newsfirstkannada.com

Video: ಚಿರತೆ ಬೆನ್ನ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ! ಸೆಲ್ಫಿಗಾಗಿ ಮುಗಿಬಿದ್ರು ಜನರು

Share :

30-08-2023

    ಕಾಡಿನಿಂದ ನಾಡಿಗೆ ಬಂದ ಚಿರತೆ ಜೊತೆಗೆ ಸೆಲ್ಫಿ

    ಚಿರತೆ ಬೆನ್ನ ಮೇಲೆ ಕುಳಿತು ಕಪಿಚೇಷ್ಟೆ ಮಾಡಿದ ವ್ಯಕ್ತಿ

    ಜನರಿಗೆ ಕ್ಯಾರೆ ಇಲ್ಲ, ಅದು ಚಿರತೆ ಅನ್ನೋ ಭಯವೇ ಇಲ್ಲ

ಸಾಮಾನ್ಯವಾಗಿ ಚಿರತೆ ಪ್ರತ್ಯಕ್ಷವಾದ್ರೆ ಜನ ಎದ್ದು ಬಿದ್ದು ಪ್ರಾಣ ಉಳಿಸಿಕೊಳ್ಳಬೇಕಂತಾ ಓಡಿ ಹೋಗ್ತಾರೆ. ಆದ್ರೆ ಮಧ್ಯಪ್ರದೇಶದ ದೇವಾಸ್​ನ ಸೋಂಕಚ್​ನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಈ ವೇಳೆ ಗ್ರಾಮಸ್ಥರು ಚಿರತೆ ಜೊತೆ ಸೆಲ್ಫಿಗೆ ಕ್ಲಿಕ್ಕಿಸಿಕೊಂಡು ಹುಚ್ಚಾಟ ಮೆರೆದಿದ್ದಾರೆ.

ಚಿರತೆಯನ್ನ ಸುತ್ತುವರಿದು, ಅದರ ಮೇಲೆ ಆನೆ ಮೇಲೆ ಕುಳಿತಂತೆ ಕಪಿಚೇಷ್ಟೆ ಆಡಿದ್ದಾರೆ. ಸುಮಾರು 15ರಿಂದ 20 ಜನರು ಚಿರತೆ ಬಳಿ ಸುತ್ತುವರಿದು ಅದರ ಜೊತೆಗೆ ಹುಚ್ಚಾಟ ಮೆರೆದಿದ್ದಾರೆ. ಇನ್ನು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ರಕ್ಷಣಾ ತಂಡ ಚಿರತೆಯನ್ನ ರಕ್ಷಿಸಿ ಚಿಕಿತ್ಸೆ ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್​ ಆಗಿದೆ. ಆದರು ಇಷ್ಟೆಲ್ಲಾ ಜನರು ತೊಂದರೆ ಕೊಟ್ಟರು ಚಿರತೆ ಮಾತ್ರ ಸುಮ್ಮನೆ ಹೆಜ್ಜೆ ಇಡುತ್ತಿರೋದು ಅಚ್ಚರಿಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಚಿರತೆ ಬೆನ್ನ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ! ಸೆಲ್ಫಿಗಾಗಿ ಮುಗಿಬಿದ್ರು ಜನರು

https://newsfirstlive.com/wp-content/uploads/2023/08/Leopard.jpg

Load More