newsfirstkannada.com

ಸಹೋದರಿಗೆ ಲೈಂಗಿಕ ಕಿರುಕುಳ; ಪ್ರಶ್ನಿಸಿದ್ದಕ್ಕೆ ಬಾಲಕನನ್ನು ಪೆಟ್ರೋಲ್​ ಸುರಿದು ಜೀವಂತ ಸುಟ್ಟು ಹಾಕಿದ ಹಂತಕರು!

Share :

16-06-2023

    ಆಂಧ್ರಪ್ರದೇಶದ ಬಾಪಟ್ಲ ಎಂಬಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ

    ತನ್ನ ಸಹೋದರಿಗೆ ಲೈಂಗಿಕ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ್ದ ಬಾಲಕ (15)

    ಪ್ರಶ್ನಿಸಿದ್ದಕ್ಕೆ ಬಾಲಕನ್ನು ಪೆಟ್ರೋಲ್​ ಸುರಿದು ಸುಟ್ಟು ಹಾಕಿದ ಹಂತಕರು..!

ಬಾಪಟ್ಲ: 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ 15 ವರ್ಷದ ವಿದ್ಯಾರ್ಥಿಯೋರ್ವನನ್ನು ಹಂತಕರು ಜೀವಂತವಾಗಿ ಸುಟ್ಟು ಹಾಕಿದ್ದಾರೆ. 21 ವರ್ಷದ ವೆಂಕಟೇಶ್ವರ್​​ ಎಂಬ ಕಿಡಿಗೇಡಿ ಸೇರಿ ಮೂವರು ಹಂತಕರು ಅಮರ್​ನಾಥ್​​ (15) ಎಂಬ ವಿದ್ಯಾರ್ಥಿಗೆ ಪೆಟ್ರೋಲ್​​ ಸುರಿದು ಜೀವಂತವಾಗಿ ಸುಟ್ಟು ಹಾಕಿದ್ದು, ಈ ಕೃತ್ಯ ಇಡೀ ಆಂಧ್ರಪ್ರದೇಶವನ್ನೇ ಬೆಚ್ಚಿಬೀಳಿಸಿದೆ.

ವೆಂಕಟೇಶ್ವರ್ (21) ಎಂಬ ಹಂತಕ ಅಮರ್​ನಾಥ್​​ ಸಹೋದರಿಗೆ ಲೈಂಗಿಕ ಕಿರುಕುಳ ನೀಡಿದ್ದ. ಇದನ್ನು ಅಮರ್​ನಾಥ್​ ಪ್ರಶ್ನಿಸಿದ್ದಕ್ಕೆ ವೆಂಕಟೇಶ್ವರ್ ಮತ್ತಾತನ ಸ್ನೇಹಿತರು ಸೇರಿ ಈ ಕೃತ್ಯ ಎಸಗಿದ್ದಾರೆ. ಅಮರ್​​ನಾಥ್​​ ಟ್ಯೂಷನ್​ಗೆ ಹೋಗು ಬರುವಾಗ ಪೆಟ್ರೋಲ್​ ಸುರಿದು ಜೀವಂತವಾಗಿ ಸುಟ್ಟು ಹಾಕಿದ್ದಾರೆ.

ಇನ್ನು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಧ್ಯೆ ಆರೋಪಿಗಳ ಬಗ್ಗೆ ಬಾಯಿಬಿಟ್ಟ ಅಮರ್​ನಾಥ್​​ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಆಂಧ್ರಪ್ರದೇಶದ ಬಾಪಟ್ಲ ಎಂಬ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್​​ ದಾಖಲಾಗಿದೆ.

ಆರೋಪಿಗಳ ವಿರುದ್ಧ 2 ಕೇಸ್​​..!

ಈ ಸಂಬಂಧ ಮಾತಾಡಿದ ಹಿರಿಯ ಪೊಲೀಸ್​ ಅಧಿಕಾರಿ ವಾಕುಲ್​​ ಜಿಂದಾಲ್​​, ಆರೋಪಿಗಳನ್ನು ಅರೆಸ್ಟ್​ ಮಾಡಿದ್ದೇವೆ. ವೆಂಕಟೇಶ್ವರ್​ ವಿರುದ್ಧ ಕೊಲೆ ಕೇಸ್​​ ಜತೆಗೆ ಪೋಕ್ಸೋ ಕೂಡ ದಾಖಲು ಮಾಡಿದ್ದೇವೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ಅಪ್ರಾಪ್ತ ಬಾಲಕಿ ಎಂದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸಹೋದರಿಗೆ ಲೈಂಗಿಕ ಕಿರುಕುಳ; ಪ್ರಶ್ನಿಸಿದ್ದಕ್ಕೆ ಬಾಲಕನನ್ನು ಪೆಟ್ರೋಲ್​ ಸುರಿದು ಜೀವಂತ ಸುಟ್ಟು ಹಾಕಿದ ಹಂತಕರು!

https://newsfirstlive.com/wp-content/uploads/2023/06/Crime_1.jpg

Load More