ತಾಯಿಯವರ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು
ರಿಯಲ್ ಎಸ್ಟೇಟ್ನವರಿಗೆ ಎಚ್ಚರಿಕೆಯ ಸೂಚನೆಗಳಿವೆ
ಹಣ ಮತ್ತು ದಾಖಲಾತಿಗಳ ನಷ್ಟದ ಸೂಚನೆಯಿದೆ ಎಚ್ಚರ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ,ಅನುರಾಧ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
- ವ್ಯವಹಾರದಲ್ಲಿ ಖಡಕ್ ನಿರ್ಧಾರ ಮಾಡಬಹುದು
- ಇಂದು ಹಣದ ಲಾಭವಿದೆ
- ಜನರಿಗೆ ನಿಮ್ಮಿಂದ ನಿರೀಕ್ಷೆಗಳು ಈಡೇರಬಹುದು
- ಕುಟುಂಬದ ಬಗ್ಗೆ ಜವಾಬ್ದಾರಿ ತೋರಬೇಕು
- ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ
- ಜನರು ಮನೆಯವರನ್ನ ಹುಡುಕಿಕೊಂಡು ಸಹಾಯಕ್ಕೆ ಬರಬಹುದು
- ಕುಲದೇವತಾ ಆರಾಧನೆ ಮಾಡಿ
ವೃಷಭ
- ಈ ದಿನ ಹೊಸ ಕೆಲಸಕ್ಕೆ ಶುಭವಲ್ಲ
- ಕಾರ್ಯದ ಒತ್ತಡ ಹೆಚ್ಚಿರುತ್ತದೆ
- ಧಾರ್ಮಿಕ ವಿಚಾರದಲ್ಲಿ ತಾತ್ಸಾರ ಬರಬಹುದು
- ದೈಹಿಕ ಮತ್ತು ಮಾನಸಿಕ ಒತ್ತಡ ಹೆಚ್ಚಾಗಬಹುದು
- ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಮಸ್ಯೆ ಇರುವ ದಿನ
- ಅನಪೇಕ್ಷಿತ ಕೆಲಸ ಪ್ರಯಾಣ ಬರಬಹುದು
- ಹನುಮಂತನ ಸೇವೆ, ಹನುಮಾನ್ ಚಾಲೀಸಾ ಪಠಣೆ ಮಾಡಿ
ಮಿಥುನ
- ಪ್ರಭಾವಿಗಳ ಪರಿಚಯದಿಂದ ಉಪಯೋಗವಾಗಬಹುದು
- ಕಾರ್ಯಗಳ ಒತ್ತಡದ ಮಧ್ಯೆಯೂ ಸಾಮಾಜಿಕ ಸೇವೆ ಮಾಡುತ್ತೀರಿ
- ಕುಟುಂಬದವರೊಂದಿಗೆ ಕಳೆಯಲು ಸಮಯಾಭಾವ
- ಶಾಂತಿ ವಾತಾವರಣ ಇರುತ್ತದೆ
- ಮಕ್ಕಳ ಬಗ್ಗೆ ಚಿಂತಿಸಬೇಕಾಗಬಹುದು, ಅಪಕೀರ್ತಿ ಬರಬಹುದು
- ಸಾಯಂಕಾಲದ ಹೊತ್ತಿಗೆ ಬೇಸರವಾಗಬಹುದು
- ದುರ್ಗಾ ಸಪ್ತಶತಿ ಪಾರಾಯಣ ಮಾಡಿ
ಕಟಕ
- ಉದಾರತೆ, ದಾನ ಶೀಲತೆ ನಿಮಗೆ ಹೆಸರು ತರಬಹುದು
- ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಲಾಭವಿದೆ
- ವಿಚಾರಗಳು, ಸಂದರ್ಭಗಳು ಕ್ರಮೇಣ ನಿಮ್ಮ ಪರವಾಗಬಹುದು
