newsfirstkannada.com

ಸಚಿವ ಚಲುವರಾಯಸ್ವಾಮಿ ರಾಜೀನಾಮೆಗೆ ಆಗ್ರಹ; ಮಂಡ್ಯದಲ್ಲಿ ಕಾಂಗ್ರೆಸ್​, ಬಿಜೆಪಿ ಮಧ್ಯೆ ಕಿತ್ತಾಟ

Share :

13-08-2023

    ಕೃಷಿ ಸಚಿವರ ರಾಜೀನಾಮೆಗೆ ಬಿಜೆಪಿ ಮುಖಂಡರ ಪಟ್ಟು

    ಫೇಕ್​ ಲೆಟರ್​ ಪ್ರಕರಣದಲ್ಲಿ ಸಿಐಡಿ ತನಿಖೆ ಚುರುಕು

    ಸಚಿವ ಚಲುವರಾಯಸ್ವಾಮಿ ಪರ ಕೈ ಪಡೆ ಪ್ರತಿಭಟನೆ

ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ಪರ-ವಿರುದ್ಧ ಪ್ರತಿಭಟನೆ ಶುರುವಾಗಿದೆ. ಕೃಷಿ ಸಚಿವರ ರಾಜೀನಾಮೆಗೆ ಆಗ್ರಹಿಸಿ, ಅಹೋರಾತ್ರಿ ಧರಣಿ ನಡೆಸುತ್ತಿರುವ ಕೇಸರಿ ಪಡೆಗೆ, ಕಾಂಗ್ರೆಸ್​ ಪಾಳಯ ಸೆಡ್ಡು ಹೊಡೆದಿದ್ದು, ಎರಡೂ ಕಡೆಯವರೂ ಆರೋಪ-ಪ್ರತ್ಯಾರೋಪದ ಮೂಲಕ ವಾಗ್ಯುದ್ಧ ನಡೆಸಿದ್ದಾರೆ. ಇದರ ಮಧ್ಯೆ ಪತ್ರದ ಮೂಲ ಹುಡುಕುತ್ತಿರುವ ಸಿಐಡಿ ಕಣ್ಣು ಮಂಡ್ಯ ಜಿಲ್ಲೆಯಿಂದ ವರ್ಗಾವಣೆಯಾದ ಕೃಷಿ ಅಧಿಕಾರಿಗಳ ಮೇಲೆ ಬಿದ್ದಿದೆ.

ತಾರಕಕ್ಕೇರಿದ ಕೃಷಿ ಸಚಿವರ ವಿರುದ್ಧದ ಪತ್ರ ಗಲಾಟೆ
ಮಂಡ್ಯದಲ್ಲಿ ಅಕ್ಕ-ಪಕ್ಕ ಕಾಂಗ್ರೆಸ್​-ಬಿಜೆಪಿ ಪ್ರತಿಭಟನೆ

ಸಕ್ಕರೆ ನಾಡು ಮಂಡ್ಯ ಮತ್ತೊಮ್ಮೆ ಮೂರೂ ಪಕ್ಷಗಳ ರಾಜಕೀಯ ಕಿತ್ತಾಟ, ವಾಗ್ಯುದ್ಧಕ್ಕೆ ವೇದಿಕೆಯಾಗಿದೆ. ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದ ಪ್ರಕರಣದಲ್ಲಿ ಪರ-ವಿರೋಧ ಪ್ರತಿಭಟನೆ ತಾರಕಕ್ಕೇರಿದೆ. ಕಾಂಗ್ರೆಸ್​-ಬಿಜೆಪಿ ಎರಡೂ ಪಕ್ಷಗಳು ಒಂದೇ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಪೊಲೀಸರ ಟೆನ್ಷನ್​ ಹೆಚ್ಚಿಸಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಬಿಜೆಪಿ ಮತ್ತು ಕಾಂಗ್ರೆಸ್​ನ ಪ್ರತಿಭಟನೆ ರಾಜಕೀಯ ಜೋರಾಗಿದೆ. ಕೃಷಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಕಾಂಗ್ರೆಸ್​ ಸೆಡ್ಡು ಹೊಡೆದಿದೆ. ಮಂಡ್ಯ ಶಾಸಕ ರವಿಕುಮಾರ್ ಗಣಿಗ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್​ ಮುಖಂಡರು ಚಲುವರಾಯಸ್ವಾಮಿ ಪರ ಪ್ರತಿಭಟನೆ ಮಾಡಿದ್ದಾರೆ.

ಈ ವೇಳೆ ಶಾಸಕ ಗಾಣಿಗ ರವಿ ಬಿಜೆಪಿ ಮತ್ತು ಜೆಡಿಎಸ್​ ವಿರುದ್ಧ ವಾಚಾಮಾಗೋಚರ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್​, ಬಿಜೆಪಿ ಇಬ್ಬರೂ ತಾಳ-ಮೇಳವಿದ್ದಂತೆ. ಜೆಡಿಎಸ್​ ಕೈಯಿಂದ ಲೆಟರ್​ ಹಾಕಿಸಿ, ಈಗ ಬಿಜೆಪಿ ಪ್ರತಿಭಟನೆ ಡ್ರಾಮಾ ಮಾಡ್ತಿದೆ. ಚಲುವರಾಯಸ್ವಾಮಿ ಅವರ ಬೆಳವಣಿಗೆ ತಪ್ಪಿಸಲು ಜೆಡಿಎಸ್​ ಮತ್ತು ಬಿಜೆಪಿ ಮಾಡ್ತಿರೋ ಹುನ್ನಾರವಿದೆ ಎಂದು ಶಾಸಕ ಗಾಣಿಗ ರವಿ ಆರೋಪಿಸಿದ್ದಾರೆ.

