newsfirstkannada.com

ಹೊಡೀರಿ ಚಪ್ಪಾಳೆ! ರಸ್ತೆಗೆ ಹಾಕಿದ ಸಿಮೆಂಟ್ ಕಾಂಕ್ರೀಟ್‌ ಅನ್ನೇ ಲೂಟಿ ಹೊಡೆದ ಜನರು

Share :

07-11-2023

    ನಮ್ಮ ಜನ ಬಿಟ್ಟಿಯಾಗಿ ಸಿಕ್ರೆ ಏನನ್ನೂ ಬಿಡೋದಿಲ್ಲ ಅಲ್ವಾ?

    ಜನರ ಲೂಟಿಯಿಂದ 3 ಕಿಮೀ ರಸ್ತೆ ಕಾಮಗಾರಿ ನಿರ್ಮಾಣ ಬಂದ್‌

    ಮುಖ್ಯಮಂತ್ರಿ ಯೋಜನೆಯಡಿ ಮಂಜೂರಾಗಿದ್ದ ಸಿಮೆಂಟ್ ಕಾಂಕ್ರೀಟ್

ನಮ್ಮ ಜನ ಬಿಟ್ಟಿಯಾಗಿ ಸಿಕ್ರೆ ಏನನ್ನೂ ಬಿಡೋದಿಲ್ಲ ಅನ್ಸುತ್ತೆ. ಸಿಕ್ಕಿದ್ದೇ ಸೀರುಂಡೆ ಅಂತ ಕೈಗೆ ಸಿಕ್ಕಷ್ಟು ಬಾಚಿಕೊಂಡು ಹೋಗ್ತಾರೆ. ಬಿಹಾರದಲ್ಲಿ ಇಂತಹದೇ ಘಟನೆಯೊಂದು ಬೆಳಕಿಗೆ ಬಂದಿದೆ. ಗ್ರಾಮಕ್ಕೆ ಮೂರು ಕಿಲೋ ಮೀಟರ್ ಸಿಮೆಂಟ್ ಕಾಂಕ್ರೀಟ್ ರಸ್ತೆ ಮಂಜೂರಾಗಿದ್ರೆ, ಅಲ್ಲಿನ ಜನ ರಸ್ತೆ ಕಾಮಗಾರಿ ನಡೆಯುತ್ತಿರುವಾಗಲೇ ಸಿಮೆಂಟ್ ಕಾಂಕ್ರೀಟ್ ಅನ್ನು ಲೂಟಿ ಮಾಡಿದ್ದಾರೆ.

ಸಿಮೆಂಟ್ ಕಾಂಕ್ರೀಟ್‌ ಲೂಟಿ ಹೊಡೆದ ಈ ಘಟನೆ ನಡೆದಿರೋದು ಬಿಹಾರದಲ್ಲಿ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮುಖ್ಯಮಂತ್ರಿ ಯೋಜನೆಯಡಿ ಈ ಗ್ರಾಮಕ್ಕೆ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಮಂಜೂರಾಗಿತ್ತು.

ಜಿಲ್ಲಾಡಳಿತ ರಸ್ತೆ ಕಾಮಗಾರಿಯನ್ನು ಆರಂಭಿಸಿತ್ತು. ಆದರೆ ಜನರು ಸಿಮೆಂಟ್ ಕಾಂಕ್ರೀಟ್ ಅನ್ನು ತಮ್ಮ ಪಾತ್ರೆ, ಬಾಂಡಲಿಯಲ್ಲಿ ತುಂಬಿಕೊಂಡು ಹೋಗಿದ್ದಾರೆ. ಜನರೇ ಕಾಂಕ್ರೀಟ್‌ ಅನ್ನು ಲೂಟಿ ಮಾಡಿಕೊಂಡು ಹೋಗಿದ್ದಾರೆ.

ಗ್ರಾಮಕ್ಕೆ ಮೂರು ಕಿ.ಮೀ ಸಿಮೆಂಟ್ ಕಾಂಕ್ರಿಟ್ ರಸ್ತೆ ಮಂಜೂರಾದ್ರೂ ಜನರ ಲೂಟಿಯಿಂದ ರಸ್ತೆ ನಿರ್ಮಾಣವೇ ಆಗಿಲ್ಲ. ರಸ್ತೆ ನಿರ್ಮಾಣದ ಸಿಮೆಂಟ್ ಕಾಂಕ್ರಿಟ್ ಅನ್ನು ಜನರು ತಮ್ಮ ಮನೆ ಬಳಿ ಹಾಕಿಕೊಂಡಿದ್ದಾರೆ. ಜನರು ಸಿಮೆಂಟ್ ಕಾಂಕ್ರಿಟ್ ಅನ್ನು ಲೂಟಿ ಹೊಡೆದ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿರೋ ನೆಟ್ಟಿಗರು ಬಿಹಾರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇಂತಹ ಜನಗಳಿಗೆ ಹೊಡೀರಿ ಚಪ್ಪಾಳೆ ಅಂತ ಕೆಲವರು ಹೇಳಿದ್ರೆ, ಹಲವರು ಬಿಹಾರದಲ್ಲಿ ಜಾತಿ ಗಣತಿ ಆದ ಮೇಲೆ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಡೀರಿ ಚಪ್ಪಾಳೆ! ರಸ್ತೆಗೆ ಹಾಕಿದ ಸಿಮೆಂಟ್ ಕಾಂಕ್ರೀಟ್‌ ಅನ್ನೇ ಲೂಟಿ ಹೊಡೆದ ಜನರು

https://newsfirstlive.com/wp-content/uploads/2023/11/Bihar-Concrete-Cement.jpg

Load More