newsfirstkannada.com

Video: ಲ್ಯಾಂಡ್​ ಆಗುವ ವೇಳೆ ಮಹಾ ದುರಂತ.. ಬೆಂಕಿಯ ಕೆನ್ನಾಲಿಗೆಗೆ 10 ಪ್ರಯಾಣಿಕರು ಜೀವಂತ ಭಸ್ಮ

Share :

18-08-2023

  10 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ನೆಲಕ್ಕಪ್ಪಳಿಸಿದೆ

  ವಿಮಾನ ಪತನಗೊಂಡ ನಿಮಿಷಾರ್ಧದಲ್ಲೇ ಬೆಂಕಿ ಆವರಿಸಿದೆ

  ವಿಮಾನಕ್ಕೆ ಬೆಂಕಿ ಹೊತ್ತಿಕೊಂಡ ವಿಡಿಯೋ ಇಲ್ಲಿದೆ

ವಿಮಾನವೊಂದು ಲ್ಯಾಂಡ್​​ ಆಗುವ ವೇಳೆ ಪತನಗೊಂಡ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಇಬ್ಬರು ಸ್ಥಳೀಯರು ಸೇರಿ 10 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ನೆಲಕ್ಕಪ್ಪಳಿಸಿದೆ. ಪರಿಣಾಮ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ. ವಿಮಾನದೊಳಕಿದ್ದ 8 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಲ್ಲಿನ ಪಶ್ಚಿಮದ ರಾಜ್ಯ ಸೆಲಂಗೋರ್​ನಲ್ಲಿ ಈ ಘಟನೆ ನಡೆದಿದೆ. ಅಬ್ದುಲ್​​ ಅಜೀಜ್​​ ಷಾ ವಿಮಾನದಲ್ಲಿ ಲ್ಯಾಂಡ್​​ ಆಗಬೇಕಿದ್ದ ವೇಳೆ ಪತನಗೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ವಿಮಾನ ಸುಟ್ಟು ಕರಕಲಾಗಿದೆ.

ಅಂದಹಾಗೆಯೇ, ಕಾರು ಚಾಲಕನೋರ್ವ ಅದೇ ರಸ್ತೆಯಲ್ಲಿ ಕ್ರಮಿಸುತ್ತಿದ್ದ ವೇಳೆ ವಿಮಾನ ನೆಲಕ್ಕಪ್ಪಳಿಸಿದೆ. ವಿಮಾನ ಪತನಗೊಂಡ ನಿಮಿಷಾರ್ಧದಲ್ಲೇ ಬೆಂಕಿ ಆವರಿಸಿದೆ. ವಿಮಾನ ಹತ್ತಿದ್ದ ಬೆಂಕಿಯ ಜ್ವಾಲೆ ರಸ್ತೆಯಲ್ಲಿ ಕ್ರಮಿಸುತ್ತಿದ್ದ ಕಾರಿನ ಮುಂಭಾಗದವರೆಗೆ ಬಂದಿದೆ. ಕಾರಿನಲ್ಲಿದ್ದ ಕ್ಯಾಮೆರಾದಲ್ಲಿ ಈ ದೃಶ್ಯ ಚೆನ್ನಾಗಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಲ್ಯಾಂಡ್​ ಆಗುವ ವೇಳೆ ಮಹಾ ದುರಂತ.. ಬೆಂಕಿಯ ಕೆನ್ನಾಲಿಗೆಗೆ 10 ಪ್ರಯಾಣಿಕರು ಜೀವಂತ ಭಸ್ಮ

https://newsfirstlive.com/wp-content/uploads/2023/08/plane-crash.jpg

Load More