ಮಧ್ಯಪ್ರದೇಶ ಗೆಲ್ಲಲು ಬಿಜೆಪಿ-ಕಾಂಗ್ರೆಸ್ ಶಸ್ತ್ರಾಭ್ಯಾಸ!
ಕರುನಾಡಲ್ಲಿ ಪೇ ಸಿಎಂ.. ಮಧ್ಯಪ್ರದೇಶದಲ್ಲಿ ಫೋನ್ ಪೇ
ಸಿಎಂ ಮೇಲೆ 50% ಕಮಿಷನ್ ಆರೋಪ ಮಾಡಿದ ‘ಕೈ’!
ಭೂಪಾಲ್: ಪೇ ಸಿಎಂ ಇದು ರಾಜ್ಯ ಕಾಂಗ್ರೆಸ್ಗೆ ಮರುಭೂಮಿಯಲ್ಲಿ ಎಳನೀರು ಸಿಕ್ಕಂತೆ ಮಾಡಿದ್ದ ಅಭಿಯಾನ. ಈ ಪೇ ಸಿಎಂ ಅಸ್ತ್ರವನ್ನ ಬಳಲಿ ರಾಜ್ಯದಲ್ಲಿ ವಿಜಯಲಕ್ಷ್ಮಿ ಒಲಿಸಿಕೊಂಡಿದ್ದ ಕೈಪಡೆ ಮಧ್ಯಪ್ರದೇಶದಲ್ಲೂ ಇದೇ ಅಸ್ತ್ರವನ್ನ ಹೂಡಲು ಮುಂದಾಗಿದೆ. ಆದ್ರೆ ಮೊದಲ ಹೆಜ್ಜೆಯಲ್ಲೇ ಅದೊಂದು ಯಡವಟ್ಟವನ್ನ ಮಾಡಿಕೊಂಡು ಪೇಚಿಗೂ ಸಿಲುಕಿದೆ.
ಕರುನಾಡಲ್ಲಿ ಕಮಾಲ್ ಮಾಡಿ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಕೇಸರಿ ಪಡೆಯನ್ನ ಮಣಿಸಲು ಕೈ ಪಾಳಯದಿಂದ ಚಿಮ್ಮಿದ ಅದೊಂದು ಬ್ರಹ್ಮಾಸ್ತ್ರ ಗೆಲುವಿನ ನಾಗಾಲೋಟಕ್ಕೆ ಶಕ್ತಿ ತುಂಬಿತ್ತು. ಪೇ ಸಿಎಂ ಅನ್ನೋ ಸಕ್ಸಸ್ಫುಲ್ ಅಭಿಯಾನದ ಮೂಲಕ ಬಿಜೆಪಿಗೆ ಟಕ್ಕರ್ ನೀಡಿದ್ದ ಕಾಂಗ್ರೆಸ್ ರಾಜ್ಯದಲ್ಲಿ ಟ್ರೆಂಡ್ ಸೃಷ್ಟಿಮಾಡಿತ್ತು. ಸದ್ಯ ಇದೇ ಪೇ ಸಿಎಂ ಅಸ್ತ್ರವನ್ನ ಮಧ್ಯಪ್ರದೇಶದಲ್ಲೂ ಬಳಸಲು ಕಾಂಗ್ರೆಸ್ ಮುಂದಾಗಿದೆ.

ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಭರ್ಜರಿ ಶಸ್ತ್ರಭ್ಯಾಸ ನಡೆಸಿವೆ. ಕರುನಾಡನ್ನ ಗೆದ್ದ ಹುಮ್ಮಸ್ಸಿನಲ್ಲೇ ಮಧ್ಯಪ್ರದೇಶದಲ್ಲೂ ಗೆಲವು ದಾಖಲಿಸಲು ಕಾಂಗ್ರೆಸ್ ಪಣತೊಟ್ಟಿದೆ. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದೆ. ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ ನೇತೃತ್ವದಲ್ಲಿ ಗೆಲುವಿನ ಇತಿಹಾಸ ಸೃಷ್ಟಿಸಿಲು ದಂಡು ದಾಳಿಯೊಂದಿಗೆ ಲಗ್ಗೆ ಇಟ್ಟಿದೆ.
ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೂಡಿದ್ದ ಪೇ ಸಿಎಂ ಬಾಣ ನಿರೀಕ್ಷೆಗೂ ಮೀರಿ ಸದ್ದು ಮಾಡಿತ್ತು. ಸದ್ಯ ಇದೇ ಅಸ್ತ್ರವನ್ನ ಮಧ್ಯಪ್ರದೇಶದಲ್ಲೂ ಹೂಡಲು ಕಾಂಗ್ರೆಸ್ ಮುಂದಾಗಿದೆ. ಆದ್ರೆ ಪೇ ಸಿಎಂ ಬದಲು ಫೋಸ್ ಪೇ ಅನ್ನೋ ಹೆಸರು ಬಳಸಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಮುಗಿಬಿದ್ದಿದೆ. ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದೆ. ಫೋನ್ ಪೇ ಪೋಸ್ಟರ್ಗಳಲ್ಲಿ ಸಿಎಂ ಪೋಟೋವನ್ನ ಮುದ್ರಿಸಿ ರಾಜಧಾನಿ ಭೂಪಾಲ್ನ ಸಾರ್ವಜನಿಕ ಸ್ಥಳದಲ್ಲಿ ಅಂಟಿಸಿದೆ. ಈ ಬಗ್ಗೆ ಟ್ರೀಟ್ ಸಹ ಮಾಡಿ ಬಿಜೆಪಿಗೆ ಕುಟುಕಿದೆ.
