newsfirstkannada.com

ಕರೆಂಟ್ ಬಿಲ್ ನೋಡಿ ಶಾಕ್ ಆದ ಜನ; ಗ್ಯಾರಂಟಿ ಭರವಸೆ ನೀಡಿದ್ದ ಸರ್ಕಾರದ ವಿರುದ್ಧ ಆಕ್ರೋಶ

Share :

09-06-2023

    300 ಬರ್ತಿದ್ದ ಕರೆಂಟ್ ಬಿಲ್ 1800 ರೂಪಾಯಿ ಬಂದ್ರೆ ಹೇಗೆ?

    ಉಚಿತ ಭರವಸೆ ನೀಡಿದ್ದ ಸರ್ಕಾರದ ವಿರುದ್ಧ ಜನರ ಆಕ್ರೋಶ

    ವಿದ್ಯುತ್ ದರ ಏರಿಕೆಗೆ ಆಕ್ರೋಶ.. ಜೆಸ್ಕಾಂ ಕಚೇರಿಗೆ ಮುತ್ತಿಗೆ

ಗೃಹಜ್ಯೋತಿ ಮೂಲಕ ಉಚಿತ ವಿದ್ಯುತ್ ಕೊಡ್ತೀನಿ ಅಂದಿದ್ದ ರಾಜ್ಯ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆಯಾ ಅನ್ನೋ ಪ್ರಶ್ನೆ ಎದ್ದಿದೆ. ಯಾಕಂದ್ರೆ ಉಚಿತ ಕೊಡೋದಿರಲಿ ಮತ್ತೆ ದರ ಏರಿಕೆ ಮಾಡಿರುವುದನ್ನೇ ಖಚಿತ ಮಾಡಿದೆ. ಒಂದು ಕಡೆ ಗೃಹಜ್ಯೋತಿ ಗ್ಯಾರಂಟಿ ಯೋಜನೆ ಅನುಷ್ಟಾನಕ್ಕೆ ಸರ್ಕಾರ ಸಜ್ಜಾಗ್ತಿದೆ. ಮತ್ತೊಂದೆಡೆ ವಿದ್ಯುತ್ ದರ ಏರಿಕೆ ಮಾಡಿ ಜನರಿಗೆ ಶಾಕ್ ನೀಡಿದೆ. ಉಚಿತ ವಿದ್ಯುತ್ ಸಿಗುವ ಖುಷಿಯಲ್ಲಿದ್ದ ಜನರಿಗೆ ‘ಡಬಲ್’ ಆಘಾತವಾಗಿದೆ.

ವಿದ್ಯುತ್ ದರ ಏರಿಕೆ, ಸರ್ಕಾರದಿಂದ ಜನರಿಗೆ ಶಾಕ್!
ಉಚಿತ ಭರವಸೆ ನೀಡಿದ್ದ ಸರ್ಕಾರದ ವಿರುದ್ಧ ಆಕ್ರೋಶ!

ನಮಗೂ ಫ್ರೀ, ನಿಮಗೂ ಫ್ರೀ.. ಎಲ್ಲರಿಗೂ ಫ್ರೀ.. ಇದು ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರು ಮೊಳಗಿಸಿದ್ದ ಘೋಷಣೆ. ಚುನಾವಣೆಗೂ ಮುನ್ನ ಒಂದು ಮಾತು. ಚುನಾವಣೆಯಾದ್ಮೇಲೆ ಮತ್ತೊಂದು ಮಾತು. ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ನೀಡ್ತೀವಿ ಎಂದಿದ್ದ ಕಾಂಗ್ರೆಸ್ ನಾಯಕರು ಜನಸಾಮಾನ್ಯರ ಮೇಲೆ ಷರತ್ತುಗಳ ಭಾರ ಹೊರಿಸಿದ್ದಾರೆ. ಇನ್ನೂ ಗೃಹಜ್ಯೋತಿ ಯೋಜನೆ ಜಾರಿಗೆ ಬಂದೇ ಇಲ್ಲ. ಅಷ್ಟರಲ್ಲೇ ರಾಜ್ಯದಲ್ಲಿ ದಿಢೀರ್ ಕರೆಂಟ್ ಬಿಲ್ ಏರಿಕೆ ಆಗಿರೋದು ಬಿಗ್ ಶಾಕ್ ನೀಡಿದೆ. ವಿದ್ಯುತ್ ದರ ಏರಿಕೆ ಮಾಡಿರುವ ಕ್ರಮದ ವಿರುದ್ಧ ಜನತೆ ಸಿಡಿದೆದ್ದಿದ್ದಾರೆ.

ವಿದ್ಯುತ್ ದರ ಏರಿಕೆಗೆ ಆಕ್ರೋಶ.. ಜೆಸ್ಕಾಂ ಕಚೇರಿಗೆ ಮುತ್ತಿಗೆ!