- ದಾಂಪತ್ಯದಲ್ಲಿ ವಾದ ಸರಿಯಾಗುತ್ತದೆ
- ಇಂದು ಆಧ್ಯಾತ್ಮಿಕವಾಗಿ ಚಿಂತಿಸಿ
- ತಂದೆಯವರೊಂದಿಗೆ ವ್ಯವಹಾರಿಕ ಚರ್ಚೆ ನಡೆಸಬಹುದು
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಹಿರಿಯರ ಸಲಹೆ ಅಗತ್ಯವಿದೆ
- ಮಾನಸಿಕ ಸ್ಥಿಮಿತತೆ ಇರುವುದಿಲ್ಲ
- ನಿರ್ಲಕ್ಷ್ಯದಿಂದ ಕೆಲಸದ ಗುಣಮಟ್ಟ ತಗ್ಗಬಹುದು
- ಆತ್ಮವಿಶ್ವಾಸದ ಕೊರತೆ ಇರಬಹುದು
- ಬೇರೆಯವರಿಗೆ ನಿಮ್ಮನ್ನ ಹೋಲಿಕೆ ಮಾಡಬಾರದು
- ಚಾಲ್ತಿಯಲ್ಲಿದ್ದ ಕೆಲಸ ಸ್ಥಗಿತವಾಗಬಹುದು
- 12 ಬಾರಿ ಅಶ್ವತ್ಥ ಪ್ರದಕ್ಷಿಣೆ ಹಾಕಿ
ಕನ್ಯಾ
- ಈ ದಿನ ಪ್ರೇಮಿಗಳಿಗೆ ಶುಭವಲ್ಲ
- ಏಕನಕ್ಷತ್ರದ ದಂಪತಿಗಳಿಗೆ ದೀರ್ಘಕಾಲದ ದಾಂಪತ್ಯ ಸಮಸ್ಯೆ
- ಕೆಲಸದಲ್ಲಿ ಸವಾಲುಗಳು ಎದುರಾಗಬಹುದು
- ಮಕ್ಕಳಿಗೆ ನಿರಾಸಕ್ತಿ ಉಂಟಾಗಬಹುದು
- ವಿದ್ಯಾರ್ಥಿಗಳಿಗೆ ಬೇರೆಡೆ ಮನಸ್ಸು ಹೋಗಬಹುದು
- ಅನಾರೋಗ್ಯ ಸಮಸ್ಯೆ ಕಾಡಬಹುದು
- ಅಸಭ್ಯ ಮಾತುಗಳಿಂದ ಜನರು ದೂರವಾಗಬಹುದು
- ಏಕನಕ್ಷತ್ರ ಶಾಂತಿ ಮಾಡಿಸಬೇಕು
ತುಲಾ
- ಹಳೆಯ ವ್ಯವಹಾರದಿಂದ ಲಾಭಾವಿದೆ
- ದಾಂಪತ್ಯದಲ್ಲಿ ಪರಸ್ಪರ ಹೊಗಳುವಿಕೆ, ಹಾಸ್ಯ, ಸಂತೋಷ
- ಕುಟುಂಬದಲ್ಲಿ ಸಂತೋಷದ ವಾತಾವರಣ
- ಸಕಾಲಕ್ಕೆ ಕೆಲಸಗಳಾಗುತ್ತದೆ
- ಆತ್ಮವಿಶ್ವಾಸ ಚೆನ್ನಾಗಿರುತ್ತದೆ
- ಸ್ನೇಹಿತರಿಂದ ಬೇಸರದ ವಿಷಯ ಕೇಳಬಹುದು
- ಇಷ್ಟದೇವತಾ ಆರಾಧನೆ ಮಾಡಿ
ವೃಶ್ಚಿಕ
- ನ್ಯಾಯಾಲಯದ ವಿಚಾರದಲ್ಲಿ ಯಶಸ್ಸು ಸಿಗಬಹುದು
- ನಿಮ್ಮ ತಾರ್ಕಿಕ ಶಕ್ತಿ ಜನರಿಗೆ ಮೆಚ್ಚುಗೆ ಆಗಬಹುದು
- ಹಳೆಯ ಸಮಸ್ಯೆಗಳು ಇತ್ಯರ್ಥವಾಗುತ್ತವೆ
- ತುಂಬಾ ಮಾನಸಿಕ, ಆರ್ಥಿಕ, ಸಾಮಾಜಿಕ ಶಕ್ತಿ ಕಾಣುತ್ತದೆ
- ಉತ್ತಮ ಆಹಾರ ಸೇವನೆ, ಮಾತುಕತೆಗಳು ನಡೆಯುತ್ತವೆ
- ಬೇರೆಯವರ ಭೇಟಿಯು ಉತ್ತಮ ಫಲ ಕೊಡಬಹುದು
- ಹಣದ ಖರ್ಚಿನಿಂದ ಬೇಸರವು ಕಾಡಬಹುದು
- ಈಶ್ವರನ ಆರಾಧನೆ ಮಾಡಿ
