ಸುರತ್ಕಲ್ ಬಳಿ ಎಟಿಯಂಗೆ ಕನ್ನ ಹಾಕಿದ್ದ ನಾಲ್ವರು ಕಳ್ಳರು
ಮೊದಲು ಜೆಸಿಬಿ ಕದ್ರು ಆಮೇಲೆ ಎಟಿಯಂ ದೋಚಲು ಮುಂದಾದ್ರು
ಕಳ್ಳರ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ.. ಇಲ್ಲಿದೆ ವಿಡಿಯೋ
ಮೊದಲು ಜೆಸಿಬಿ ಕದ್ದು, ಬಳಿಕ ಅದೇ ಜೆಸಿಬಿ ಬಳಸಿ ಕಳ್ಳರು ಎಟಿಎಂ ಎಗರಿಸಲು ಮುಂದಾದ ಘಟನೆ ಸುರತ್ಕಲ್ನ ಇಡ್ಯಾದ ಬಳಿ ನಡೆದಿದೆ. ನಾಲ್ವರು ಅಂತರಾಜ್ಯ ಕಳ್ಳರು ಈ ಕೃತ್ಯವೆಸಗಿದ್ದು, ಆದರೆ ಅವರ ಯತ್ನ ವಿಫಲವಾಗಿದೆ.
ಎಟಿಯಂ ಗಜ ಕದಿಯಲೆಂದು ಮೊದಲಿಗೆ ಕಳ್ಳರು ಜೆಸಿಬಿ ಕದ್ದಿದ್ದಾರೆ. ಬಳಿಕ ಸೌತ್ ಇಂಡಿಯನ್ ಬ್ಯಾಂಕ್ ಎಟಿಯಂ ಕದಿಯಲು ಜೆಸಿಬಿ ಬಳಸಿದ್ದಾರೆ.
ಮಂಗಳೂರಿನಲ್ಲಿ ಜೆಸಿಬಿ ಬಳಸಿ ATM ಮಷೀನ್ ಹೊತ್ತೋಯ್ಯಲು ಖದೀಮರ ಮಾಸ್ಟರ್ ಪ್ಲಾನ್#ATM #ATMMachine #JCB #Mangaluru #Karnataka #NewsFirstKannada pic.twitter.com/OuLy6mgpCf
— NewsFirst Kannada (@NewsFirstKan) August 21, 2023
ಕಳ್ಳರು ಜೆಸಿಬಿಯನ್ನು ಪಡುಬಿದ್ರೆಯಲ್ಲಿ ಕದ್ದಿದ್ದಾರೆ. ಬಳಿಕ ಜೆಸಿಬಿಯಲ್ಲಿ ಸುರತ್ಕಲ್ನ ಇಡ್ಯಾದ ಬಳಿ ಬಂದು ATM ಎಗರಿಸಲು ಯತ್ನಿಸಿದ್ದಾರೆ. ಕಳ್ಳರ ಕೈಚಳಕವನ್ನು ಕಂಡು ಸರ್ವಲೆನ್ಸ್ ಸಿಸ್ಟಂ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಸುರತ್ಕಲ್ ಠಾಣೆಯ ಪೊಲೀಸರು ನಾಲ್ವರು ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಜೆಸಿಬಿ, 1 ಬೈಕ್, 2 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