newsfirstkannada.com

ಧರ್ಮಸ್ಥಳ ಸಂಘದ ಸಾಲ ಮರುಪಾವತಿ ಮಾಡಿ ಎಂದ ಪ್ರತಿನಿಧಿಗೆ ಹಿಗ್ಗಾಮುಗ್ಗಾ ಬಾರಿಸಿದ ಸಾಲಗಾರರು..!

Share :

04-11-2023

    ಸಾಲ ತೀರಿಸಿ ಎಂದಿದ್ಕೆ ಆಸ್ಪತ್ರೆಗೆ ಸೇರಿಸಿದರು

    ಹಲ್ಲೆಗೊಳಗಾಗಿರುವ ಕಲ್ಪನಾಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ FIR ದಾಖಲು

ವಿಜಯನಗರ: ಸಾಲದ ಕಂತು ಕೇಳಲು ಹೋದ ಸಂಘದ ಪ್ರತಿನಿಧಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ವಿಜಯನಗರದ ಕೂಡ್ಲಿಗಿ ತಾಲೂಕಿನ ರಾಮದುರ್ಗ ಗ್ರಾಮದಲ್ಲಿ ನಡೆದಿದೆ.

ಕಲ್ಪನಾ ಗಂಭೀರವಾಗಿ ಗಾಯಗೊಂಡ ಮಹಿಳೆ. ಧರ್ಮಸ್ಥಳ ಸಂಘದ ಸಾಲ ತಂತು ಕಟ್ಟುವಂತೆ ಹೇಳಿದ್ಕೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಸವರಾಜ್, ಗೀತಮ್ಮ, ತಿಪ್ಪೇಸ್ವಾಮಿ ಎಂಬುವವರು ಹಲ್ಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ತಿಂಗಳ ತಂತು ಕೇಳಲು ಬಸವರಾಜ್ ಮನೆ ಕಲ್ಪನಾ ಹೋಗಿದ್ದಳು. ಸಾಲದ ತಂತು ಕೇಳೋಕೆ ಬರ್ತಿಯಾ ಎಂದು ಮೂವರಿಂದ ಕಲ್ಪನಾಳ ಹಿಡಿದು ತಳಿಸಿದ್ದಾಳೆ. ಗೋಡೆಗೆ ಕಲ್ಪನಾಳ ತಲೆ ಚಚ್ಚಿ, ಕೊಲೆಗೆ ಯತ್ನಿಸಿರುವ ಆರೋಪ ಮಾಡಲಾಗಿದೆ.

ಧರ್ಮಸ್ಥಳ ಸಂಘದಲ್ಲಿ ಬಸವರಾಜ್ ಕುಟುಂಬಸ್ಥರು ಸಾಲ ಮಾಡಿದ್ದರು. ಸಂಘದ ಪ್ರತಿನಿಧಿಯಾಗಿ ಕಲ್ಪನಾ ಕೆಲಸ ಮಾಡುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡ ಕಲ್ಪನಾಳಿಗೆ ಬಳ್ಳಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧರ್ಮಸ್ಥಳ ಸಂಘದ ಸಾಲ ಮರುಪಾವತಿ ಮಾಡಿ ಎಂದ ಪ್ರತಿನಿಧಿಗೆ ಹಿಗ್ಗಾಮುಗ್ಗಾ ಬಾರಿಸಿದ ಸಾಲಗಾರರು..!

https://newsfirstlive.com/wp-content/uploads/2023/11/VIJ.jpg

Load More