newsfirstkannada.com

13 ಹುಡುಗರ ಜೊತೆ ಪ್ರೀತಿ, ನಾಲ್ವರನ್ನ ಮದುವೆ.. ಪ್ರೀತಿ, ಮದುವೆ ಹೆಸರಲ್ಲಿ 17 ಮಂದಿಗೆ ಟೋಪಿ ಹಾಕಿದ ಮಹಿಳೆ

Share :

05-07-2023

    ಆರೋಪಿ ಅನುಷಾ ಹಣವಂತರನ್ನೇ ಟಾರ್ಗೆಟ್ ಮಾಡ್ತಿದ್ಲು

    ಮದುವೆಯಾಗದ ಹುಡುಗರನ್ನೇ ಹುಡುಕುತ್ತಿದ್ಲು ಕಿಲಾಡಿ ಲೇಡಿ

    ಮಹಿಳೆಯ ಮೋಹಕ ಬಲೆಗೆ ಬಿದ್ದಿದ್ದರು 17 ಯುವಕರು

ಇದು ಸೋಶಿಯಲ್ ಮೀಡಿಯಾ ಕಾಲ. ಇದನ್ನೇ ಬಂಡವಾಳ ಮಾಡಿಕೊಂಡು ವಂಚಿಸೋರ ಸಂಖ್ಯೆ ಹೆಚ್ಚಾಗ್ತಿದೆ. ಜೊತೆಗೆ ಮ್ಯಾಟ್ರಿಮೋನಿಯಂತ ವೆಬ್‌ಸೈಟ್‌ಗಳಲ್ಲಿ ಮದುವೆ ಹೆಸರಲ್ಲಿ ಮಕ್ಮಲ್ ಟೋಪಿ ಹಾಕೋರು ಹೆಚ್ಚಾಗ್ತಿದ್ದಾರೆ. ಇದೀಗ ಪಕ್ಕದ ತೆಲಂಗಾಣದಲ್ಲಿ ಮದುವೆ ಹೆಸರಲ್ಲಿ ಕಿಲಾಡಿ ಲೇಡಿಯೊಬ್ಳು ಸಾಲು ಸಾಲು ಯುವಕರಿಗೆ ವಂಚಿಸಿರೋ ಪ್ರಕರಣ ಬೆಳಕಿಗೆ ಬಂದಿದೆ.

ಇದು ಸೋಶಿಯಲ್‌ ಮೀಡಿಯಾ ಜಮಾನ. ವಾಟ್ಸ್‌ಆ್ಯಪ್‌ನಲ್ಲಿ ಹಾಯ್‌ ಅಂದು. ಫೇಸ್‌ ಬುಕ್‌ನಲ್ಲಿ ಲವ್‌ ಮಾಡಿ. ಇನ್‌ಸ್ಟಾಗ್ರಾಂನಲ್ಲೇ ಮದುವೆಯಾಗಿ. ರೀಲ್ಸ್‌ನಲ್ಲೇ ಡ್ಯುಯೆಟ್ ಆಡೋ ಯುಗ. ಆದ್ರೆ, ಇದನ್ನೇ ಅಸ್ತ್ರವಾಗಿಸಿಕೊಂಡ ಯುವತಿಯೊಬ್ಬಳು ಸಾಲು ಸಾಲು ಯುವಕರ ಬಾಳಲ್ಲಿ ಆಟವಾಡಿಬಿಟ್ಟಿದ್ದಾಳೆ..

ಮ್ಯಾಟ್ರಿಮೋನಿಯಲ್ಲಿ ಹುಡುಗಿ ಹುಡುಕೋ ಯುವಕರೇ ಎಚ್ಚರ

ಮ್ಯಾಟ್ರಿಮೋನಿಯಲ್ಲಿ ಸುಂದರವಾಗಿರುವ ಹುಡುಗಿಯರು, ವಧು ಹುಡುಕುವವರನ್ನ ಟಾರ್ಗೆಟ್​ ಮಾಡಿ ವಂಚಿಸುತ್ತಿದ್ದಾರೆ. ಟ್ರೆಂಡ್​ಗೆ ತಕ್ಕಂತೆ ಡ್ರೆಸ್ ಹಾಕಿಕೊಂಡು ತಳುಕು ಬಳುಕು ತೋರಿಸುತ್ತಾ ಹಳ್ಳಕ್ಕೆ ಬೀಳಿಸ್ತಿದ್ದಾರೆ. ಇವರ ವಯ್ಯಾರದ ಮಾತಿಗೆ ಮರುಳಾದ್ರೆ ಮಸಣ ಸೇರೋದು ಗ್ಯಾರಂಟಿ.

