newsfirstkannada.com

ಬೀದಿಗೆ ಬಿದ್ದ ಪಾಕಿಸ್ತಾನ.. ಅಬ್ಬಬ್ಬಾ! ಒಂದು ಲೀಟರ್​​ ಡೀಸೆಲ್​​, ಪೆಟ್ರೋಲ್​​​ ಎಷ್ಟು ಗೊತ್ತಾ?

Share :

02-08-2023

    ಪೆಟ್ರೋಲ್​​, ಡೀಸೆಲ್​​ ಬೆಲೆಯಲ್ಲಿ ಭಾರೀ ಏರಿಕೆ..!

    ಸದ್ಯದಲ್ಲೇ ಲೀಟರ್​​ ಬೆಲೆ 300 ದಾಟುವ ಸಾಧ್ಯತೆ

    ಈ ದೇಶದಲ್ಲಿ ಒಂದು ಲೀಟರ್​​ಗೆ 273 ರೂಪಾಯಿ

ಇಸ್ಲಾಮಾಬಾದ್: ನೆರೆರಾಷ್ಟ್ರ ಪಾಕಿಸ್ತಾನ ಆರ್ಥಿಕ ದುಸ್ಥಿತಿಯಿಂದ ಇನ್ನೂ ಸುಧಾರಿಸಿಲ್ಲ. ಹೀಗಾಗಿ ಪದೇ ಪದೇ ಜನರ ಮೇಲೆ ಪಾಕಿಸ್ತಾನ ಸರ್ಕಾರ ಆರ್ಥಿಕ ಬಿಕ್ಕಟ್ಟಿನ ಹೊರೆ ಹೊರಿಸುತ್ತಲೇ ಇದೆ. ಇಂದು ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿದೆ.

ಹೌದು, ಸದ್ಯ ಹೊರಬಿದ್ದಿರೋ ಪ್ರಕಟಣೆ ಪ್ರಕಾರ ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 19.95 ರೂ. ಏರಿಕೆ ಮಾಡಿದೆ. ಹಾಗೆಯೇ ಹೈಸ್ಪೀಡ್ ಡೀಸೆಲ್ ಬೆಲೆ 19.90 ರೂ. ಹೆಚ್ಚಿಸಿ ಆದೇಶಿಸಿದೆ. ಆಗಸ್ಟ್​​ 1ನೇ ತಾರೀಕಿನಿಂದಲೇ ಈ ಪರಿಷ್ಕೃತ ದರ ಜಾರಿಗೆ ಬಂದಿದೆ.

ಪಾಕಿಸ್ತಾನದಲ್ಲೀಗ ಲೀಟರ್​ ಪೆಟ್ರೋಲ್​ ಬೆಲೆ 272.95 ರೂ. ಆಗಿದೆ. ಲೀಟರ್​ ಡೀಸೆಲ್​​ ದರ 273.40 ರೂ. ತಲುಪಿದೆ. ಜನ ಪೆಟ್ರೋಲ್​​, ಡೀಸೆಲ್​ ಬೆಲೆ ಏರಿಕೆಯಿಂದ ಕಂಗಾಲಾಗಿದ್ದು, ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೆ.

ಆಗಸ್ಟ್​​ 1ನೇ ತಾರೀಕಿನಿಂದಲೇ ಜಾರಿ

ಈ ಸಂಬಂಧ ಆದೇಶದ ಹೊರಡಿಸಿರೋ ಪಾಕಿಸ್ತಾನದ ಹಣಕಾಸು ಇಲಾಖೆ, ಹೊಸ ದರಗಳು ಆಗಸ್ಟ್​​ 1ನೇ ತಾರೀಕಿನಿಂದಲೇ ಜಾರಿಯಾಗಿದೆ ಎಂದಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಮತ್ತಷ್ಟ ಸಾಲ ಪಡೆಯೋ ಇರಾದೆ ಹೊಂದಿರುವ ಪಾಕ್​​ ನಿತ್ಯ ಹೇಗೆ ಆರ್ಥಿಕ ದುಸ್ಥಿತಿಯಿಂದ ಹೊರ ಬರೋ ಬಗ್ಗೆ ಚಿಂತಿಸುತ್ತಲೇ ಇದೆ. ಹೀಗಾಗಿ ಈಗಾಗಲೇ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಪಡೆದಿರುವ ಸಾಲವನ್ನು ತೀರಿಸುವ ಪರಿಸ್ಥಿತಿ ಪಾಕಿಸ್ತಾನಕ್ಕೆ ಬಂದೊದಗಿದೆ. ಹಾಗಾಗಿ ದೇಶದಲ್ಲಿ ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ನಿತ್ಯ ಏರಿಸುತ್ತಲೇ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೀದಿಗೆ ಬಿದ್ದ ಪಾಕಿಸ್ತಾನ.. ಅಬ್ಬಬ್ಬಾ! ಒಂದು ಲೀಟರ್​​ ಡೀಸೆಲ್​​, ಪೆಟ್ರೋಲ್​​​ ಎಷ್ಟು ಗೊತ್ತಾ?

https://newsfirstlive.com/wp-content/uploads/2023/07/Petrol_Diesel.jpg

Load More