newsfirstkannada.com

×

ಪ್ರಯಾಣಿಕರಿದ್ದ ವಿಮಾನ ಪತನ; 14 ಜನರು ಸಾವು

Share :

Published September 17, 2023 at 8:35am

Update September 17, 2023 at 9:20am

    ವಿಮಾನ ದುರಂತದಲ್ಲಿ 12 ಮಂದಿ ಪ್ರಯಾಣಿಕರು ಸೇರಿ 2 ಸಿಬ್ಬಂದಿ ಸಾವು

    ಮೃತ ವ್ಯಕ್ತಿಗಳ ಕುಟುಂಬಸ್ಥರಿಗೆ ವಿಷಾದ ವ್ಯಕ್ತ ಪಡಿಸಿದ ಗವರ್ನರ್​

    ಪತನಗೊಂಡ ವಿಮಾನ ಮನೌಸ್​ ಏರೋಟ್ಯಾಕ್ಸಿ ಸಂಸ್ಥೆಯದ್ದು

ವಿಮಾನವೊಂದು ಪತನಗೊಂಡು 14 ಜನರು ಸಾವನ್ನಪ್ಪಿದ ಘಟನೆ ಬ್ರೆಜಿಲ್​​ನಲ್ಲಿ ನಡೆದಿದೆ. ಅಲ್ಲಿನ ಬಾರ್ಸೆಲೋಸ್​ನಲ್ಲಿ ನಡೆದ​ ವಿಮಾನ ದುರಂತದಲ್ಲಿ 12 ಮಂದಿ ಪ್ರಯಾಣಿಕರು ಸೇರಿ 2 ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಗವರ್ನರ್​​ ವಿಲ್ಸನ್​ ಲೀಮಾ ಎಕ್ಸ್​ ವಿಮಾನ ದುರ್ಘಟನೆ ಬಗ್ಗೆ ಬರೆದುಕೊಂಡಿದ್ದು, ಶನಿವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ 12 ಪ್ರಯಾಣಿಕರು ಮತ್ತು 2 ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ನಾನು ತೀವ್ರ ವಿಷಾದಿಸುತ್ತೇನೆ. ಅಪಘಾತದಲ್ಲಿ ಬದುಕುಳಿದವರು ಯಾರು ಇಲ್ಲ. ನಮ್ಮ ತಂಡಗಳು ಕೆಲಸ ಮಾಡುತ್ತಿದ್ದು, ಸಾವನ್ನಪ್ಪಿದ ಪ್ರಯಾಣಿಕರ ಕುಟುಂಬಸ್ಥರಿಗೆ ಮತ್ತು ಸ್ನೇಹಿತರಿಗೆ ವಿಷಾಧ ವ್ಯಕ್ತ ಪಡಿಸುತ್ತೇನೆ’ ಎಂದಿದ್ದಾರೆ.

ಪತನಗೊಂಡ ವಿಮಾನ ಮನೌಸ್​ ಏರೋಟ್ಯಾಕ್ಸಿ ಸಂಸ್ಥೆಯದ್ದಾಗಿದ್ದು, ಸದ್ಯ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಯಾಣಿಕರಿದ್ದ ವಿಮಾನ ಪತನ; 14 ಜನರು ಸಾವು

https://newsfirstlive.com/wp-content/uploads/2023/09/Flight.jpg

Load More