ಧನುಸ್ಸು
- ಮಕ್ಕಳಿಂದ ಉತ್ತಮ ವಾತಾವರಣ, ಸಿಹಿ ಸುದ್ದಿ
- ಹಣಕಾಸಿನ ಸಮಸ್ಯೆ ಬಗೆಹರಿಯುತ್ತದೆ
- ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ
- ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಫಲಿತಾಂಶದಿಂದ ಸಂತಸ
- ಭವಿಷ್ಯದ ಬಗ್ಗೆ ಹಲವಾರು ಕನಸುಗಳು ಕಾಣುತ್ತೀರಿ
- ನಿಮ್ಮ ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಶಕ್ತಿ ವೃದ್ದಿಯಾಗಲಿದೆ
- ಮಹಾ ವಿಷ್ಣುವಿನ ಸ್ಮರಣೆ ಮಾಡಿ
ಮಕರ
- ಶೀತ ಸ್ವಭಾವದವರಿಗೆ ತೊಂದರೆ ಇದೆ
- ತಾಯಿಯವರ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು
- ಸರ್ಕಾರಿ ಕೆಲಸಕ್ಕೆ ತೆರಳಿ ಹಿಂದಿರುಗುವ ಸಾಧ್ಯತೆಯಿದೆ ಅದರಿಂದ ಬೇಸರವಾಗಬಹುದು
- ರಿಯಲ್ ಎಸ್ಟೇಟ್ನವರಿಗೆ ಎಚ್ಚರಿಕೆಯ ಸೂಚನೆಗಳಿವೆ
- ಹಣ ಮತ್ತು ದಾಖಲಾತಿಗಳ ನಷ್ಟದ ಸೂಚನೆಯಿದೆ ಎಚ್ಚರ
- ಅಧಿಕಾರ, ಅಹಂಭಾವ ಕುತ್ತು ತರಬಹುದು
- ಇಂದ್ರಾಕ್ಷಿ ದೇವಿಯ ಪ್ರಾರ್ಥನೆ ಮಾಡಿ
ಕುಂಭ
- ದಿನ ಚೆನ್ನಾಗಿದೆ ಖರ್ಚು ನಿಯಂತ್ರಿಸಿ
- ಹಳೆಯ ಸಮಸ್ಯೆಗೆ ಮಂಗಳ
- ಹಳೆಯ ನೆನಪು ಕಾಡುತ್ತವೆ ಬೇಸರವಾಗಬಹುದು
- ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಬಹುದು
- ಮನೆಯಲ್ಲಿ ಒಂಟಿತನ ಕಾಡುತ್ತದೆ
- ಸಾಲಿಗ್ರಾಮ ಮಹಾವಿಷ್ಣುವಿನ ಸ್ಮರಣೆ ಮಾಡಿ
ಮೀನ
- ಸರಳ ಕೆಲಸಗಳು ಪ್ರಯಾಸ ಉಂಟು ಮಾಡಬಹುದು
- ಆರೋಗ್ಯದ ವಿಚಾರದಲ್ಲಿ ಸಮಾಧಾನ
- ಆರ್ಥಿಕವಾಗಿ ತೊಂದರೆ ಇಲ್ಲ, ಹಣ ಉಳಿಸುವಿಕೆಯ ಬಗ್ಗೆ ಚಿಂತೆ
- ನೆರೆಹೊರೆಯವರಿಂದ ಕೆಲ ಸಹಾಯ ಸಿಗಬಹುದು
- ಸಾಧನೆ, ಅನುಭವದ ಬಗ್ಗೆ ಹೆಮ್ಮೆ
- ಎಲ್ಲರೂ ನನ್ನ ಅಂಕೆಯಲ್ಲಿ ಇರಬೇಕೆಂಬುದು ಹೆಚ್ಚಿರುತ್ತದೆ
- ದುರ್ಗಾ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