newsfirstkannada.com

ಏರ್​ಪೋರ್ಟ್​ನಲ್ಲಿ ತನ್ನ ಸೂಟ್​ಕೇಸನ್ನೇ ಕಿತ್ತು ಕಿತ್ತು ತಿಂದ ಯುವತಿ; ಬೆಚ್ಚಿಬಿದ್ದ ಜನ!

Share :

Published August 31, 2024 at 7:32pm

    ಏರ್​ಪೋರ್ಟ್​ನಲ್ಲಿ ಯುವತಿಯೊಬ್ಬಳ ವಿಚಿತ್ರ ವರ್ತನೆ ಕಂಡ ಜನ ಗಾಬರಿ

    ತನ್ನ ಸೂಟ್​ಕೇಸ​ನ್ನು ಕಿತ್ತು ಕಿತ್ತು ತಿಂದ ಯುವತಿ, ನೋಡಿದವರಿಗೆ ನಗು, ಅಚ್ಚರಿ

    ವೈರಲ್ ಆದ ವಿಡಿಯೋದಲ್ಲಿ ಕೊನೆಗೆ ಇರೊದೇನು? ಹುಡುಗಿ ತಿಂದಿದ್ದು ಏನು?

ನೀವು ಸೋಷಿಯಲ್ ಮಿಡಿಯಾದಲ್ಲಿ ಸದಾ ಸಕ್ರಿಯರಾಗಿದ್ದರೆ ನಿಮಗೆ ನೋಡಲು ಹಲವು ವಿಡಿಯೋಗಳು ಸಿಗುತ್ತವೆ. ಸದ್ಯ ಇದು ರೀಲ್ಸ್ ಕಾಲ, ವಿಭಿನ್ನ ರೀಲ್ಸ್ ಮಾಡಿ ಹಾಕಿ ಲಕ್ಷಗಟ್ಟಲೆ ಲೈಕ್ಸ್ ವೀವ್ಸ್ ಪಡೆಯುವ ಚಾಲೆಂಜ್​ನಲ್ಲಿಯೇ ಇಂದಿನ ಯುವಪೀಳಿಗೆ ಮುಳುಗಿದೆ. ಆದರೆ ಪೋರ್ಚುಗಲ್​ನಲ್ಲಿ ಒಂದು ಹುಡುಗಿಯ ವಿಡಿಯೋ ನೋಡಿ ಇನ್​ಸ್ಟಾಗ್ರಾಮ್​ ಬಳಕೆದಾರರು ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: ಪವಿತ್ರಾ ಗೌಡಗೆ ಬಿಗ್ ಶಾಕ್​.. ಕೋರ್ಟ್​​​ನಿಂದ ಜಾಮೀನು ಅರ್ಜಿ ವಜಾ ​

ಏರ್​ಪೋರ್ಟ್​ ಒಂದರಲ್ಲಿ ಯುವತಿ ತನ್ನ ಸೂಟ್​ಕೇಸ್ ಹಿಡಿದುಕೊಂಡು ಸುತ್ತಾಡಿದ್ದಾಳೆ, ಅಸಲಿಗೆ ಟ್ವಿಸ್ಟ್ ಸಿಕ್ಕಿದ್ದು ಅವಳು ತನ್ನ ಸೂಟ್​ಕೇಸ​ನ್ನ ಕಿತ್ತು ಕಿತ್ತು ತಿನ್ನಲು ಆರಂಭ ಮಾಡಿದಾಗ. ಈ ವಿಡಿಯೋ ನೋಡಿದ ಸೋಷಿಯಲ್ ಮಿಡಿಯಾದ ಬಳಕೆದಾರರು ಮಾತ್ರವಲ್ಲ, ವಿಡಿಯೋದಲ್ಲಿ ಏರ್​ಪೋರ್ಟ್​​ನಲ್ಲಿ ಕಂಡ ಜನರು ಕೂಡ ಆಕೆಯ ವಿಚಿತ್ರ ವರ್ತನೆಯನ್ನು ಕಂಡು ಬೆಕ್ಕಸ ಬೆರಗಾಗಿ ಆಕೆಯನ್ನೇ ನೋಡಿದ್ದಾರೆ.

