newsfirstkannada.com

ಇತಿಹಾಸದ ಪುಟಗಳಲ್ಲಿ ದಾಖಲಾದ ಹಳೇ ಸಂಸತ್; ಫೋಟೋ ಸೆಷನ್​ ವೇಳೆ ಹಿಂದಿನ ಸಾಲಿನಲ್ಲಿ ನಿಂತ ರಾಹುಲ್ ಗಾಂಧಿ!

Share :

19-09-2023

  ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಐತಿಹಾಸಿಕ ಹಳೇ ಸಂಸತ್

  ಫೋಟೋ ಸೆಷನ್‌ನಲ್ಲಿ ಯಾವೆಲ್ಲ ಸಂಸದರು ಇದ್ದರು..?

  ನಾಳೆಯಿಂದ ಹೊಸ ಸಂಸತ್​​ನಲ್ಲಿ ಕಾರ್ಯಕಲಾಪ

ಹಳೆಯ ಸಂಸತ್ ಭವನ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಹಾಲಿ ಸಂಸದರಿಗೆ ಇಂದು ಅಲ್ಲಿ ಕೊನೆಯ ದಿನವಾಗಿದ್ದು, ನಾಳೆಯಿಂದ ನೂತನ ಸಂಸತ್ ಭವನದಲ್ಲಿ ಕುಳಿತುಕೊಳ್ಳಲಿದ್ದಾರೆ. ಹಳೆಯ ಭವ್ಯ ಮಂದಿರದಲ್ಲಿ ಕಳೆದ ನೆನಪುಗಳನ್ನು ಉಳಿಸಿಕೊಳ್ಳಲು ‘ಸಂಸದರ ಫೋಟೋ ಸೆಷನ್’ ಆಯೋಜನೆಗೊಂಡಿತ್ತು. ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸಂಸದರು ಗ್ರೂಪ್ ಫೋಟೋಗೆ ಪೋಸ್ ನೀಡಿದರು.

ಫೋಟೋ ಸೆಷನ್‌ನಲ್ಲಿ ಯಾರೆಲ್ಲ ಇದ್ದರು..?

ಉಪರಾಷ್ಟ್ರಪತಿ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕಾಂಗ್ರೆಸ್​ ನಾಯಕ ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮುಂದಿನ ಸಾಲಿನಲ್ಲಿ ಕುಳಿತಿದ್ದರು.

ಹಿಂದಿನ ಸಾಲಿನಲ್ಲಿ ರಾಹುಲ್ ಗಾಂಧಿ..!

ಫೋಟೋ ಸೆಷನ್ ವೇಳೆ ರಾಹುಲ್ ಗಾಂಧಿ, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಫೋಟೋ ಗ್ರೂಪ್ ಫೋಟೋ ಕ್ಲಿಕ್ಕಿಸಿಕೊಳ್ಳುವ ವೇಳೆ ರಾಹುಲ್ ಗಾಂಧಿ ಹಿಂದಿನ ಸಾಲಿನಲ್ಲಿ ನಿಂತಿದ್ದರು. ರಾಹುಲ್ ಏಕೆ ಹಿಂದೆ ನಿಂತಿದ್ದರು ಅನ್ನೋದ್ರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. ಸಂಸದರ ಫೋಟೋ ಸೆಷನ್‌ ಮುಗಿದ ನಂತರ ಸೆಂಟ್ರಲ್‌ ಹಾಲ್‌ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇಲ್ಲಿ ಮೋದಿ ಅವರು ಎಲ್ಲಾ ಸಂಸದರನ್ನು ಭೇಟಿಯಾಗಿ ಶುಭಾಶಯ ತಿಳಿಸಿದರು. ಬ್ರಿಟಿಷರ ಆಳ್ವಿಕೆ, 2ನೇ ಮಹಾಯುದ್ಧ, ಸಂವಿಧಾನ ರಚನೆ ಹಾಗೂ ಹಲವು ಮಸೂದೆಗಳಿಗೆ ಸಾಕ್ಷಿಯಾಗಿದ್ದ 96 ವರ್ಷಗಳಷ್ಟು ಹಳೆಯದಾದ ಸಂಸತ್​ ಭವನ ಇತಿಹಾಸದ ಪುಟ ಸೇರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇತಿಹಾಸದ ಪುಟಗಳಲ್ಲಿ ದಾಖಲಾದ ಹಳೇ ಸಂಸತ್; ಫೋಟೋ ಸೆಷನ್​ ವೇಳೆ ಹಿಂದಿನ ಸಾಲಿನಲ್ಲಿ ನಿಂತ ರಾಹುಲ್ ಗಾಂಧಿ!

https://newsfirstlive.com/wp-content/uploads/2023/09/session-photo.jpg

Load More