕ್ಕ ಹುಡುಗಿ ಪಾತ್ರದಲ್ಲಿ ನಟಿಸಿದ್ದ ಹರ್ಷಾಲಿ ಸದ್ಯ ಏನ್ ಮಾಡ್ತಿದ್ದಾರೆ ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಆದ್ರೀಗ ಮುಂಬೈನ ಬಾಂದ್ರಾದಲ್ಲಿ ಮ್ಯೂಸಿಕ್​ ಕ್ಲಾಸ್​ ಮುಗಿಸಿ ಹೊರಗೆ ಬಂದ ಹರ್ಷಾಲಿ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ. ಮುನ್ನಿ ಈಗ ಸಣ್ಣ ಹುಡುಗಿ ಅಲ್ಲ ಅಂತ ಬೆರಗಾಗಿ ನೋಡ್ತಾ ಇದ್ದಾರೆ.

ಪ್ರಾಜೆಕ್ಟ್​ಕೆ ಟೈಟಲ್ ‘ಕಾಲಚಕ್ರ’?

ಪ್ರಭಾಸ್​, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಹಾಗೂ ಕಮಲ್ ಹಾಸನ್ ನಟಿಸುತ್ತಿರುವ ಪ್ರಾಜೆಕ್ಟ್ K ಚಿತ್ರಕ್ಕೆ ಕಾಲಚಕ್ರ ಎನ್ನುವ ಟೈಟಲ್ ಇಡಲು ಚಿತ್ರತಂಡ ನಿರ್ಧರಿಸಿದೆಯಂತೆ. ನಾಗ್ ಅಶ್ವಿನ್ ಸಾರಥ್ಯದಲ್ಲಿ ‘ಪ್ರಾಜೆಕ್ಟ್​ಕೆ’ ತಯಾರಾಗ್ತಿದ್ದು, ಇಷ್ಟು ದಿನ ವರ್ಕಿಂಗ್ ಟೈಟಲ್​ನಲ್ಲೇ ಶೂಟಿಂಗ್ ಮಾಡಿತ್ತು. ಇದೀಗ ಜುಲೈ 20ಕ್ಕೆ ಚಿತ್ರದ ಫಸ್ಟ್​ ಲುಕ್ ಟೀಸರ್ ಹಾಗೂ ಟೈಟಲ್ ಅನಾವರಣ ಮಾಡೋಕೆ ಚಿತ್ರತಂಡ ನಿರ್ಧರಿಸಿದ್ದು, ‘ಕಾಲಚಕ್ರ’ ಎನ್ನುವ ಹೆಸರು ಸದ್ದು ಮಾಡ್ತಿದೆ.

ಹಾಸ್ಟೆಲ್ ಹುಡುಗರಿಗೆ ಸ್ಯಾಂಡಲ್​ವುಡ್​ ಸ್ಟಾರ್ಸ್​ ಎಂಟ್ರಿ!

ಇಷ್ಟು ದಿನ ಬರೀ ಪ್ರಮೋಷನ್​ನಲ್ಲೇ ಕಿಕ್ ಕೊಡುತ್ತಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಈಗ ಥಿಯೇಟರ್​ಗೆ ಬರೋಕೆ ಸಜ್ಜಾಗಿ ನಿಂತಿದೆ. ಜುಲೈ 21ಕ್ಕೆ ಬಿಗ್ ಪರದೆ ಮೇಲೆ ಹಾಸ್ಟೆಲ್ ಹೈಕ್ಳ ಹಾವಳಿ ಶುರುವಾಗಲಿದ್ದು, ಸಿನಿಪ್ರೇಕ್ಷಕರ ಕಾತುರನೂ ಜಾಸ್ತಿ ಆಗ್ತಿದೆ. ಮೊದಲ ದಿನದಿಂದಲೂ ಇಲ್ಲಿಯವರೆಗೂ ಹಲವು ಸ್ಟಾರ್​ ನಟರು ಹಾಸ್ಟೆಲ್ ಹುಡುಗರಿಗೆ ಸಾಥ್ ಕೊಟ್ಟಿದ್ದಾರೆ. ಅಪ್ಪು ಅವರಿಂದ ಶುರುವಾದ ಈ ಜರ್ನಿ ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಮ್ಯಾ, ದಿಗಂತ್, ಧ್ರುವ ಸರ್ಜಾ ಅವರಿಗೆ ಸಾಗಿ ಬಂದಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ 

ಪವನ್ ಕಲ್ಯಾಣ್ ಸೆನ್ಸೇಷನ್ ಪೋಸ್ಟ್‌, ವೆಲ್ಲೂರಿನಲ್ಲಿ ಸಮಂತಾ ರೋಡ್ ಟ್ರಿಪ್; ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು

https://newsfirstlive.com/wp-content/uploads/2023/07/kalyana-1-1.jpg

Load More