ಇಂದೋರ್ನ ವಿಜಯನಗರದ ಬೀದಿಗಳಲ್ಲಿ ಶಿವರಾಜ್ ಭ್ರಷ್ಟಾಚಾರ. 50% ತನ್ನಿ, ಫೋನ್‌ನಲ್ಲಿ ಕೆಲಸ ಮಾಡಿ. ಮಧ್ಯಪ್ರದೇಶದ ಜನರಿಗೆ ಇದು ಗೊತ್ತು, ಅವರು 50% ಕಮಿಷನ್ ತೆಗೆದುಕೊಳ್ಳುವವರನ್ನು ಗುರುತಿಸುತ್ತಾರೆ.
– ಮಧ್ಯಪ್ರದೇಶ ಕಾಂಗ್ರೆಸ್
ಫೋನ್ ಪೇ ಅಧಿಕೃತ ಲೋಗೋ ಬಳಸಿ ಪೇಚಿಗೆ ಸಿಲುಕಿದ ‘ಕೈ’!
ಫೋನ್ ಪೇ ಅಭಿಯಾನ ಮಾಡೋ ಭರದಲ್ಲಿ ಕಾಂಗ್ರೆಸ್ ಒಂದು ಎಡವಟ್ಟುವನ್ನೂ ಮಾಡಿಕೊಂಡುಬಿಟ್ಟಿದೆ. ರಾಜ್ಯದಲ್ಲಿ ಚಾಣಾಕ್ಷತನದಿಂದ ಕಾನೂನು ತೊಡಕಾದಂತೆ ಕಾಂಗ್ರೆಸ್ ಪೇಟಿಎಂ ಬದಲು ಪೇಸಿಎಂ ಅನ್ನೋ ಪದ ಬಳಸಿ ಗೆದ್ದಿತ್ತು. ಆದ್ರೆ ಇದೇ ದಾರಿಯಲ್ಲಿ ಹೆಜ್ಜೆ ಇಟ್ಟ ಮಧ್ಯಪ್ರದೇಶ ಕಾಂಗ್ರೆಸ್ ಮೊದಲ ಹೆಜ್ಜೆಯಲ್ಲೇ ಎಡವಿಬಿಟ್ಟಿದೆ. ಪೇಸಿಎಂ ಬಸಲು ಫೋನ್ ಪೇ ಎಂಬ ಪದ ಬಳಸಲು ಮುಂದಾದ ಕಾಂಗ್ರೆಸ್ ಯಾವುದೇ ಬದಲಾವಣೆ ಮಾಡದೇ ಫೋನ್ ಪೇ ಲೋಗೋವನ್ನೇ ಬಳಸಿ ಪೋಸ್ಟರ್ ಅಂಟಿಸಿದೆ. ಹೀಗಾಗಿ ಫೋನ್ ಪೇ ಸಂಸ್ಥೆ ಕಾಂಗ್ರೆಸ್ಗೆ ಕಾನೂನು ಕ್ರಮದ ಚಾಟಿ ಬೀಸಿದೆ.
ಫೋನ್ ಪೇ ತನ್ನ ಬ್ರ್ಯಾಂಡ್ ಲೋಗೋದ ಅನಧಿಕೃತ ಬಳಕೆಯನ್ನು ಯಾವುದೇ ಮೂರನೇ ವ್ಯಕ್ತಿಯೊಂದಿಗೆ ಹೊಂದಿಲ್ಲ.. ನಾವು ಯಾವುದೇ ರಾಜಕೀಯ ಅಥವಾ ರಾಜಕೀಯೇತರ ವ್ಯಕ್ತಿಗಳೊಂದಿಗೆ ಮತ್ತು ರಾಜಕೀಯ ಪ್ರಚಾರ ಅಥವಾ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ.
– ಫೋನ್ ಪೇ
ಇನ್ನೂ ಕಾಂಗ್ರೆಸ್ನ ಈ ಫೋನ್ ಪೇ ಅಭಿಯಾನದ ವಿರುದ್ಧ ಬಿಜೆಪಿ ದೂರು ಸಹ ದಾಖಲಿಸಿದೆ.. ಬಿಜೆಪಿ ದೂರಿನನ್ವಯ ಅಪರಿಚಿತ ವ್ಯಕ್ತಿ ಮೇಲೆ ಭೂಪಾಲ್ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿದ್ದಾರೆ.
ಒಟ್ನಲ್ಲಿ ರಾಜ್ಯದಲ್ಲಿ ಪೇ ಸಿಎಂ ಅಭಿಮಾನದ ಮೂಲಕ ಸಕ್ಸಸ್ ಕಂಡ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಮೊದಲ ಹೆಜ್ಜೆಯಲ್ಲೇ ಮುಗ್ಗರಿಸಿದೆ.. ಇದೇ ಅಸ್ತ್ರವನ್ನ ಬಳಸಿಕೊಂಡು ಕೈ ಪಡೆ ಮೇಲೆ ಬಿಜೆಪಿ ಪ್ರತ್ಯಾಸ್ತ್ರ ಹೂಡುತ್ತಾ ಅಂತ ಕಾದುನೋಡಬೇಕಿದೆ.