newsfirstkannada.com

ವಾಹನ ಸವಾರರಿಗೆ ಬಿಗ್‌ ಶಾಕ್ ಕೊಟ್ಟ ಸರ್ಕಾರ.. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ; ಎಷ್ಟು? ಯಾವಾಗ ಜಾರಿ?

Share :

Published June 15, 2024 at 4:38pm

  ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆ ಮಾಡಿದ ರಾಜ್ಯ ಸರ್ಕಾರ

  ರಿಟೇಲ್ ಸೇಲ್ಸ್ ಟ್ಯಾಕ್ಸ್ ದರ ಹೆಚ್ಚಳ ಮಾಡಿ ಸರ್ಕಾರದ ಆದೇಶ

  ಟ್ಯಾಕ್ಸ್ ಹೆಚ್ಚಳ ಹಿನ್ನಲೆ ಪೆಟ್ರೋಲ್ ಬೆಲೆ ಎಷ್ಟು ರೂ ಹೆಚ್ಚಳ ಸಾಧ್ಯತೆ

2024ರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ರಾಜ್ಯದ ಜನತೆಗೆ ಶಾಕ್ ನೀಡಿದೆ. ಪೆಟ್ರೋಲ್, ಡಿಸೇಲ್ ದರ ಪ್ರತಿ ಲೀಟರ್​ಗೆ 3 ರೂಪಾಯಿಗೆ ಏರಿಕೆ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ವಾಹನ ಸವಾರರಿಗೆ ಸಿಹಿ ಸುದ್ದಿ; ಪೆಟ್ರೋಲ್​, ಡೀಸೆಲ್ ಬೆಲೆ 2 ರೂಪಾಯಿ ಇಳಿಕೆ; ಇಂದಿನಿಂದ ಅನ್ವಯ

ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ. ಸರಕುಗಳ ಸಾಗಣೆಗೆ ಪೆಟ್ರೋಲ್ ಡಿಸೇಲ್‌ ಅಗತ್ಯವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್‌ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ಆದರೆ ಇದೀಗ ರಾಜ್ಯದ ಜನರಿಗೆ ಸರ್ಕಾರ ತೈಲ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟಿದೆ.

ಟ್ಯಾಕ್ಸ್ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರ ಪ್ರತಿ ಲೀಟರ್​ಗೆ 3 ರೂ ಹೆಚ್ಚಳ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಇಂದು ಮಧ್ಯ ರಾತ್ರಿಯಿಂದಲೇ ಪೆಟ್ರೋಲ್ ಹಾಗೂ ಡಿಸೇಲ್ ದರ ಪ್ರತಿ ಲೀಟರ್​ಗೆ 3 ರೂ 50 ಪೈಸೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಟ್ಯಾಕ್ಸ್ ದರ ಪೆಟ್ರೋಲ್ 25.92% ಇತ್ತು. ಆದರೆ ಈಗ 29.84% ಏರಿಕೆಯಾಗಿದೆ. ಈ ಹಿಂದೆಯಿದ್ದ ಡಿಸೇಲ್ ದರ 14.34%. ಈಗ 18.44 ಏರಿಕೆಯಾಗಿದೆ. ಹಾಗಾದರೇ ಪೆಟ್ರೋಲ್​ ದರದಲ್ಲಿ 3.9 ಪ್ರತಿಶತದಷ್ಟು ಹೆಚ್ಚಾಗಿದೆ. ಇತ್ತ ಡಿಸೇಲ್ ದರ 4.1 ಪ್ರತಿಶತದಷ್ಟು ಏರಿಕೆ ಕಂಡಿದೆ. ರಾಜ್ಯದಲ್ಲಿ 99.84 ರೂಪಾಯಿ ಇದ್ದ ಪೆಟ್ರೋಲ್ ದರ 103.89 ಆಗಿದೆ. 85.56 ರೂಪಾಯಿ ಇದ್ದ ಡಿಸೇಲ್ ದರ ಈಗ 88.90 ರಷ್ಟು ಹೆಚ್ಚಳ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಹನ ಸವಾರರಿಗೆ ಬಿಗ್‌ ಶಾಕ್ ಕೊಟ್ಟ ಸರ್ಕಾರ.. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ; ಎಷ್ಟು? ಯಾವಾಗ ಜಾರಿ?

https://newsfirstlive.com/wp-content/uploads/2023/06/petrol-1-1.jpg

Load More