newsfirstkannada.com

Video: ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದ ಪಿಕಪ್​ ವಾಹನ; ಮಹಿಳೆಗೆ ಗಾಯ, ಆಸ್ಪತ್ರೆಗೆ ದಾಖಲು

Share :

14-07-2023

    ಹಂಚಿನ ಮನೆಯ ಮೇಲೆ ಬಿದ್ದ ಪಿಕಪ್​ ವಾಹನ

    ಮನೆಯ ಮೇಲೆ ಬಿದ್ದ ಕೋಳಿ ತುಂಬಿದ್ದ ವಾಹನ

    ರಾತ್ರೋ ರಾತ್ರಿ ಅಪಘಾತ; ಮಹಿಳೆಗೆ ಗಾಯ

ಮಂಗಳೂರು: ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಸಾರಡ್ಕ​ ಬಳಿಯ ಕೂರೇಲು ಎಂಬಲ್ಲಿ ನಡೆದಿದೆ. ಪಿಕಪ್ ಮೇಲಿಂದ ಕೆಲಕ್ಕೆ ಬಿದ್ದ ರಭಸಕ್ಕೆ ಹಂಚಿನ ಮನೆ ಸಂಪೂರ್ಣ ಹಾನಿಗೊಳಗಾಗಿದೆ. ಮನೆಯೊಳಕ್ಕಿದ್ದ ಮಹಿಳೆಯೂ ಗಾಯಗಳಾಗಿವೆ.

ಇಂದು ಮುಂಜಾನೆ 4:30 ರ ವೇಳೆಗೆ ಈ ಘಟನೆ ನಡೆದಿದೆ. ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದಿದೆ. ಅದೇ ಮನೆಯ ಕೋಣೆಯಲ್ಲಿ ಮಹಿಳೆಯೊಬ್ಬರು ಮಲಗಿದ್ದರು. ಪಿಕಪ್ ಬಿದ್ದ ರಭಸಕ್ಕೆ ಮನೆಯ ಹಂಚುಗಳೆಲ್ಲಾ ಮಲಗಿದ್ದ ಮಹಿಳೆಯ ಮೇಲೆ ಬಿದ್ದಿದೆ. ಪರಿಣಾಮ ಗಾಯಗಳಾಗಿವೆ.

ಗಾಯಗೊಂಡಿದ್ದ ಮಹಿಳೆಯನ್ನ ಮನೆಯಿಂದ ಹೊರ ತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ. ಅತ್ತ ಕ್ರೇನ್ ಮೂಲಕ ಪಿಕಪ್​ ವಾಹನವನ್ನು ಮೇಲೆತ್ತುವ ಕಾರ್ಯ ನಡೆದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದ ಪಿಕಪ್​ ವಾಹನ; ಮಹಿಳೆಗೆ ಗಾಯ, ಆಸ್ಪತ್ರೆಗೆ ದಾಖಲು

https://newsfirstlive.com/wp-content/uploads/2023/07/vitla.jpg

Load More