ಮಂಡ್ಯದಲ್ಲಿ 2ನೇ ದಿನವೂ ಬಿಜೆಪಿಯಿಂದ ಅಹೋರಾತ್ರಿ ಧರಣಿ
ಕೃಷಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸರ್ಕಾರ ವಿರುದ್ಧ ವಾಗ್ದಾಳಿ

ಚಲುವರಾಯಸ್ವಾಮಿ ವಿರುದ್ಧ ಪೇಸಿಎಸ್ ಪೋಸ್ಟರ್ ಹಿಡಿದು ಬಿಜೆಪಿ ನಡೆಸುತ್ತಿರುವ ಅಹೋರಾತ್ರಿ ಧರಣಿ, 2ನೇ ದಿನವೂ ಮುಂದುವರಿದಿದೆ. ಚಲುವರಾಯಸ್ವಾಮಿ ಅವರನ್ನ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ. ಇನ್ನು ಕಾಂಗ್ರೆಸ್​ ನಾಯಕರ ಪ್ರತಿಭಟನೆಗೆ ಬಿಜೆಪಿ ಮುಖಂಡರು ಲೇವಡಿ ಮಾಡಿದ್ದಾರೆ. ನಾವು ಜನಪರ ಕಾಳಜಿಯಿಂದ ಧರಣಿ ಮಾಡ್ತಿದ್ರೆ, ಕಾಂಗ್ರೆಸ್​ ಶಾಸಕ ಓಲೈಕೆಗಾಗಿ ಸಚಿವರ ಪರ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಂಡ್ಯದಿಂದ ವರ್ಗವಾದ ಕೃಷಿ ಅಧಿಕಾರಿಗಳ ಮೇಲೆ ಸಿಐಡಿ ಕಣ್ಣು

ಮಂಡ್ಯದಲ್ಲಿ ಒಂದೆಡೆ ಕೃಷಿ ಸಚಿವರ ವಿಚಾರದಲ್ಲಿ ಪರ-ವಿರೋಧ ಪ್ರತಿಭಟನೆ ಜೋರಾಗಿದ್ರೆ, ಮತ್ತೊಂದೆಡೆ ರಾಜ್ಯಪಾಲರಿಗೆ ಫೇಕ್​ ಲೆಟರ್​ ಬರೆದಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಸಿಐಡಿ ತನಿಖೆ ಕೂಡ ಮತ್ತಷ್ಟು ಚುರುಕುಗೊಂಡಿದೆ. ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಕೃಷಿ ಅಧಿಕಾರಿಗಳನ್ನು ಸಿಐಡಿ ವಿಚಾರಣೆ ನಡೆಸಿದೆ. ಸಹಾಯಕ ಕೃಷಿ ನಿರ್ದೇಶಕರು ದೂರಿನ ಪತ್ರದಲ್ಲಿರುವ ಸಹಿ ನನ್ನದಲ್ಲ ಎಂದು ಹೇಳಿದ್ದಾರೆ.

ಹೀಗಾಗಿ ಈ ಹಿಂದೆ ಮಂಡ್ಯದಲ್ಲಿ ಕೆಲಸ ಮಾಡಿ ಈಗ ಹೊರ ಜಿಲ್ಲೆಗೆ ವರ್ಗಾವಣೆಯಾದವರ ಮೇಲೆ ಸಿಐಡಿ ಅಧಿಕಾರಿಗಳಿಗೆ ಸಂಶಯ ಮೂಡಿದೆ. ಆದ್ದರಿಂದ ವರ್ಗಾವಣೆ ಆಗಿ ಹೋಗಿರುವವರನ್ನು ಕರೆಸಿ ವಿಚಾರಣೆಗೆ ಒಳಪಡಿಸಲು ಸಿಐಡಿ ತನಿಖಾ ತಂಡ ನಿರ್ಧರಿಸಿದೆ. ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧದ ಒಂದು ಪತ್ರ ಮಂಡ್ಯ ರಾಜಕೀಯದಲ್ಲಿ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಇದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಚಿವ ಚಲುವರಾಯಸ್ವಾಮಿ ರಾಜೀನಾಮೆಗೆ ಆಗ್ರಹ; ಮಂಡ್ಯದಲ್ಲಿ ಕಾಂಗ್ರೆಸ್​, ಬಿಜೆಪಿ ಮಧ್ಯೆ ಕಿತ್ತಾಟ

https://newsfirstlive.com/wp-content/uploads/2023/08/CHELUVARAYASWAMY-2.jpg

Load More