ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನ
ಈ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಬಿಗ್ ಶಾಕ್
ಪೆಟ್ರೋಲ್, ಡೀಸೆಲ್ ದರ ದಾಖಲೆ ಮಟ್ಟದಲ್ಲಿ ಏರಿಕೆ!
ಬೆಂಗಳೂರು: ಕಳೆದೊಂದು ತಿಂಗಳಿನಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಕೆಲಸಕ್ಕೆ ಹೋಗುವ ಜನ ಕಾರಿಲ್ಲದೆ ಹೊರಗೆ ಹೋಗಲು ಆಗುತ್ತಲೇ ಇಲ್ಲ. ಹೀಗಾಗಿ ಮಳೆಗಾಲದಲ್ಲೂ ಪೆಟ್ರೋಲ್, ಡೀಸೆಲ್ಗೆ ಭಾರೀ ಡಿಮ್ಯಾಂಡ್.
ಹೌದು, ಪ್ರತಿಯೊಬ್ಬರ ಮನೆಯಲ್ಲೂ ಕಾರು, ಬೈಕ್ ಇದ್ದೇ ಇದೆ. ಯಾರೂ ಈಗ ಬಸ್, ಟ್ಯಾಕ್ಸಿಗಾಗಿ ಹೆಚ್ಚು ಕಾಯಲ್ಲ. ಮನೆಯಿಂದ ಬಸ್ ನಿಲ್ದಾಣಕ್ಕೆ ಆಟೋದಲ್ಲಿ ಕನಿಷ್ಠ 50 ರೂ. ಬೇಕು. ಅದೇ ದುಡ್ಡಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಕೆಲಸಕ್ಕೆ ಎಂಬುದು ಬಹುತೇಕ ಮಂದಿ ಪ್ಲಾನ್.
ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನ ಈಗ ಪೆಟ್ರೋಲ್, ಡೀಸೆಲ್ ಖರೀದಿಗೂ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಮಳೆಗಾಲದಲ್ಲಿ ತರಕಾರಿ ಬೆಲೆ ಏರಿಕೆಯಿಂದ ತೀವ್ರವಾಗಿ ಗಾಯಗೊಂಡಿರೋ ಜನರ ಮೇಲೆ ಪೆಟ್ರೋಲ್, ಡೀಸೆಲ್ ದರ ಬರೆ ಎಳೆದಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 80ಕ್ಕೂ ಹೆಚ್ಚು ಡಾಲರ್‌ಗೆ ತಲುಪಿದೆ. ಇದರ ಪರಿಣಾಮ ಎಂದಿನಂತೆಯೇ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳವಾಗಿದೆ.
ದೇಶದಲ್ಲಿ ಈಗಾಗಲೇ ಪೆಟ್ರೋಲ್, ಡೀಸೆಲ್ ದರ ದಾಖಲೆ ಮಟ್ಟಕ್ಕೇರಿದೆ. ಹಾಗೆಯೇ ಇಂದು ಕೂಡ ದೇಶದ ಎಲ್ಲೆಡೆ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಳಿತ ಕಂಡಿದೆ.
ಭಾರತದ ವಿವಿಧ ಮಹಾ ನಗರಗಳಲ್ಲಿ ಇಂಧನ ಬೆಲೆ ಹೀಗಿದೆ..!
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇಂದು ಪೆಟ್ರೋಲ್ ರೂ. 101.94, ಡೀಸೆಲ್ ದರ ರೂ. 87.89 ಆಗಿದೆ. ಹಾಗೆಯೇ ಚೆನ್ನೈ, ಮುಂಬೈನಲ್ಲಿ ಪೆಟ್ರೋಲ್ ದರ ಕ್ರಮವಾಗಿ ರೂ.102.63, ರೂ. 106.31 ಆಗಿದೆ. ಜತೆಗೆ ಡೀಸೆಲ್ ದರ ಕ್ರಮವಾಗಿ ರೂ. 94.24, ರೂ. 94.27 ಇದೆ. ಇನ್ನು, ಕೊಲ್ಕತ್ತಾ ಮತ್ತು ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ಕ್ರಮವಾಗಿ ರೂ. 106.03, ರೂ. 96.72 ಇದ್ದರೆ, ಡೀಸೆಲ್ ದರ ರೂ. 92.76, ರೂ. 89.62 ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