/newsfirstlive-kannada/media/post_attachments/wp-content/uploads/2023/11/Modi-and-Richard-Marles.jpg)
ನಾಳೆ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ ಪಂದ್ಯ ನಡೆಯಲಿಕ್ಕಿದೆ. ಗುಜರಾತ್​ನಲ್ಲಿ ಈ ಪಂದ್ಯಾಟ ಏರ್ಪಡಲಿದೆ. ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಈ ಪಂದ್ಯಾಟವನ್ನು ಕಾಣಲು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್​ ಮಾರ್ಲ್ಸ್​ ಕೂಡ ಇರಲಿದ್ದಾರೆ.
ಗುಜರಾತ್​ನ ನರೇಂದ್ರ ಮೋದಿ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯಾಟ ನಡೆಯಲಿಕ್ಕಿದೆ. ಈಗಾಗಲೇ ಪಂದ್ಯದ ಬಗ್ಗೆ ಭಾರೀ ನೀರಕ್ಷೆ ಹುಟ್ಟಿಕೊಂಡಿದೆ. ಪ್ರಧಾನಿ ಮೋದಿ, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ರಿಚರ್ಡ್​ ಮಾರ್ಲ್ಸ್​ ಜೊತೆಗೆ ಭಾರತದ ಗೃಹ ಸಚಿವರಾದ ಅಮಿತ್​ ಶಾ ಕೂಡ ಈ ಪಂದ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ತಂಡಗಳನ್ನು ಹುರಿದುಂಬಿಸಲಿದ್ದಾರೆ.
ಇದನ್ನು ಓದಿ: INDvsAUS: ಮಗನ ಶ್ರಮವನ್ನ ಕೊಂಡಾಡಿದ ಶಮಿ ತಾಯಿ.. ಫೈನಲ್​ ಪಂದ್ಯದ ಬಗ್ಗೆ ಏನಂದ್ರು ಗೊತ್ತಾ?
ದ್ವಿಪಕ್ಷೀಯ ಸಭೆ
ಉಭಯ ನಾಯಕರು ನವೆಂಬರ್​ 20ರಂದು ದ್ವಿಪಕ್ಷೀಯ ಸಭೆ ಕರೆದಿದ್ದಾರೆ. ರಕ್ಷಣಾ ಸಹಕಾರದ ಕುರಿತಾಗಿ ಸಂವಾದ ನಡೆಸಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ವಿದೇಶಾಂಗ ವ್ಯವಹಾರಗಳ ಸಚಿವ ಎಸ್​ ಜೈಶಂಕರ್, ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್​ ಮಾರ್ಲ್ಸ್​​ ಮತ್ತು ವಿದೇಶಾಂಗ ವ್ಯವಹಾರ ಸಚಿವ ಪೆನ್ನಿ ವಾಂಗ್​ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
/newsfirstlive-kannada/media/post_attachments/wp-content/uploads/2023/11/INDvsAUS-1.jpg)
ಏರ್​ ಶೋ ಮತ್ತು ಲೈವ್​ ಕಾರ್ಯಕ್ರಮ
ನಾಳೆ ಭಾರತೀಯ ವಾಯು ಪಡೆ ಸೂರ್ಯ ಕಿರಣ್​ ಅಕ್ರೋಬ್ಯಾಟಿಕ್​ ತಂಡ ಏರ್​ ಶೋ ಪ್ರದರ್ಶಿಸಲಿದೆ. ಮಧ್ಯಾಹ್ನ 1.30ರಿಂದ 1.50ರವರೆಗೆ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇವಿಷ್ಟು ಮಾತ್ರವಲ್ಲದೆ, ಮೋದಿ ಸ್ಟೇಡಿಯಂನಲ್ಲಿ ಸಂಗೀತ ಸಂಯೋಜಕ ಪ್ರೀತಂ ಗಾಯಕರಾದ ಜೊನಿತಾ ಗಾಂದಿ, ನಕಾಶ್​ ಆಜೀಜ್​, ಅಮಿತ್​ ಮಿಶ್ರಾ, ಆಕಾಶ್ ಸಿಂಗ್​, ತುಷಾರ್​ ಜೋಷಿ ಲೈವ್​ ಪ್ರದರ್ಶನ ನಿಡಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us