ಖ್ಯಾತ ನಟ ಪವನ್ ಕಲ್ಯಾಣ್ ದಾಂಪತ್ಯ ಜೀವನದಲ್ಲಿ ಬಿರುಕು
ರಷ್ಯಾ ದೇಶದ ಅನ್ನಾ ಲಿಜನೆವಾರನ್ನ ಪ್ರೀತಿಸಿ ಮದುವೆಯಾಗಿದ್ದ ಪವನ್
3ನೇ ಪತ್ನಿಗೂ ಡಿವೋರ್ಸ್? ಪವನ್ ಕಲ್ಯಾಣ್ ಬದುಕಿನಲ್ಲೇನಾಗ್ತಿದೆ?
ತೆಲುಗು ಖ್ಯಾತ ನಟ ಪವನ್ ಕಲ್ಯಾಣ್ ಸಿನಿಮಾ ಮಾತ್ರವಲ್ಲದೆ ರಾಜಕೀಯದಲ್ಲೂ ಸಕ್ರೀಯವಾಗಿ ದುಡಿಯುತ್ತಿದ್ದಾರೆ. ತಮ್ಮದೇ ಜನಸೇನಾ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಅದರ ಜೊತೆ ಜೊತೆಗೆ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ದೊಡ್ಡ ಮೊತ್ತ ಸಂಪಾದಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಪವನ್ ಕಲ್ಯಾಣ್ ಸಂಸಾರದಲ್ಲೊಂದು ಸುಳಿಗಾಳಿ ಎದ್ದ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಸಂಸಾರ ಎಂಬ ನೌಕೆಯಲ್ಲಿ ಸಣ್ಣ ಬಿರುಕೊಂದು ಮೂಡಿದೆ ಎಂಬ ಮಾತು ಮುನ್ನಲೆಗೆ ಬಂದಿದೆ.
ತೆಲುಗಿನ ಖ್ಯಾತ ನಟ ಚಿರಂಜೀವಿ ಅವರಂತೆ ಪವನ್ ಕಲ್ಯಾಣ್ ಕೂಡ ತಮ್ಮದೇ ಅಭಿನಯದ ಮೂಲಕ ಸಿನಿಮಾ ಜಗತ್ತಿನಲ್ಲಿ ನೆಲೆ ಕಂಡವರು. ಆದರೆ ಅವರ ಸಂಸಾರಿಕ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ ಎಂಬುದು ಫ್ಯಾನ್ಸ್ಗೆ ನಂಬಲಾಗದ ಮಾತು. ಆದರೀಗ ಮೂರನೇ ಪತ್ನಿಗೂ ಪವನ್ ಕಲ್ಯಾಣ್ ಡಿವೋರ್ಸ್ ನೀಡಲು ಮುಂದಾಗಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಲವ್ ಮಾಡಿ ಮದುವೆಯಾದ್ರು
ಪವನ್ ಕಲ್ಯಾಣ್ ರಷ್ಯಾ ದೇಶದ ಅನ್ನಾ ಲಿಜನೆವಾರನ್ನು ಪ್ರೀತಿಸಿ ಮದುವೆಯಾದರು. 2013 ರಲ್ಲಿ ಇಬ್ಬರು ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಹಸೆಮಣೆ ಏರಿದರು. ಇವರಿಬ್ಬರ ಪ್ರೀತಿಯ ದ್ಯೋತಕವಾಗಿ ಇಬ್ಬರು ಮಕ್ಕಳನ್ನು ಪಡೆದರು. ಆದರೀಗ ನಟನ ಬದುಕಿನಲ್ಲಿ ಬಿರುಕೊಂದು ಮೂಡಿದೆ ಎಂಬುದು ಎಲ್ಲರಿಗೂ ಅಚ್ಚರಿಯಾಗಿದೆ.
3ನೇ ಪತ್ನಿಗೂ ಡಿವೋರ್ಸ್?
ಅಂದಹಾಗೆಯೇ ಪವನ್ ಕಲ್ಯಾಣ್ ಈ ಮೊದಲು ನಂದಿನಿ, ರೇಣು ದೇಸಾಯಿಯನ್ನು ಮದುವೆಯಾಗಿ ಡಿವೋರ್ಸ್ ನೀಡಿದ್ದರು. ಆ ಬಳಿಕ ಅನ್ನಾ ಲಿಜನೆವಾರನ್ನು ಪ್ರೀತಿಸಿ ಮೂರನೇ ವಿವಾಹವಾಗಿದರು. ಈಗ ಮೂರನೇ ವಿವಾಹ ಕೂಡ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. ಸದ್ಯ ಹರಿದಾಡುತ್ತಿರುವ ಮಾಹಿತಿಯಂತೆ ಮೂರನೇ ಪತ್ನಿ ಅನ್ನಾ ಲಿಜನೆವಾ ಸದ್ಯ ದುಬೈ, ಸಿಂಗಾಪುರ್ ನಲ್ಲಿ ಮಕ್ಕಳ ಜೊತೆಗೆ ವಾಸ್ತವ್ಯ ಹೂಡಿದ್ದು, ಪವನ್ ಕಲ್ಯಾಣ್ ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ ಎಂಬ ಸಂಗತಿ ಕೇಳಿಬಂದಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