ಇದನ್ನೂ ಓದಿ: ತಾಯಿ ಜೊತೆಗೆ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ Jr. NTR; ಪ್ರಶಾಂತ್​ ನೀಲ್​, ರಿಷಭ್​ ಶೆಟ್ಟಿ ಸಾಥ್!​

ನೀವು ಇತ್ತೀಚೆಗೆ ಅತ್ಯಂತ ಹೈಪರ್ ರಿಯಲಿಸ್ಟಿಕ್ ಕೇಕ್​ಗಳನ್ನ ನೋಡಿದ್ದೀರ.. ತೀರ ನಮಗೆ ಬೇಕು ಅನಿಸುವಂತಹ ರೂಪದಲ್ಲಿ, ತದ್ರೂಪದಲ್ಲಿಯೇ ಇಂದಿನ ಜಗತ್ತಿನಲ್ಲಿ ಕೇಕ್​ಗಳು ಸಿದ್ಧಗೊಳ್ಳುತ್ತಿವೆ. ಈ ಯುವತಿಯೂ ಕೂಡ ವಿಡಿಯೋ ಮಾಡಲು ಬಳಸಿದ್ದು ಅದೇ ಕೇಕ​ನ್ನೇ, ಸೂಟ್​ಕೇಸ್​ ರೀತಿಯ ಕೇಕ್ ತಯಾರಿಸಿ ಅದನ್ನು ಹಿಡಿದು ಇಡೀ ಏರ್​ಪೋರ್ಟ್​ ತುಂಬಾ ಸುತ್ತಾಡಿದ್ದಾಳೆ. ಕಡೆಗೆ ಒಂದು ಕಡೆ ಕುಳಿತು ಆ ಕೇಕ​ನ್ನು ಕಿತ್ತು ಸೂಟ್​ಕೇಸ​ನ್ನೇ ತಿನ್ನುತ್ತಿದ್ದಾಳೋ ಏನೋ ಅನ್ನುವ ರೀತಿ ತಿಂದಿದ್ದಾಳೆ.

View this post on Instagram

A post shared by Mayara Carvalho (@mayaracarvalho)

ಆರಂಭದಲ್ಲಿ ಗಾಬರಿಯಾದ ಏರ್​ಪೋರ್ಟ್​ನಲ್ಲಿರುವ ಜನರು, ಕೊನೆಗೆ ಅದು ಕೇಕ್ ಎಂದು ಅರಿವಾಗಿ, ನಗುತ್ತಲೇ ಮುಂದೆ ಸಾಗಿದ್ದಾರೆ. ಆಕೆ ಮಾಡಿದ ಈ ಒಂದು ಫ್ರ್ಯಾಂಕ್​ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್​ ಆಗಿದೆ.

ಹಲವು ರೀತಿಯ ವಿಕಟ ಪ್ರತಿಕ್ರಿಯೆಗಳು ಬರುತ್ತಿವೆ. ಯುವತಿ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದು. ಪೋರ್ಚಗೀಸ್ ಭಾಷೆಯಲ್ಲಿ, ನಾನು ಬ್ಯಾಗ್​ ಕೇಕ್​ ತಿಂದ ದಿನ ಮತ್ತು ಜನರ ಪ್ರತಿಕ್ರಿಯೆ ನೋಡಿದ ದಿನ ಎಂದು ಬರೆದುಕೊಂಡಿದ್ದಾಳೆ. ವಿಡಿಯೋದಲ್ಲಿ ಕೊನೆಗೆ ಏರ್​ಪೋರ್ಟ್​ನಲ್ಲಿರುವ ಹಲವು ಜನರಿಗೆ ತಾನು ತಿನ್ನುತ್ತಿರೋದು ಕೇಕ್ ಎಂದು ಹೇಳಿ ಅದೇ ಕೇಕ​ನ್ನು ಹಲವರಿಗೆ ಹಂಚಿದ್ದಾಳೆ ಯುವತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏರ್​ಪೋರ್ಟ್​ನಲ್ಲಿ ತನ್ನ ಸೂಟ್​ಕೇಸನ್ನೇ ಕಿತ್ತು ಕಿತ್ತು ತಿಂದ ಯುವತಿ; ಬೆಚ್ಚಿಬಿದ್ದ ಜನ!

https://newsfirstlive.com/wp-content/uploads/2024/08/GIRL-ATE-HER-SUITCASE.jpg

Load More