newsfirstkannada.com

ಶೇ. 80ರಷ್ಟು ‘ನಮ್ಮ ಮೆಟ್ರೋ’ ಸುರಂಗ ಮಾರ್ಗ ಕಾಮಗಾರಿ ಪೂರ್ಣ; ತಲೆ ಎತ್ತಿವೆ 12 ಮೆಟ್ರೋ ನಿಲ್ದಾಣಗಳು; ಎಲ್ಲೆಲ್ಲಿ ಗೊತ್ತಾ?

Share :

14-07-2023

  ನಮ್ಮ ಮೆಟ್ರೋ ಸುರಂಗ ಮಾರ್ಗ ಶೇಕಡಾ 80ರಷ್ಟು ಪೂರ್ಣ

  ಸುರಂಗ ಕೊರೆಯಲು ಬಳಸಲಾಗುತ್ತಿದೆ 9 ಟಿಬಿಎಂಗಳು

  ಸುರಂಗ ಮಾರ್ಗದಲ್ಲಿ ತಲೆ ಎತ್ತಿವೆ 12 ಮೆಟ್ರೋ ನಿಲ್ದಾಣಗಳು

ದೇಶದಲ್ಲೇ ಅತಿ ದೊಡ್ಡ ನಮ್ಮ ಮೆಟ್ರೋ ಸುರಂಗ ಮಾರ್ಗ ಶೇಕಡಾ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 21,245 ಮೀಟರ್‌ ಸುರಂಗ ಮಾರ್ಗ ಪೈಕಿ 17,500 ಮೀಟರ್‌ ಕಾಮಗಾರಿ ಪೂರ್ಣಗೊಂಡಿದೆ. ಇಂದು ಡಿಸಿಎಂ ಡಿಕೆ ಶಿವಕುಮಾರ್​ ಮೆಟ್ರೋ ಸುರಂಗ ಮಾರ್ಗ ಪರಿಶೀಲನೆ ನಡೆಸಿದ್ದಾರೆ.

ಡೇರಿ ಸರ್ಕಲ್‌ನಿಂದ ನಾಗವಾರದವರೆಗಿನ 13.9 ಕಿ. ಮೀ. ಉದ್ದದ ಮಾರ್ಗ ನಿರ್ಮಿಸಲಾಗಿದ್ದು, ಸುರಂಗ ಕೊರೆಯಲು 9 ಟಿಬಿಎಂಗಳ ಬಳಸಲಾಗುತ್ತಿದೆ. ಆದರಲ್ಲಿ 9 ಟಿಬಿಎಂಗಳ ಪೈಕಿ 5 ಯಂತ್ರಗಳು ಕಾಮಗಾರಿ ಪೂರ್ಣಗೊಳಿಸಿದ್ದು, ಉಳಿದ 4 ಟಿಬಿಎಂಗಳಿಂದ ಕಾರ್ಯಾಚರಣೆ ಮುಂದುವರೆದಿದೆ. 2025ರೊಳಗೆ ಕಾಮಗಾರಿಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಸುರಂಗ ಮಾರ್ಗದಲ್ಲಿ ತಲೆ ಎತ್ತಿವೆ 12 ಮೆಟ್ರೋ ನಿಲ್ದಾಣಗಳು..!
1. ಡೇರಿ ಸರ್ಕಲ್‌
2. ಲಕ್ಕಸಂದ್ರ
3. ಲ್ಯಾಂಗ್‌ಫೋರ್ಡ್‌ ಟೌನ್‌
4. ರಾಷ್ಟ್ರೀಯ ಸೈನಿಕ ಶಾಲೆ
5. ಎಂಜಿ ರಸ್ತೆ
6. ಶಿವಾಜಿನಗರ
7. ದಂಡು ರೈಲ್ವೆ ನಿಲ್ದಾಣ
8. ಪಾಟರಿ ಟೌನ್‌
9. ಟ್ಯಾನರಿ ರಸ್ತೆ
10.ವೆಂಕಟೇಶಪುರ
11. ಕಾಡುಗೊಂಡನಹಳ್ಳಿ
12. ನಾಗವಾರ

1,500 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪ್ಯಾಕೇಜ್‌ಗಳಲ್ಲಿ ಕಾಮಗಾರಿ..!

ಸುರಂಗ ಮಾರ್ಗ ಕಾಮಗಾರಿಗಳ ಗುತ್ತಿಗೆದಾರರು:

ಪ್ಯಾಕೇಜ್ 1 : RT01: M/s AFCONS Ltd ಒಪ್ಪಂದಕ್ಕೆ 12.12.2019 ರಂದು ಸಹಿ ಮಾಡಲಾಗಿದೆ. ವೆಚ್ಚ ರೂ. 1526.32 ಕೋಟಿ. ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಪ್ಯಾಕೇಜ್ 2: RTO2: M/s L&T Ltd ಒಪ್ಪಂದಕ್ಕೆ 08.03.2019 ರಂದು ಸಹಿ ಮಾಡಲಾಗಿದೆ. ವೆಚ್ಚ ರೂ. 1329.14 ಕೋಟಿ. ಶೇ 100ರಷ್ಟು ಕಾಮಗಾರಿ ಪೂರ್ಣ.

ಪ್ಯಾಕೇಜ್ 3: RT03: M/s L&T Ltd ಒಪ್ಪಂದಕ್ಕೆ 08.03.2019 ರಂದು ಸಹಿ ಮಾಡಲಾಗಿದೆ – ವೆಚ್ಚ ರೂ. 1299. 23 ಕೋಟಿ. ಶೇ98ರಷ್ಟು ಕಾಮಗಾರಿ ಪೂರ್ಣಗೊಂಡಿದೆ

ಪ್ಯಾಕೇಜ್ 4: RT04: M/s ITD Ltd ಒಪ್ಪಂದಕ್ಕೆ 13.12.2019 ರಂದು ಸಹಿ ಮಾಡಲಾಗಿದೆ – ವೆಚ್ಚ ರೂ. 1771.25 ಕೋಟಿ. ಶೇ54ರಷ್ಟು ಕಾಮಗಾರಿ ಪೂರ್ಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶೇ. 80ರಷ್ಟು ‘ನಮ್ಮ ಮೆಟ್ರೋ’ ಸುರಂಗ ಮಾರ್ಗ ಕಾಮಗಾರಿ ಪೂರ್ಣ; ತಲೆ ಎತ್ತಿವೆ 12 ಮೆಟ್ರೋ ನಿಲ್ದಾಣಗಳು; ಎಲ್ಲೆಲ್ಲಿ ಗೊತ್ತಾ?

https://newsfirstlive.com/wp-content/uploads/2023/07/DKS-1.jpg

Load More