ಇದೀಗ ತೆಲಂಗಾಣದಲ್ಲಿ ಅನುಷಾ ಎಂಬ ಮಹಿಳೆಯೊಬ್ಳು ಇದೇ ರೀತಿ 17 ಮಂದಿಗೆ ವಂಚಿಸಿರೋ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ 13 ಮಂದಿಗೆ ಪ್ರೀತಿಯ ಹೆಸರಲ್ಲಿ ಈ ಅನುಷಾ ಎಂಬ ಮಹಿಳೆ ಮೋಸ ಮಾಡಿದ್ದಾಳೆ. ನಾಲ್ವರನ್ನ ಮದುವೆಯಾಗಿ ಕೈ ಕೊಟ್ಟು ಓಡಿ ಹೋಗಿದ್ದಾಳೆ. ತನ್ನ ಸೌಂದರ್ಯವನ್ನೇ ಅಸ್ತ್ರವಾಗಿಸಿಕೊಂಡು ಹುಡುಗರನ್ನು ಬಲೆಗೆ ಬೀಳಿಸಿ ಲಕ್ಷಾಂತರ ಹಣವನ್ನ ದೋಚಿದ್ದಾಳೆ. ಆನ್‌ಲೈನ್ ಅಪ್ಲಿಕೇಶನ್‌ಗಳಲ್ಲಿ ಹುಡುಗರನ್ನ ತನ್ನ ಮೋಹಕ ಬಲೆಗೆ ಬೀಳಿಸಿಕೊಂಡು ವಂಚಿಸಿ ಹೈ ಫೈ ಜೀವನ ನಡೆಸುತ್ತಿದ್ದಳು ಅನ್ನೋದು ಬಯಲಾಗಿದೆ.

ಪ್ರಾತಿನಿಧಿಕ ಚಿತ್ರ (ಫೋಟೋ: ವಿಕಿಲ್​ಸರ್ಚ್​)

ಖಾಸಗಿ ಮದುವೆ ಬ್ಯುರೋಗಳಲ್ಲಿ ಫೋಟೋ ಹಾಕುತ್ತಿದ್ಲು

ಆರೋಪಿ ಅನುಷಾ ಹಣವಂತರನ್ನೇ ಟಾರ್ಗೆಟ್ ಮಾಡ್ತಿದ್ಲು. ಅದರಲ್ಲೂ ಮದುವೆಯಾಗದ ಹುಡುಗರನ್ನೇ ಹುಡುಕುತ್ತಿದ್ಲು. ಖಾಸಗಿ ಮದುವೆ ಬ್ಯುರೋಗಳಲ್ಲಿ ಚಂದದ ಫೋಟೋ ಹಾಕುತ್ತಿದ್ಲು. ಹೀಗೆ ತೆಲಂಗಾಣದ ಯುವಕನೊಬ್ಬ ಈಕೆಯ ಫೋಟೋ ನೋಡಿ ಮೋಹಕ ಬಲೆಗೆ ಬಿದ್ದಿದ್ದ. ತಾಜಾಪೆದ್ದಪಲ್ಲಿಯ ಸುದ್ದಲ ರೇವಂತ್‌ ಜೊತೆ ಈ ಅನುಷಾ  ಲವ್ವಿಡವ್ವಿ ಆಟ ಆಡಿದ್ಲು. ಅಲ್ಲದೇ ಮದುವೆಗೂ ಮುನ್ನವೇ 2 ಲಕ್ಷದ 90 ಸಾವಿರ ರೂಪಾಯಿ ಪಡೆದಿದ್ಲು. ಬಳಿಕ ಕಳೆದ ಡಿ.14ರಂದು ಅನುಷಾ-ಸುದ್ದಲ ರೇವಂತ್ ವಿವಾಹವಾಗಿದ್ರು.

