newsfirstkannada.com

ಪೆಪ್ಪರ್‌ಫ್ರೈ ಕಂಪನಿಯ ಸಹ-ಸಂಸ್ಥಾಪಕ ಅಂಬರೀಶ್ ಮೂರ್ತಿ ನಿಧನ; ಲಡಾಖ್‌ನಲ್ಲಿ ನಿಜಕ್ಕೂ ಆಗಿದ್ದೇನು?

Share :

08-08-2023

    ಲಡಾಖ್‌ ಲ್ಹೇ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಕೈಕೊಟ್ಟ ಬೈಕ್​

    ಕಾರ್ಡಿಯಾಕ್ ಅರೆಸ್ಟ್​ನಿಂದ ಅಂಬರೀಶ್ ಸಾವನ್ನಪ್ಪಿದ್ರಾ?

    ಬೈಕ್​ ಟ್ರಾವೆಲಿಂಗ್ ಅಂದ್ರೆ ಅಂಬರೀಶ್ ಮೂರ್ತಿಗೆ ಹುಚ್ಚು

ನವದೆಹಲಿ: ಪೆಪ್ಪರ್‌ಫ್ರೈ ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿದ್ದ ಅಂಬರೀಶ್ ಮೂರ್ತಿ (51) ಲಡಾಖ್​ನ ಲ್ಹೇನಲ್ಲಿ ನಿಧನ ಹೊಂದಿದ್ದಾರೆ. ಅಂಬರೀಶ್ ಅವರಿಗೆ ಕಾರ್ಡಿಯಾಕ್​ ಅರೆಸ್ಟ್ ಅಂದ್ರೆ ಹೃದಯ ಸ್ತಂಭನ ಆಗಿರಬಹುದು ಎನ್ನಲಾಗಿದೆ. ಆದ್ರೆ ಅವರು ಸಾವಿಗೂ ಮುನ್ನಾ ತಮ್ಮ ಇನ್​ಸ್ಟಾ ಅಕೌಂಟ್​ನಲ್ಲಿ ಪೋಸ್ಟ್​ ಒಂದು ಶೇರ್​ ಮಾಡಿದ್ದಾರೆ.

ಉದ್ಯಮಿ ಅಂಬರೀಶ್ ಮೂರ್ತಿ ಅವರು ಬೈಕ್​ ಟ್ರಾವೆಲಿಂಗ್ ಮಾಡುವ ಹವ್ಯಾಸ ಹೊಂದಿದ್ದರು. ಇದರಿಂದ ಮುಂಬೈನಿಂದ ಬೈಕ್​ನಲ್ಲೇ ಕಾಶ್ಮೀರದ ಲಡಾಖ್​ನ ಲೇಹ್‌ಗೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಮನಾಲಿ-ಲ್ಹೇ ಹೆದ್ದಾರಿಯಲ್ಲಿ ಅವರಿಗೆ ಕಾರ್ಡಿಯಾಕ್​ ಅರೆಸ್ಟ್​ ಆಗಿದೆ. ಆಗ ರಸ್ತೆಯಲ್ಲಿ ತೆರಳುವಾಗ ಬೈಕ್​ನಲ್ಲಿ ತಾಂತ್ರಿಕ ತೊಂದರೆ ಕೂಡ ಉಂಟಾಗಿದೆ ಎನ್ನಲಾಗ್ತಿದ್ದು ಇದರಿಂದ ಅವರು ಸಾವಿಗೂ ಮುನ್ನ ಇನ್​​ಸ್ಟಾದಲ್ಲಿ ದೇವರು ತನ್ನನ್ನು ದೇವತೆ ಎಂದು ಸ್ವೀಕರಿಸಲು ನಿರಾಕರಿಸಿದ್ದಾನೆ ಎಂದು ಬರೆದಿದ್ದಾರೆ.

ಪೆಪ್ಪರ್‌ಫ್ರೈ ಕಂಪನಿಯ ಇನ್ನೊಬ್ಬ ಸಹ-ಸಂಸ್ಥಾಪಕರಾದ ಆಶಿಶ್ ಶಾ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ನನ್ನ ಸ್ನೇಹಿತ, ಮಾರ್ಗದರ್ಶಕ, ಸಹೋದರನಂತೆ ಇದ್ದ ಅಂಬರೀಶ್ ಮೂರ್ತಿ ಇನ್ನಿಲ್ಲ. ಅವರು ಇಲ್ಲ ಎಂದು ಹೇಳುವುದಕ್ಕೆ ತುಂಬಾ ದುಃಖವಾಗುತ್ತಿದೆ. ಅವರ ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಹೇಳಿದ್ದಾರೆ. ಅಲ್ಲದೇ ಅಂಬರೀಶ್ ಮೂರ್ತಿ ನಿಧನ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅವರಿಗೆ ಸಾಕಷ್ಟು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಪೆಪ್ಪರ್‌ಫ್ರೈ ಕಂಪನಿಯ ಸಹ-ಸಂಸ್ಥಾಪಕ ಅಂಬರೀಶ್ ಮೂರ್ತಿ ನಿಧನ; ಲಡಾಖ್‌ನಲ್ಲಿ ನಿಜಕ್ಕೂ ಆಗಿದ್ದೇನು?

https://newsfirstlive.com/wp-content/uploads/2023/08/AMBAREESH_MURTHY.jpg

Load More