ವಿದ್ಯುತ್ ದರ ಏರಿಕೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ತೀವ್ರ ಜನಾಕ್ರೋಶ ವ್ಯಕ್ತವಾಗಿದೆ. ಬಿಲ್ ಹಿಡಿದು ಗಂಗಾವತಿಯ ಜೆಸ್ಕಾಂ ಕಚೇರಿಗೆ ನೂರಾರು ಮಹಿಳೆಯರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು ಈ ಮಟ್ಟಿಗೆ ವಿದ್ಯುತ್ ದರ ಏರಿಕೆಗೆ ಕಾರಣ ಏನು. ಉಚಿತ ವಿದ್ಯುತ್ ನೀಡ್ತಿವಿ ಅಂತಾ ಸರ್ಕಾರ ಅಕ್ರಮವಾಗಿ ಹಣ ವಸೂಲಿ ಮಾಡ್ತಿದೆ. ಪ್ರತಿ ತಿಂಗಳು 300 ರೂಪಾಯಿ ಬರ್ತಿದ್ದ ಕರೆಂಟ್ ಬಿಲ್ ಈಗ 1800 ರೂಪಾಯಿವರೆಗೂ ಬಂದಿದೆ. ಇಷ್ಟೊಂದು ದೊಡ್ಡ ಮೊತ್ತದ ಬಿಲ್ ಬಂದ್ರೆ ನಾವು ಹೇಗೆ ಕಟ್ಟೋದು. ನಮ್ಮಿಂದ ಕಟ್ಟಲು ಸಾಧ್ಯವಿಲ್ಲ ಅಂತ ಮಹಿಳೆಯರು ಕೈ ಕೊಡವಿ ಬಿಟ್ಟಿದ್ದಾರೆ. ಕರೆಂಟ್‌ ಬಿಲ್‌ ಏರಿಕೆ ಪ್ರಸ್ತಾಪ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಇತ್ತು. ಕಳೆದ ತಿಂಗಳಲ್ಲಿ ಈ ಪ್ರಸ್ತಾಪಕ್ಕೆ ಸಮ್ಮತಿ ಸಿಕ್ಕಿದೆ. ಕಳೆದ ಎರಡು ತಿಂಗಳಿನಿಂದ ಪೂರ್ವಾನ್ವಯ ಆಗುವಂತೆ ವಿದ್ಯುತ್‌ ದರ ಹೆಚ್ಚಿಸಿದ್ದರಿಂದ ಕರೆಂಟ್ ಬಿಲ್ ದುಬಾರಿಯಾಗಿದೆ ಎನ್ನಲಾಗಿದೆ. ಇದರೊಂದಿಗೆ ಫಿಕ್ಸ್‌ಡ್ ಶುಲ್ಕ ಹಾಗೂ ಇತರೆ ಶುಲ್ಕವನ್ನು ಕೂಡ ಬಿಲ್‌ಗೆ ಸೇರಿಸಲಾಗ್ತಿದೆ. ಹೀಗಾಗಿ ವಿದ್ಯುತ್ ದರ ಏರಿಕೆ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆ ಫ್ರೀ ಗ್ಯಾರಂಟಿ ಭರವಸೆಯಿಂದ ರಾಜ್ಯದ ಜನ ಖುಷಿಯಾಗಿದ್ದರು. ಉಚಿತ ವಿದ್ಯುತ್ ಲಾಭ ಪಡೆಯಲು ಜಾತಕಪಕ್ಷಿಗಳಂತೆ ಕಾದಿದ್ದರು. ಆದ್ರೀಗ ಮತ್ತೆ ಕರೆಂಟ್​ ಬಿಲ್​ ಹೆಚ್ಚಳ ಆಗಿರೋದು ಜನರಿಗೆ ಗ್ಯಾರೆಂಟಿಗೂ ಮೊದಲು ಕರೆಂಟ್​ ಶಾಕ್ ಕೊಟ್ಟಂತಾಗಿದೆ. ಆದ್ರೂ ಮುಂದಿನ ತಿಂಗಳಿಂದ ಗ್ಯಾರೆಂಟಿ ಅನ್ವಯವಾಗಲಿದೆ. ಅದಕ್ಕೂ ಮುನ್ನಾ ಬಂದಿರೋ ಬಿಲ್‌ನಂತೂ ಪೂರ್ಣ ಪ್ರಮಾಣದಲ್ಲಿ ಕಟ್ಟಲೇಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರೆಂಟ್ ಬಿಲ್ ನೋಡಿ ಶಾಕ್ ಆದ ಜನ; ಗ್ಯಾರಂಟಿ ಭರವಸೆ ನೀಡಿದ್ದ ಸರ್ಕಾರದ ವಿರುದ್ಧ ಆಕ್ರೋಶ

https://newsfirstlive.com/wp-content/uploads/2023/06/siddu-12.jpg

Load More