ಮದುವೆಯಾಗಿ ನಾಲ್ಕೈದು ದಿನಗಳು ಕಳೆದ್ಮೇಲೆ ಇವಳ ಅಸಲಿ ಆಟ ಶುರುವಾಗಿತ್ತು. ಯಾಮಾರಿಸೋ ಕಲೆಯನ್ನೇ ಕರಗತ ಮಾಡಿಕೊಂಡಿದ್ದ ಕಿಲಾಡಿ ಲೇಡಿ ಅನುಷಾ ತವರಿಗೆ ಹೋಗುವ ವರಸೆಯನ್ನ ತೆಗೆದಿದ್ಲು..

ಹೀಗೆ 13 ಜನರಿಗೆ ಪ್ರೀತಿಯ ಹೆಸರಲ್ಲಿ ವಂಚಿಸಿರೋದು ಬಯಲು

ಊರಿಗೆ ಹೋಗೋದಾಗಿ ಹೇಳಿದ್ದ ವಂಚಕಿ ಅನುಷಾ, 4 ತೊಲ ಚಿನ್ನಾಭರಣ, 70 ಸಾವಿರ ರೂಪಾಯಿ ಹಣ ತೆಗೆದುಕೊಂಡು ಎಸ್ಕೇಪ್‌ ಆಗಿದ್ಲು. ಬಳಿಕ ರೇವಂತ್ ಕರೆ ಮಾಡಿದ್ರೂ ಈ ಅನುಷಾ ಕರೆ ಸ್ವೀಕರಿಸಿಲ್ಲ. ಬಳಿಕ ಸಂಷಯಗೊಂಡ ರೇವಂತೆ ಈಕೆಯ ಬಗ್ಗೆ ವಿಚಾರಿಸಿದಾಗ ಅನುಷಾ ಅಸಲಿ ಆಟ ಬಯಲಾಗಿದೆ. ಈ ಕಿಲಾಡಿ ಮಹಿಳೆ ಈಗಾಗಲೇ ಮೂವರನ್ನ ಮದುವೆಯಾಗಿದ್ಲು. ಹೀಗೆ 13 ಜನರಿಗೆ ಪ್ರೀತಿಯ ಹೆಸರಲ್ಲಿ ವಂಚಿಸಿದ್ದಾಳೆ ಅನ್ನೋದು ಬಯಲಾಗಿದೆ.

ಇದಷ್ಟೇ ಅಲ್ಲ. ರೇವಂತ್‌ಗೆ ತನ್ನ ಮೋಸದ ಬಗ್ಗೆ ಗೊತ್ತಾಗಿದೆ ಅಂತಾ ತಿಳಿದುಕೊಂಡಿದ್ದ ಅನುಷಾ, ಆತನನ್ನ ಹೈದರಾಬಾದ್​ಗೆ ಕರೆಸಿಕೊಂಡಿದ್ಲು. ರೌಡಿಗಳಿಂದ ಹೊಡಿಸಿ ವೀಡಿಯೋ ತೆಗೆದು 20 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾಳೆ. ಇಷ್ಟೆಲ್ಲಾ ಆದ್ಮೇಲೆ ಸುದ್ದಲ ರೇವಂತ್​ ತಮಗೆ ರಕ್ಷಣೆ ನೀಡಬೇಕೆಂದು ರಾಮಗುಂಡಂ ಪೊಲೀಸರ ಮೊರೆ ಹೋಗಿದ್ದಾರೆ. ಕಿಲಾಡಿ ಲೇಡಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಇದೀಗ ಪೊಲೀಸರು ಈಕೆಗಾಗಿ ಬಲೆ ಬೀಸಿದ್ದಾರೆ.

ಅದೇನೆ ಇರ್ಲಿ, ಮೋಸ ಹೋಗೋರು ಇರೋ ತನಕ ಮೋಸ ಮಾಡೋರು ಇದ್ದೇ ಇರ್ತಾರೆ.. ಹೀಗಾಗಿ ಆನ್‌ಲೈನ್‌ನಲ್ಲಿ ಹುಡುಗಿ ಹುಡುಕೋ ಯುವಕರೇ ಎಚ್ಚರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

13 ಹುಡುಗರ ಜೊತೆ ಪ್ರೀತಿ, ನಾಲ್ವರನ್ನ ಮದುವೆ.. ಪ್ರೀತಿ, ಮದುವೆ ಹೆಸರಲ್ಲಿ 17 ಮಂದಿಗೆ ಟೋಪಿ ಹಾಕಿದ ಮಹಿಳೆ

https://newsfirstlive.com/wp-content/uploads/2023/07/Amusha.jpg

Load More